
ಸಿದ್ಧಾಪುರದ (ಉ.ಕ.) ಹಳೆ ಸ್ಟುಡಿಯೋ ಬೆಟಗೇರಿ ಸ್ಟುಡಿಯೋದ ಸಿರೀಶ್ ಬೆಟಗೇರಿ ರಾಜ್ಯಮಟ್ಟದ ಛಾಯಾಸಾಧಕ ಗೌರವಕ್ಕೆ ಪಾತ್ರರಾಗಿದ್ದಾರೆ.ಇಲ್ಲಿಯ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿದ್ದ ಸಿರೀಶ್ ಸಿದ್ಧಾಪುರದ ಮೊದಲ ಸ್ಟುಡಿಯೋ ಮಾಲಕರು ಮತ್ತು ತಾಲೂಕು ಘಾಯಾಗ್ರಾಹಕರ ಸಂಘದ ಮೊದಲ ಅಧ್ಯಕ್ಷರು. ಬಹುಮುಖಿಯಾಗಿರುವ ಸಿರೀಶ್, ಅವರ ಕುಟುಂಬದ ಕಲೆ,ಸಾಹಿತ್ಯ, ಸಾಸ್ಕøತಿಕತೆಗಳ ರಾಯಭಾರಿ 1975 ರಿಂದ ಛಾಯಾಗ್ರಾಹಕರಾಗಿ ಕೆಲಸಮಾಡುತ್ತಿರುವ ಇವರ ಕೆಳಗೆ ಈವರೆಗೆ 60 ಕ್ಕೂ ಹೆಚ್ಚು ಜನರು ತರಬೇತಿ ಪಡೆದು ಈಗ ಛಾಯಾಗ್ರಾಹಕರಾಗಿ ಕೆಲಸಮಾಡುತಿದ್ದಾರೆ. ಶನಿವಾರ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘ ಬೆಂಗಳೂರಿನಲ್ಲಿ ನಡೆಸಿದ ಸಮಾರಂಭದಲ್ಲಿ ಉತ್ತರ ಕನ್ನಡದಿಂದ ಸಿರೀಶ್ ಬೆಟಗೇರಿಯವರನ್ನು ಛಾಯಾಸಾಧಕ ಎಂದು ಗೌರವಿಸಿ, ಅಭಿನಂದಿಸಲಾಯಿತು.

