
breaking news-
visit- samajamukhi.net
ಹಿಂದಿ ಸಾಧಕರಿಗೆ ಸನ್ಮಾನ,ಕನ್ನಡಿಗರಿಗೆ ಅವಮಾನ
ಹಿಂದಿ ವಿವಾದ ಸ್ವಾರ್ಥಿಗಳ ಯತ್ನ
-ವಿಧಾನಸಭಾಧ್ಯಕ್ಷರು
ಕಾಗೇರಿ ಕಾಂಗ್ರೆಸ್ ವಿರುದ್ಧವೋ?
ಕನ್ನಡ ಸಂಘಟನೆಗಳ ವಿರುದ್ಧವೋ
ಹಿಂದಿ ವಿವಾದ ಸ್ವಾರ್ಥಿಗಳ ಯತ್ನ
-ವಿಧಾನಸಭಾಧ್ಯಕ್ಷರು
ಕಾಂಗ್ರೆಸ್ ವಿರುದ್ಧವೋ?
ಕನ್ನಡ ಸಂಘಟನೆಗಳ ವಿರುದ್ಧವೋ
ಹಿಂದಿ ದಿವಸ ಆಚರಣೆ ಮತ್ತು ಹಿಂದಿ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಭಾಷಣದುದ್ದಕ್ಕೂ ಹಿಂದಿ, ಹಿಂದಿ ವಿಚಾರದ ವಿವಾದದ ಬಗ್ಗೆ ಮಾತನಾಡುತ್ತಾ ಬಿ.ಜೆ.ಪಿ. ನಿಲುವನ್ನು ಸಮರ್ಥಿಸಿದರು. visit-samajamukhi.net
ನಂಬಿಕೆ, ಭಾಷೆ, ಗಡಿ, ನೀರು ಆಹಾರದ ಹಿನ್ನೆಲೆಯಲ್ಲಿ ಸ್ವಾರ್ಥಕ್ಕಾಗಿ ವಿವಾದ ಎಬ್ಬಿಸುತ್ತಾರೆ ಎಂದು ದೂರಿದರು. ವಿಧಾನಸಭಾಧ್ಯಕ್ಷರು ಪಕ್ಷಾತೀತ ನಿಲುವು ತಾಳದೆ ಲೋಪ ಎಸಗುವ ಜೊತೆಗೆ ಹಿಂದಿ ಭಾಷೆಯ ವಿವಾದಕ್ಕೆ ನೆಲ, ಜಲ, ಗಡಿ, ಆಹಾರ,ಭಾಷೆ ಬಳಸಿಕೊಳ್ಳುವ ಕೆಲವು ಸ್ವಾರ್ಥಿಗಳು ಕಾರಣ ಎಂದು ಕಾಂಗ್ರೆಸ್ ಅಥವಾ ರಾಜ್ಯದ ಕನ್ನಡ ಸಂಘಟನೆಗಳನ್ನು ಹೆಸರು ಹೇಳದೆ ತಿವಿದರು.
ವಿಧಾನಸಭೆಯ ಅಧ್ಯಕ್ಷರಾಗಿ ಕಾಂಗ್ರೆಸ್ ಅಥವಾ ಕನ್ನಡ ಸಂಘಟನೆಗಳ ಅಭಿಮಾನ, ಕನ್ನಡಪರ ಹೋರಾಟವನ್ನು ಸ್ವಾರ್ಥಿಗಳ ಪ್ರಯತ್ನ ಎಂದ ಹೇಳಿಕೆಯನ್ನು ಕೆಲವು ಮಾಧ್ಯಮ ಪ್ರತಿನಿಧಿಗಳು ದಾಖಲೆಮಾಡಿಕೊಂಡಿದ್ದು ಇದು ವಿವಾದವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಸಿದ್ಧಾಪುರ,ಸೆ.17- ಪ್ರಾದೇಶಿಕ ಭಾಷೆಗಳಿಗೆತೊಂದರೆಯಾಗುತ್ತಿರುವುದು ಇಂಗ್ಲೀಷ್‍ನಿಂದಲೇ ಹೊರತು ಹಿಂದಿಯಿಂದಲ್ಲ ಎಂದು ಬಿ.ಜೆ.ಪಿ. ಅಭಿಪ್ರಾಯವನ್ನು ಪುನರುಚ್ಚರಿಸಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿವಿಧತೆಯಲ್ಲಿ ಏಕತೆ ಕಾಣುವ ಸಂವಿಧಾನದ ಆಶಯದಂತೆ ರಾಷ್ಟ್ರದಲ್ಲಿ ಆಡಳಿತ ಭಾಷೆಯಾಗಿ ಹಿಂದಿ, ರಾಜ್ಯದಲ್ಲಿ ಕನ್ನಡ ಅಸ್ಥಿತ್ವದಲ್ಲಿವೆ ಇವುಗಳಿಗಿಂತ ಪ್ರತಿಯೊಬ್ಬರಿಗೂ ಇರುವ ಮಾತ್ರ ಭಾಷೆಯ ಸ್ಥಾನ ದೊಡ್ಡದು ಎಂದು ಪ್ರತಿಪಾದಿಸಿದ್ದಾರೆ.
ಸಿದ್ಧಾಪುರದ ಶಂಕರಮಠ ಸಭಾಭವನದಲ್ಲಿ ನಡೆದ ಹಿಂದಿ ದಿನ ಆಚರಣೆ ಮತ್ತು ಹಿಂದಿ ಭಾಷಾ ಶಿಕ್ಷಕರ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಮಾತೃಭಾಷೆಗೆ ಮೊದಲ ಆದ್ಯತೆ ನಂತರ ರಾಷ್ಟ್ರದ ಆಡಳಿತ ಭಾಷೆಗೂ ಗೌರವ ನೀಡಬೇಕು ಎಂದರು.
ವಿವಾದ ಯಾವುದೇ ವಿಷಯಕ್ಕೂ ಮಾಡಬಹುದು. ಇಂಗ್ಲೀಷ ವ್ಯಾಮೋಹ ಬೆಳೆಸಿಕೊಂಡವರು ಹಿಂದಿ ವಿಷಯದಲ್ಲಿ ವಿವಾದ ಮಾಡುವುದೇಕೆ? ಎಂದು ಪ್ರಶ್ನಿಸಿದ ಕಾಗೇರಿ ಗಡಿ,ನೀರು, ಭಾಷೆ, ಆಹಾರ, ನಂಬಿಕೆ ಗಳ ಹಿನ್ನೆಲೆಯಲ್ಲಿ ಸ್ವಾರ್ಥ ಸಾಧಿಸಿಕೊಳ್ಳುವವರು ವಿವಾದ ಮಾಡುತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಹಿಂದಿ ಭಾಷೆಯ ಬೆಳವಣಿಗೆಗೆ ಸೇವೆ ಸಲ್ಲಿಸಿದ ಕೆಲವು ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು.


