
ಸಿದ್ಧಾಪುರ ತಾಲೂಕು ಸಂಪೂರ್ಣ ನೆರೆ ಪೀಡಿತ ಪ್ರದೇಶವಾಗಿರುವುದರಿಂದ ರೈತರಿಂದ ಪ್ರತ್ಯೇಕ ಅರ್ಜಿ ಪಡೆಯದೆ ಸಾಮೂಹಿಕವಾಗಿ ಮಳೆಪರಿಹಾರ ನೀಡಬೇಕು ಎಂದು ರಾಜ್ಯ ರೈತಸಂಘ ಒತ್ತಾಯಿಸಿದೆ.
ಇಲ್ಲಿಯ ಖಾಸಗಿ ಹೋಟೆಲ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ಸದಸ್ಯರು ಸರ್ಕಾರ ಸರಿಯಾಗಿ ಬೆಳೆಹಾನಿ ಸಮೀಕ್ಷೆ ನಡೆಸಿಲ್ಲ, ರೈತರು ಭತ್ತ, ಅಡಿಕೆ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಈ ರೈತರಿಗೆ ಬಡ್ಡಿರಹಿತ ಸಾಲ ನೀಡುವುದು ಮತ್ತು ವೈಜ್ಞಾನಿಕ ಪರಿಹಾರ ನೀಡುವ ಮೂಲಕ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ಈ ಸುದ್ದಿಗೋಷ್ಠಿಯ ಪ್ರಮುಖಾಂಶಗಳು-
ಬಿಳಗಿ ನೆಮ್ಮದಿ ಕೇಂದ್ರದಲ್ಲಿ ಸರಿಯಾಗಿ ಕೆಲಸ ನಡೆಯುತ್ತಿಲ್ಲ, ಬಿಳಗಿಯಿಂದ ಹಲಗೇರಿಗೆ ಕೆಲಸಕ್ಕಾಗಿ ರೈತರನ್ನು ಅಲೆಸುವ ರೂಢಿ ತಪ್ಪಬೇಕು- ಗೋವಿಂದ ಗೌಡ, ರೈತ.
ಒಂದು ಎಕರೆ ಅಡಿಕೆಗೆ 2 ಲಕ್ಷ, ಒಂದು ಎಕರೆ ಭತ್ತಕ್ಕೆ ಒಂದು ಲಕ್ಷ ಪರಿಹಾರ ಮತ್ತು ಶೇ.3 ಬಡ್ಡಿದರದ ಕೃಷಿ ದೀರ್ಘಾವಧಿ ಸಾಲ ನೀಡುವ ಮೂಲಕ ಸರ್ಕಾರ ರೈತರ ನೆರವಿಗೆ ಬರಬೇಕು
-ಪಿ.ವಿ.ಹೆಗಡೆ, ರೈತ ಮುಖಂಡ
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಡಿಕೆ ತೋಟ,ಭತ್ತದ ಗದ್ದೆಗಳ ಪುನಶ್ಚೇತನಕ್ಕೆ ಕ್ರೀಯಾ ಯೋಜನೆಗೆ ಅವಕಾಶ ನೀಡಲು ಕೋರಿ ಜಿ.ಪಂ. ಗೆ ಪತ್ರ ಬರೆಯುತ್ತೇವೆ,ಭತ್ತ, ಅಡಿಕೆ, ಕಾಳುಮೆಣಸು,ಶುಂಠಿ ಸೇರಿದಂತೆ ಬೆಳೆಹಾನಿ ಪರಿಹಾರಕ್ಕೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇವೆ. ಇಡೀ ತಾಲೂಕನ್ನು ಅತಿವೃಷ್ಟಿ ಬಾಧಿತ ತಾಲೂಕೆಂದು ಘೋಶಿಸಬೇಕು,ಎಲ್ಲರಿಗೂ ಸಾಮೂಹಿಕವಾಗಿ ಪರಿಹಾರ ನೀಡಬೇಕು
- ವೀರಭದ್ರನಾಯ್ಕ, ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ
ತಾಲೂಕಿನಲ್ಲಿ ಭೂಹಿಡುವಳಿದಾರರಂತೆ ಅರಣ್ಯ ಅತಿಕ್ರಮಣ ಸಾಗುವಳಿದಾರರೂ ತೊಂದರೆಗೆ ಒಳಗಾಗಿದ್ದಾರೆ. ಅವರಿಗೆ ಸೂಕ್ತ ಪರಿಹಾರ ನೀಡಬೇಕು ತಾಲೂಕಿನ ಸ್ತ್ರೀಶಕ್ತಿ-ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ಸರ್ಕಾರ ನೆರವಿಗೆ ಬರಬೇಕು.
-ಸವಿತಾ ನಾಯ್ಕ, ವಾಜಗೋಡು ಪಂಚಾಯತ್ ಸದಸ್ಯೆ ಹಿಂದಿ ಸಾಧಕರಿಗೆ ಸನ್ಮಾನ,ಕನ್ನಡಿಗರಿಗೆ ಅವಮಾನ
ಹಿಂದಿ ವಿವಾದ ಸ್ವಾರ್ಥಿಗಳ ಯತ್ನ
-ವಿಧಾನಸಭಾಧ್ಯಕ್ಷರು
ಕಾಗೇರಿ ಕಾಂಗ್ರೆಸ್ ವಿರುದ್ಧವೋ?
ಕನ್ನಡ ಸಂಘಟನೆಗಳ ವಿರುದ್ಧವೋ
ಹಿಂದಿ ವಿವಾದ ಸ್ವಾರ್ಥಿಗಳ ಯತ್ನ
-ವಿಧಾನಸಭಾಧ್ಯಕ್ಷರು
ಕಾಂಗ್ರೆಸ್ ವಿರುದ್ಧವೋ?
ಕನ್ನಡ ಸಂಘಟನೆಗಳ ವಿರುದ್ಧವೋ
ಹಿಂದಿ ದಿವಸ ಆಚರಣೆ ಮತ್ತು ಹಿಂದಿ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಭಾಷಣದುದ್ದಕ್ಕೂ ಹಿಂದಿ, ಹಿಂದಿ ವಿಚಾರದ ವಿವಾದದ ಬಗ್ಗೆ ಮಾತನಾಡುತ್ತಾ ಬಿ.ಜೆ.ಪಿ. ನಿಲುವನ್ನು ಸಮರ್ಥಿಸಿದರು.

