ಮಾನ್ಯ ವಿಧಾನಸಭಾ ಅಧ್ಯಕ್ಷರಿಗೊಂದು ಪತ್ರ


ಭಾಗ-1
ಮಾನ್ಯರೆ,
ನೀವು ಮೊದಲು ಅಂಕೋಲಾ ಶಾಸಕರಾಗಿ ನಂತರ ಐತಿಹಾಸಿಕ ಬನವಾಸಿ ಹೋಬಳಿಯನ್ನು ಯಲ್ಲಾಪುರ ಕ್ಷೇತ್ರಕ್ಕೆ ಉದ್ದೇಶಪೂರ್ವಕವಾಗಿ ಬಿಟ್ಟುಕೊಟ್ಟ ಪರಿವರ್ತಿತ ಶಿರಸಿ ಕ್ಷೇತ್ರದ ಶಾಸಕರಾಗಿ ಒಟ್ಟೂಐದು ಅವಧಿಗಳನ್ನು ಮುಗಿಸಿ, ಹಿರಿಯ ಶಾಸಕರಾಗಿ ಗೌರವಾನ್ವಿತ ಸಭಾಧ್ಯಕ್ಷರ ಸ್ಥಾನ ಅಲಂಕರಿಸಿದ್ದೀರಿ.
ಸಿದ್ಧಾಪುರ ಶಿರಸಿ ಸೇರಿದಂತೆ ನೀವು ಮತ್ತು ನಿಮ್ಮ ಪಕ್ಷದ ವ್ಯಕ್ತಿಯೇ ಪ್ರತಿನಿಧಿಸುವ ಉತ್ತರ ಕನ್ನಡದ ಜನಪ್ರತಿನಿಧಿತ್ವವನ್ನು ಕಾಲು ಶತಮಾನಕ್ಕಿಂತ ಹೆಚ್ಚು ಅವಧಿಯಿಂದ ಅನುಭವಿಸುತಿದ್ದೀರಿ. ಹಿಂದಿನ ಅವಧಿಯಲ್ಲಿ ನಾವು ವಿರೋಧಪಕ್ಷದಲ್ಲಿದ್ದೇವೆ ಆಡಳಿತ ಪಕ್ಷದವರು ನಮಗೆ ಕೆಲಸಮಾಡಲು ಬಿಡುತ್ತಿಲ್ಲ ಎಂದು ಗೋಳಾಡಿದ್ದನ್ನು ಜಿಲ್ಲೆಯ ಜನ ನೋಡಿದ್ದಾರೆ, ಕೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ವಿಶಾಲ, ವ್ಯಾಪಕ ಭೌಗೋಳಿಕ, ವಿಭಿನ್ನ ಪರಿಸರದ ಜಿಲ್ಲೆ. ಈ ಜಿಲ್ಲೆಯನ್ನು ಎರಡು ಅಥವಾ ಮೂರಾಗಿ ವಿಭಾಗಿಸುವ ಭೌಗೋಳಿಕ ಅನುಕೂಲಗಳಿವೆ. ಆದರೆ ನೀವು ಉ.ಕ. ಉಸ್ತುವಾರಿ, ಶಿಕ್ಷಣ ಸಚಿವರಾಗಿದ್ದಾಗ ಪ್ರಯಾಸದಿಂದ ಶಿರಸಿ ಶೈಕ್ಷಣಿಕ ಜಿಲ್ಲೆ ಮಾಡುವಲ್ಲಿ ಯಶಸ್ವಿಯಾಗಿದ್ದೀರಿ ಆದರೆ ನಿಮ್ಮ ಅವಧಿಯಲ್ಲಿ ಶಿರಸಿ ಪ್ರತ್ಯೇಕ ಜಿಲ್ಲೆ ಮಾಡಲು ಸಾಧ್ಯವಾಗಲಿಲ್ಲ.
ನಿಮ್ಮ ಅನುಕೂಲದ ಪರಿವರ್ತಿತ ಶಿರಸಿ ವಿಧಾನಸಭಾ ಕ್ಷೇತ್ರ, ಶಿರಸಿ ಶೈಕ್ಷಣಿಕ ಜಿಲ್ಲೆ, ಸೇರಿದ ಇತರ ಕೆಲಸಗಳನ್ನು ಮಾಡಿಕೊಳ್ಳಲು ನಿಮಗೆ ಕಷ್ಟವಾಗಲಿಲ್ಲ. ಈಗ ನಮ್ಮ ಜಿಲ್ಲೆಯ ಐತಿಹಾಸಿಕ ಸ್ಥಳ ನೀವು ಉದ್ಧೇಶಪೂರ್ವಕವಾಗಿ ಯಲ್ಲಾಪುರಕ್ಕೆ ಸೇರಿಸಿದ ಬನವಾಸಿ ಹೋಬಳಿಯನ್ನು ನೆರೆಯ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉದ್ದೇಶಿತ ಆನವಟ್ಟಿ ತಾಲೂಕಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಇದೇ ಸಮಯದಲ್ಲಿ ಬನವಾಸಿ, ಸಿದ್ಧಾಪುರಗಳನ್ನು ಉತ್ತರಕನ್ನಡಜಿಲ್ಲೆಯಿಂದ ಪ್ರತ್ಯೇಕಿಸಿ ನಿಮ್ಮ ನಾಯಕರ ಶಿಕಾರಿಪುರ ಜಿಲ್ಲೆಗೆ ಜನಸಂಖ್ಯೆ, ಭೌಗೋಲಿಕ ವ್ಯಾಪ್ತಿ ಮಾಡಿಕೊಳ್ಳುವ ಪ್ರಯತ್ನ ನಡೆದಿದೆಯಂತೆ.
