
sdp-spl-record
ಸಿದ್ಧಾಪುರದ ಬಾಲೆ ಕರ್ನಾಟಕ ವಿಶ್ವವಿದ್ಯಾಲಯದ ತಾರೆ
ಸಿದ್ಧಾಪುರ ಮೂಲದ ಪಲ್ಲವಿ ಅಪ್ಪಿನಬೈಲ್ ಅಖಿಲಭಾರತ ವಿಶ್ವವಿದ್ಯಾಲಯ ಮಟ್ಟದ ಕ್ರಾಸ್‍ಕಂಟ್ರಿ ಸ್ಫರ್ಧೆಗೆ ಅರ್ಹಳಾಗಿದ್ದಾಳೆ.
ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಏಕವಲಯ ಸ್ಫರ್ಧೆಯಲ್ಲಿ ಜಯ ಗಳಿಸಿರುವ ಈಕೆ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಸ್ಫರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿ ಆಯ್ಕೆಯಾಗಿದ್ದಾಳೆ. ಪ್ರಸ್ತುತ ಧಾರವಾಡದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ. ಮೊದಲ ವರ್ಷದ ಅಪರಾಧ ಶಾಸ್ತ್ರ ಓದುತ್ತಿರುವ ಇವಳು ಸಿದ್ಧಾಪುರದ ಪ್ರತಿಷ್ಟಿತ ಅಪ್ಪಿನಬೈಲ್ ಕುಟುಂಬದ ಗೋಪಾಲ ಮತ್ತು ಗೌರಿ ದಂಪತಿಗಳ ಮಗಳು.
ಈ ಹಿಂದೆ ಈಕೆ 7 ನೇ ತರಗತಿಯಲ್ಲಿದ್ದಾಗ ರಾಷ್ಟ್ರೀಯ ಅಥ್ಲೆಟಿಕ್ಸ್ ನಲ್ಲಿ ಮೂರುಸಾವಿರ ಮೀಟರ್ ಸ್ಫರ್ಧೆಯಲ್ಲಿ ಬಂಗಾರದ ಪದಕ ವಿಜೇತಳಾಗಿದ್ದಳು, ನಂತರ ಹತ್ತನೇ ತರಗತಿಯಲ್ಲಿದ್ದಾಗ ರಾಜ್ಯಮಟ್ಟದ ಅಥ್ಲೆಟಿಕ್ ಸ್ಫರ್ಧೆಯಲ್ಲಿ ಮೂರುಸಾವಿರ ಮೀಟರ್,ಒಂದೂವರೆ ಸಾವಿರ ಮೀಟರ್ ಹಾಗೂ 800 ಮೀಟರ್ ಸ್ಫರ್ಧೆಗಳಲ್ಲಿ ಕ್ರಮವಾಗಿ ಬಂಗಾರ,ಬೆಳ್ಳಿ ಹಾಗೂ ಕಂಚಿನ ಪದಕ ಗಳಿಸಿ ಮೂರುಸಾವಿರ ಮೀಟರ್ ಓಟವನ್ನು ಹತ್ತುನಿಮಿಷ ನಾಲ್ವತ್ತೇಳು ಸೆ.ಗಳಲ್ಲಿ ಕ್ರಮಿಸಿ ದಾಖಲೆ ಬರೆದ್ದಾಳೆ. ಪಿ.ಯು. ಓದುತಿದ್ದಾಗ ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ಪಂದ್ಯಾಟದಲ್ಲಿ ಮೂರುಸಾವಿರ ಹಾಗೂ ಒಂದೂವರೆ ಸಾವಿರ ಮೀಟರ್ ಸ್ಫರ್ಧೆಗಳಲ್ಲಿ ಬಂಗಾರದ ಪದಕ ಪಡೆದಿದ್ದಾಳೆ.
ಇವರ ತಂದೆ ಗೋಪಾಲ ಅಪ್ಪಿನಬೈಲ್ ರಾಮದುರ್ಗದ ಚಂದರಗಿ ಕ್ರೀಡಾಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತಿದ್ದಾರೆ. ತಾಯಿ ಕೂಡಾ ಶಿಕ್ಷಕಿ. ಇವರ ಸಾಧನೆಗೆ ಅನೇಕರು ಅಭಿನಂದಿಸಿ,ಪ್ರಶಂಸಿಸಿದ್ದಾರೆ.

