
samajamukhi- exclusive
ಬೂತ್‍ಮಟ್ಟದ ಅಧಿಕಾರಿಯಾಗಲು ಶಿಕ್ಷಕರ ನಿರಾಕರಣೆ
ಶಿಕ್ಷಕ-ಶಿಕ್ಷಕಿಯರ ಅಸಹಕಾರದ ನಡುವೆ ಸ್ಫೆಷಲ್‍ಡ್ರೈವ್‍ಗೆ ಅಡಚಣೆ
ಶಿಕ್ಷಕ ಶಿಕ್ಷಕಿಯರಿಗೆ ಕೆಲಸದ ಒತ್ತಡದ ನಡುವೆ ಚುನಾವಣೆಯ ಮತದಾರರ ಪಟ್ಟಿ ತಯಾರಿಕೆಯ ಹೆಚ್ಚುವರಿ ಕೆಲಸ ಅಪೇಕ್ಷಣೀಯವಲ್ಲ, ಭಾರತದಲ್ಲಿ ಗ್ರಾಮಗಳಲ್ಲಿ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿರುವ ಯುವಕರ ಪಡೆಯೇ ಇದೆ. ಈ ವಿದ್ಯಾವಂತ ನಿರುದ್ಯೋಗಿಗಳನ್ನು ಬಳಸಿಕೊಂಡು ಮತದಾರರ ಪಟ್ಟಿ ತಯಾರಿಸಬಹುದು. ಸಿದ್ಧಾಪುರ, ಶಿರಸಿ-ಸಾಗರ ಸೇರಿದಂತೆ ಬಹುತೇಕ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮತದಾರರ ಪಟ್ಟಿಗಾಗಿ ಶಿಕ್ಷಕ,ಶಿಕ್ಷಕಿಯರು ಅಲೆಯುವುದು ಕಷ್ಟ, ಹಾಗಾಗಿ ಶಿಕ್ಷಕ-ಶಿಕ್ಷಕಿಯರ ಈ ಹೆಚ್ಚುವರಿ ಕೆಲಸ ನಿಲ್ಲಿಸಬೇಕು.
- ಎಂ.ಕೆ.ನಾಯ್ಕ ಕಡಕೇರಿ, ಪ್ರಾ.ಶಾ.ಶಿ.ಸಂಘದ
ತಾಲೂಕಾ ಅಧ್ಯಕ್ಷ
ಕುಮಾರ ನಾಯ್ಕ ಜಿಲ್ಲಾಮಟ್ಟಕ್ಕೆ ಆಯ್ಕೆ
ಸಿದ್ಧಾಪುರ,ಸೆ.18-ಇಲ್ಲಿಯ ಅವರಗುಪ್ಪಾ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕುಮಾರ ನಾಯ್ಕ ಗುಂಡು ಎಸೆತ,ಚಕ್ರ ಎಸೆತಗಳಲ್ಲಿ ಕ್ರಮವಾಗಿ ಮೊದಲ,ದ್ವಿತಿಯ ಸ್ಥಾನಗಳನ್ನು ಗಳಿಸಿ ತಾಲೂಕಿನಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಶುಕ್ರವಾರ ಸಾರಿಗೆ ಅದಾಲತ್ ಇಲ್ಲದಿದ್ದರೆ ಪ್ರತಿಭಟನೆ
ಸಿದ್ಧಾಪುರ ತಾಲೂಕಿನ ಸಾರಿಗೆ ತೊಂದರೆ ಬಗೆಹರಿಸಲು ಇದೇ ಸೆ.20 ರ ಶುಕ್ರವಾರ ಸಾರಿಗೆ ಅದಾಲತ್ ನಡೆಸಲು ಸಿದ್ಧಾಪುರ ತಾ.ಪಂ.ಸಾರಿಗೆ ಇಲಾಖೆಗೆ ಆದೇಶಿಸಿದೆ. ತಾಲೂಕಿನ ಸಾರಿಗೆ ಸಮಸ್ಯೆಗಳ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ತಾಲೂಕು ಪಂಚಾಯತ್ ಒತ್ತಡ, ಮನವಿ ದಿಕ್ಕರಿಸಿರುವ ಅಧಿಕಾರಿಗಳು ಈ ಸಮಯಮಿತಿಯಲ್ಲಿ ಸಾರಿಗೆ ಅದಾಲತ್ ನಡೆಸದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಪ್ರತಿಭಟನೆ ಮಾಡುವುದಾಗಿ ತಾ.ಪಂ. ಅಧ್ಯಕ್ಷ ಸುಧೀರ್ ಗೌಡರ್ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಎಚ್ಚರಿಸಿದ್ದಾರೆ.
ಸಾರಿಗೆ ಕಾಯಿದೆ ಬದಲಾವಣೆಗೆ ಆಗ್ರಹ
ದುಬಾರಿ ದಂಡದಿಂದ ಜನಸಾಮಾನ್ಯರಿಗೆ ತೊಂದರೆ ಆಗುತಿದ್ದು, ಕೇಂದ್ರದ ಮೋಟಾರ್ ವಾಹನ ಕಾಯಿದೆ ತಿದ್ದುಪಡಿ ಅಥವಾ ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಜೆ.ಡಿ.ಎಸ್. ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ್ ಶೇಖ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿರುವ ಅವರು ಗೋವಾ, ಗುಜರಾತ್ ಗಳಲ್ಲೇ ಕೇಂದ್ರದ ಅವೈಜ್ಞಾನಿಕ ವಸೂಲಿ ಕಾಯಿದೆ ಧಿಕ್ಕರಿಸಲಾಗಿದೆ. ಇಂಥ ಕಾಯಿದೆ ಜಾರಿ ಮಾಡಿ ಜನಸಾಮಾನ್ಯರನ್ನು ಹಿಂಸಿಸುವ ಬದಲು ಕಾಯಿದೆಗೆ ಬದಲಾವಣೆ ತಂದು ಅನುಷ್ಠಾನ ಮಾಡಬೇಕೆಂದು ಅವರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಆಗ್ರಹಿಸಿದ್ದಾರೆ.

