ಆರೋಗ್ಯಕಾರ್ಡ್ ಕಡ್ಡಾಯ, ಸರಳೀಕೃತವಾಗುವವರೆಗೆ ಆಧಾರ್, ಪಡಿತರ ಚೀಟಿಗಳಿಂದಲೂ ಪ್ರಯೋಜನ ಪಡೆಯಬಹುದು!
ಆರೋಗ್ಯ ಕರ್ನಾಟಕ ಚೀಟಿ ವ್ಯವಸ್ಥೆ ಸರಳೀಕರಣಗೊಳ್ಳಲಿದ್ದು ಈ ಕಾರ್ಡ್ ಕಡ್ಡಾಯವಾಗಿ ಪಡೆಯಬೇಕು ಈ ಕಾರ್ಡ್ ಇಲ್ಲದವರು ಆಧಾರ್ ಚೀಟಿ ಮತ್ತು ಪಡಿತರ ಚೀಟಿಗಳಿಂದ ಆರೋಗ್ಯ ಕರ್ನಾಟಕದ 5 ಲಕ್ಷ ರಿಯಾಯತಿ ಪಡೆಯಬಹುದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಇಂದು ಇಲ್ಲಿಯ (ಸಿದ್ಧಾಪುರ) ತಾ.ಪಂ. ಸಭಾಭವನದಲ್ಲಿ ನಡೆದ ಗ್ರಾಮೀಣ ರಸ್ತೆಟಾಸ್ಕ್ ಫೋರ್ಸ್ (ನಿರ್ವಹಣಾ ಸಭೆ) ಸಭೆಯಲ್ಲಿ ಮಾತನಾಡಿದ ಅವರು ಆರೋಗ್ಯ ಕಾರ್ಡ್ ಗೊಂದಲ ತಿಳಿಗೊಳ್ಳಲಿದೆ.ಒಂದು ದಿವಸಕ್ಕೆ 30 ಜನರಿಗೆ ನೀಡಬಹುದಾದ ಈ ಕಾರ್ಡ್ ತಾಲೂಕಿನ ಎಲ್ಲಾ ಜನರಿಗೆ ಸಿಗುವುದು ಯಾವಾಗ? ಎಂದು ಪ್ರಶ್ನಿಸಿದರು.
ಮಳೆ ಮತ್ತು ಪ್ರವಾಹ ಹಾನಿಯ ವಿವರ ಕೇಳಿದ ಕಾಗೇರಿ ತಾಲೂಕಿನಲ್ಲಿ ವಾಡಿಕೆಗಿಂತ 63% ಮಳೆ ಹೆಚ್ಚಾಗಿದ್ದು ಕೆಲವೆಡೆ ನೂರು ಪ್ರತಿಶತ ಮಳೆ ಹೆಚ್ಚು ಬಿದ್ದಿದೆ ಇದರಿಂದ ಭಾದಿತರಾದ 14 ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ದೊರೆಯಲಿದೆ. ಉಳಿದ ಕೆಲವರು ಸರ್ಕಾರ ತೋರಿಸುವ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಳ್ಳುವುದಾದರೆ ಅವರಿಗೂ 5 ಲಕ್ಷ ನೆರವು ನೀಡುತ್ತೇವೆ. ಅರಣ್ಯ ಅತಿಕ್ರಮಣ ಮಾಡಿ ಮನೆ ಮಾಡಿಕೊಂಡವರ ಮನೆಗೆ ತೊಂದರೆಯಾದರೆ ಅವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಧನ ದೊರೆಯಲಿದೆ ಎಂದರು.
ಕೆ.ಡಿ.ಪಿ. ಸಭೆಯಂತಾದ ಶಾಸಕರ ಗ್ರಾಮೀಣ ರಸ್ತೆ ಟಾಸ್ಕ್ ಫೋರ್ಸ್ ಸಭೆ-
ವಿಧಾನಸಭಾ ಅಧ್ಯಕ್ಷ, ಶಾಸಕ ವಿಶ್ವೇಶ್ವರ ಹೆಗಡೆ ಅಧ್ಯಕ್ಷತೆಯ ಗ್ರಾಮೀಣ ರಸ್ತೆ ಟಾಸ್ಕ್ ಫೋರ್ಸ್ ಸಭೆ ಪ್ರಾರಂಭದಲ್ಲಿ ಸಾಮಾನ್ಯ ಕೆ.ಡಿ.ಪಿ. ಸಭೆಯಂತೆನಿಸಿತು. ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಅದಕ್ಕೆ ಪರಿಹಾರ, ಅನುದಾನದ ಮಾತು ಆಡಬೇಕು ಆದರೆ, ಇಂದು ನಡೆದ ಅಧ್ಯಕ್ಷರ ಸಭೆ ಸಾಮಾನ್ಯ ಕೆ.ಡಿ.ಪಿ. ಸಭೆಯಂತೆನಿಸಿತು.
ಈ ಹಿಂದೆ ಇಂಥ ಹಲವಾರು ಟಾಸ್ಕ ಫೊರ್ಸ್ ಸಭೆಗಳೂ ಹೀಗೆ ನಾಮಕಾವಸ್ಥೆ ಆಗಿ ಅವುಗಳ ಪರಿಣಾಮ ಶೂನ್ಯ ಆಗಿದ್ದು ಇತಿಹಾಸ.
ವೈಯಕ್ತಿಕ ಆರೋಗ್ಯ ಕಾರ್ಡೋ? ಕುಟುಂಬದ ಆರೋಗ್ಯ ಕಾರ್ಡೋ-
ಆರೋಗ್ಯ ಕರ್ನಾಟಕ ಚೀಟಿ ಪಡೆಯುವ ಪ್ರಕ್ರೀಯೆ, ಪ್ರಗತಿ ಬಗ್ಗೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ವಿವರ ಪಡೆಯುತಿದ್ದಾಗ ಪ್ರತಿಕ್ರೀಯಿಸಿದ ಶ್ರೀಧರ ಹೆಗಡೆ ಬೈಲಳ್ಳಿ ಬೇರೆ ರಾಜ್ಯಗಳಲ್ಲಿ ಇಡೀ ಕುಟುಂಬಕ್ಕೆ ಒಂದೇ ಆರೋಗ್ಯ ಕಾರ್ಡ್ ಮಾಡಿಸಲಾಗುತ್ತಿದೆ, ಆದರೆ ಇಲ್ಲಿ ಪ್ರತಿ ಸದಸ್ಯನಿಗೆ ಯಾಕೆ ಪ್ರತ್ಯೇಕ ಕಾರ್ಡ್ ಎಂದು ಪ್ರಶ್ನಿಸಿದರು. ಅದಕ್ಕೆ ಸಮರ್ಪಕ ಉತ್ತರ ನೀಡದ ಕಾಗೇರಿ ಇನ್ನೂ ಸರಳವಾಗಲಿದೆ ಎಂದಷ್ಟೇ ಹೇಳಬಲ್ಲೆ ಎಂದು ನುಣುಚಿಕೊಂಡರು.