
ಗ್ರಾಮೀಣ ಮತ್ತು ಮುಖ್ಯ ರಸ್ತೆಗಳನ್ನು ಶೀಘ್ರ ದುರಸ್ತಿ ಮಾಡುವಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಇಂದು ಇಲ್ಲಿಯ ತಾ.ಪಂ. ಸಭಾಭವನದಲ್ಲಿ ನಡೆದ (ಗ್ರಾಮೀಣ ರಸ್ತೆಗಳ ಟಾಸ್ಕ್‍ಫೋರ್ಸ್) ನಿರ್ವಹಣಾ ಸಭೆಯಲ್ಲಿ ಮಾತನಾಡಿದ ಅವರು ಶಾಸಕರಾಗಿ ಅದೆಷ್ಟೋ ಬಾರಿ ಅಧಿಕಾರಿಗಳಿಗೆ ಬಹಿರಂಗ ಆದೇಶಮಾಡಿದ ತಮ್ಮ ದಾಖಲೆಯನ್ನೇ ಮುರಿದು ಇಂದು ರಾಜ್ಯ ವಿಧಾನಸಭಾ ಅಧ್ಯಕ್ಷರಾಗಿ ಕಟ್ಟುನಿಟ್ಟಿನ ಆದೇಶ ಮಾಡಿದರು.
ಈ ಆದೇಶ ಇಂಥ ಸಭೆಗಳ ಹಿಂದೆ ಮಾಧ್ಯಮಗಳು, ಸಾರ್ವಜನಿಕರು ಅನೇಕಬಾರಿ ತಾಲೂಕಿನ ರಸ್ತೆಗಳ ಅವ್ಯವಸ್ಥೆಗಳ ಬಗ್ಗೆ ಗಮನ ಸೆಳೆದಿದ್ದರು. ವಿಧಾನಸಭಾಧ್ಯಕ್ಷರ ಈ ಆದೇಶಕ್ಕೆ ಲೋಕೋಪಯೋಗಿ ಮತ್ತು ಜಿ.ಪಂ. ಇಂಜಿನಿಯರಿಂಗ್ ವಿಭಾಗಗಳ ಅಧಿಕಾರಿಗಳು, ಎಂಜಿನಿಯರ್ ಗಳು ಎಂದಿನಂತೆ ಮುಗುಳ್ನಕ್ಕು ಕಾಗೇರಿಯವರ ಆದೇಶವನ್ನು ಸ್ವಾಗತಿಸಿದರು.