ನಮಗೆ ದೂರದ ಕಾರವಾರಕ್ಕಿಂತ ಸಮೀಪದ ಶಿಕಾರಿಪುರ ಜಿಲ್ಲಾ ಕೇಂದ್ರವಾದರೆ ಅನುಕೂಲವೇ. ಆದರೆ ಉತ್ತರ ಕನ್ನಡದೊಂದಿಗೆ ನಮ್ಮ ಕರುಳು ಬಳ್ಳಿ ಸಂಬಂಧವಿದೆ. ನಮ್ಮ ಶಿರಸಿ-ಸಿದ್ಧಾಪುರದ ಜನರಿಗೆ ಶಿರಸಿಕೇಂದ್ರಿತ ಪ್ರತ್ಯೇಕ ಜಿಲ್ಲೆ ಬೇಕೋ ಕಾರವಾರವೇ ಉಳಿಯಬೇಕೋ ಎಂದರೆ,ಶಿರಸಿ ಪ್ರತ್ಯೇಕ ಜಿಲ್ಲೆ ಬೇಕು ಎನ್ನುತ್ತಾರೆ. ಹಾಗೆಯೇ ನಿಮಗೆ ಕಾರವಾರವೇ ಜಿಲ್ಲಾ ಕೇಂದ್ರವಾಗಿ ಉಳಿಯಬೇಕೋ ಶಿಕಾರಿಪುರ ಜಿಲ್ಲೆಗೆ ನೀವು ಸೇರಲು ಸಿದ್ಧರಿದ್ದೀರಾ? ಎಂದರೆ ಶಿಕಾರಿಪುರ ಓ.ಕೆ. ಕಾರವಾರ ಯಾಕೆ ಎನ್ನುತ್ತಾರೆ?
ಹೀಗೆ ನಮ್ಮ ಕ್ಷೇತ್ರದ ಜನರ ಆದ್ಯತೆ ಶಿರಸಿ ಪ್ರತ್ಯೇಕ ಜಿಲ್ಲೆ ಅಥವಾ ಶಿಕಾರಿಪುರದ ಹೊಸ ಜಿಲ್ಲೆಗೆ ಎನ್ನುವಂತಿದೆ. ಸರ್ಕಾರದ ಸಚಿವರು, ಮಂತ್ರಿಮಂಡಲ ನಿಯಂತ್ರಿಸುವ ನೀವು ನಿಮ್ಮ ಕ್ಷೇತ್ರದ ಜನರ ಭಾವನೆಗೆ ಸ್ಫಂದಿಸುವಂತೆ ಸರ್ಕಾರಕ್ಕೆ ನಿರ್ಧೇಶಿಸಲು ಸಾಧ್ಯವೆ?
ಶಿರಸಿ ಉಪವಿಭಾಗ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ರಸ್ತೆಗಳ ಸ್ಥಿತಿ ಮೂರಾಬಟ್ಟೆಯಾಗಿದೆ. ನೀರಾವರಿ ಅನುಕೂಲಕ್ಕಾಗಿ ಇರುವ ಚಿಕ್ಕ ನೀರಾವರಿ ಇಲಾಖೆ ಶಿರಸಿ ಸಿದ್ಧಾಪುರಗಳು ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ನೂರಾರು ಕೋಟಿ ಕಾಮಗಾರಿ ನಿರ್ವಹಿಸಿದ್ದಾರೆ. ಈ ಕಾಮಗಾರಿಗಳ ಗುಣಮಟ್ಟ ನೋಡಬೇಕಾದರೆ ಸಿದ್ಧಾಪುರದ ಪುಟ್ಟಪ್ಪನ ಕೆರೆ, ಶಿರಸಿಯ ದೇವಿಕೆರೆ ಕಾಮಗಾರಿ ನೋಡಿದರೆ ಸಾಕು ವಾಸ್ತವ ತಿಳಿಯುತ್ತದೆ.
