
ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದ ಜಯರಾಮ ಎಂ ನಾಯ್ಕ ಬೇಡ್ಕಣಿ (ಠಾಣೆಗೇರಿ) ಯವರ ಮನೆಗೆ ಬಂದಿದ್ದ ಸುಮಾರು 8 ಅಡಿ ಉದ್ದವಿರೋ ಕಾಳಿಂಗ ಸರ್ಪವನ್ನ ಹಿಡಿದು ಕಾಡಿಗೆ ಬಿಡಲಾಯಿತು.
ಸುಮಾರು ಬೆಳಿಗ್ಗೆ 11 ಗಂಟೆ ಹೊತ್ತಿಗೆ ಜಯರಾಮರ ಮನೆಯ ಅಂಗಳದಲ್ಲಿ ಕಾಳಿಂಗ ಸರ್ಪ ಬಂದು ಹಂಚಿನ ಅಡಿಯಲ್ಲಿ ಅಡಗಿ ಕುಳಿತಿತ್ತು. ಇದನ್ನು ನೋಡಿದ ಮನೆಯವರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಆರ್.ಡಿ.ಎಫ್.ಓ ಮಂಜುನಾಥ್, ಶಿರಸಿಯ ಉರಗ ತಜ್ಞ ಮನೋಹರ್ ರನ್ನು ಕರೆಸಿ ಕಾಳಿಂಗ ಸರ್ಪ ವನ್ನ ಹಿಡಿಯುವಲ್ಲಿ ಯಶಸ್ವಿಯಾದರು
. ಸೆರೆಹಿಡಿದ ಕಾಳಿಂಗ ಸರ್ಪವನ್ನ ಸಮೀಪದ ಕತ್ತಲೇಕಾನಿಗೆ ಬಿಡಲಾಯಿತು



