(ಕಳೆದು ಹೋದವರು)
ಆಗಾಗ ಕಾಡುವ ಆಮುಖ
ಅಜ್ಜನದೋ, ಮತ್ತಜ್ಜನದೋ?
ಯಾರದಿರಬಹುದು?
ನಾ ನೋಡೇ ಇಲ್ಲ ಅಬರಿಬ್ಬರನ್ನೂ
ಮರೆತರೂ ಮತ್ತೆ ಮತ್ತೆ ನೆನಪಾಗುವ
ಮುಖವಾಡದಂಥ ಮುಖ
ದೆವ್ವ-ಭೂತಗಳದ್ದಿರಬಹುದೆ?
ಧರ್ಮದ ಅಮಲಿನಲ್ಲಿ ಚಾಕು,
ಚೂರಿ-ಬಂದೂಕು ಎತ್ತಿದವರ ಮುಖ ಹೀಗಿರಲಿಲ್ಲವಲ್ಲ
ಮತ್ತೆ ಮತ್ತೆ ಕಾಣುವ ಮುಖ,
ಮುಖವಾಡ
ಮತ್ತೆಂದೂ ಸೇರೆನೆಂದು ಸಂಬಂಧದ ಬಂಧ
ಹರಿದು ಹೋದವಳದೆ?
ಮೊದಲ ನೋಟಕ್ಕೇ ಆಕರ್ಷಿಸಿ ಮತ್ತೆಂದೂ
ಕಾಣದೆ ಇನ್ನೊಬ್ಬನನ್ನು ಓಡಿಸಿಕೊಂಡು
ಹೋದವಳದೆ?
ಮೆರವಣಿಗೆ ಬಿಂಬದಲ್ಲೂ ಅವಳ
ರೂಪದ್ದೇ ಛಾಯೆ,
ಕೈಕೊಟ್ಟ ಕರೆಂಟು
ಕದಲಿಸಿದ ಮುಖ ಅವಳದ್ದೇ ಇರಬಹುದೆ?
ಈ ರಾತ್ರಿ ಕಂಡ ಮುಖ ಯಾರದ್ದೋ
ನಮ್ಮದೇ ಇರಬಹುದು,
ಪರಕೀಯರು ದೆವ್ವ-ಭೂತಗಳಾಗಿ ಕಾಡುವುದಿಲ್ಲವಂತೆ
ನಮ್ಮವೇ ಕಳ್ಳು-ಬಳ್ಳಿಗಳಂತೆ
ನಿತ್ಯ,ಅನವರತ.
ಕೋಲಶಿರ್ಸಿ ಕನ್ನೇಶ್, ಸಿದ್ಧಾಪುರ,
(ಉ.ಕ.) 9740598884