ಚಿಕ್ಕ ನೀರಾವರಿ ಇಲಾಖೆ ಸೆಟಲೈಟ್ ಸರ್ವೇ ಮೂಲಕ ಮಾಡಿದ ಅನೇಕ ಕಾಮಗಾರಿಗಳು ನಿಷ್ಫ್ರಯೋಜಕವೂ, ಅವೈಜ್ಞಾನಿಕವೂ. ಕಳಪೆ ಕೆಲಸಗಳೂ ಆಗಿವೆ. ಈ ಕೆಲಸಗಳ ಬಗ್ಗೆ ನೀವು ವಿಧಾನಸಭೆಯಲ್ಲಿ ತನಿಖೆಗೆ ಒತ್ತಾಯಿಸಲು ಸಾಧ್ಯವೆ?
ಇದೇ ಇಲಾಖೆ ಅರೆಂದೂರು, ಮುಗುದೂರು, ಇಳ್ಳಿಮನೆ ಗಳಲ್ಲಿ ನಿರ್ಮಿಸಿದ ಬಾಂದಾರುಗಳ ನೀರಿನ ಬಾಗಿಲುಗಳನ್ನು ತೆರೆಯದೆ ಪ್ರವಾಹ, ನೆರೆ ಸಂದರ್ಭದಲ್ಲಿ ಆದ ಹಾನಿ ನಿಮ್ಮ ಗಮನಕ್ಕಿರಬಹುದು, ಘನತೆವೆತ್ತ ವಿಧಾನಸಭಾ ಅಧ್ಯಕ್ಷರಾಗಿ ಈ ತೊಂದರೆ, ಕಳಪೆ ಕೆಲಸ, ಜನದ್ರೋಹಿತನದ ಇಲಾಖೆ, ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಸಾಧ್ಯವೆ?
ಒಂದೆರಡು ವಾರಗಳ ಕೆಳಗೆ ನೀವು ಬೇಡ್ಕಣಿಯ ಸ.ಪ್ರ.ದರ್ಜೆ ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆ ಕಾಲೇಜಿನ ಸಮಸ್ಯೆ,ವಿದ್ಯಾರ್ಥಿಗಳ ಬೇಡಿಕೆ ಬಗ್ಗೆ ಪ್ರತಿಕ್ರೀಯಿಸಿ ಎಲ್ಲವೂ ಸಹಜ,ಸರಳ ಎನ್ನುವ ರೀತಿ ಮಾತನಾಡಿದ್ದೀರಿ? ಹಿಂದೆ ಆ ಸರ್ಕಾರಿ ಪದವಿ ಕಾಲೇಜಿನ ಕಟ್ಟಡವನ್ನು ದೂರದ ತ್ಯಾರಸಿ ಬಳಿ ನಿರ್ಮಿಸಲು ಅನುಮತಿ, ಅವಕಾಶ ಕೊಟ್ಟವರು ನೀವಲ್ಲವೆ? ಅಲ್ಲಿಯ ಕೆಲಸಗಳು, ಅನಿವಾರ್ಯತೆಯ ಬಗ್ಗೆ ರಾಜಕೀಯ ಮಾಡಬಾರದೆಂದು ಫರ್ಮಾನು ಹೊರಡಿಸಿದ್ದೀರಿ. ಅಲ್ಲಿ ಕಟ್ಟಡದ ವಿಷಯ, ಆಪ್ತರು, ಉಪನ್ಯಾಸಕರ ನೇಮಕಾತಿ(ವರ್ಗಾವಣೆ) ವಿಷಯಗಳಲ್ಲಿ ರಾಜಕೀಯ ಮಾಡಿದವರು ನೀವೋ ಅಥವಾ ಬೇರೆ ಕಾಣದ ಕೈಗಳೋ?
ನಿಮಗೆ ಬೇಕಾದ ಉಪನ್ಯಾಸಕರು ಆ ಸರ್ಕಾರಿ ಕಾಲೇಜಿಗೆ ಬೇಕು ಎಂದು ಕರೆಸಿಕೊಳ್ಳುವ ನಿಮಗೆ ವಿದ್ಯಾರ್ಥಿಗಳ ಬಸ್ ಬೇಡಿಕೆ, ಬಸ್ ನಿಲ್ಧಾಣದ ಬೇಡಿಕೆ, ರಸ್ತೆ, ಮೈದಾನಗಳಂಥ ಉಪಯುಕ್ತ ವಿಷಯಗಳ ಆಯ್ಕೆಗೆ ಅವಕಾಶ ಮಾಡಿಕೊಡಬೇಕೆಂದು ನಿಮಗೇಕೆ ಅನಿಸುತ್ತಿಲ್ಲ. ಈ ವಿಚಾರಗಳಲ್ಲಿ ರಾಜಕೀಯವನ್ನೇ ಬಳಸಿಕೊಂಡು ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ನಿಮಗ್ಯಾಕೆ ಅಂಥ ಜವಾಬ್ಧಾರಿಯ ಶಾಸಕತ್ವ, ವಿಧಾನಸಭಾಧ್ಯಕ್ಷತೆ?…….

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *