
ರಾಜ್ಯದ ಮಾಜಿ ಸಚಿವ ಡಿ.ಕೆ.ಶಿವಕುಮಾರ ಇ.ಡಿ.ಯಿಂದ ಬಂಧನಕ್ಕೊಳಗಾಗಿದ್ದು ಅವರನ್ನು ತಿಹಾರ್ ಜೈಲಿಗೆ ರವಾನಿಸಲಾಗಿದೆ.
ತಿಹಾರ್ ಜೈಲಿನ ಸೆಲ್ ನಂ7 (ಸೆಲ್ ನಂ.7 ಆರ್ಥಿಕ ಅಪರಾಧಿಗಳಿಗೆ ಮೀಸಲು) ಆರೋಪಿಯಾಗಿರುವ ಶಿವಕುಮಾರ ಬಂಧನದ ಬಳಿಕ ಬಿ.ಜೆ.ಪಿ. ವಿರುದ್ಧ ಹರಿಹಾಯ್ದರು.
ಬಿ.ಜೆ.ಪಿ. ಕಾನೂನು ಪಿತೂರಿ ಮಾಡುವ ಮೂಲಕ ನನ್ನನ್ನು ಬಂಧಿಸಿದೆ. ದೇವರು ಮತ್ತು ನ್ಯಾಯಕ್ಕೆ ನಾನು ತಲೆಬಾಗುವುದರಿಂದ ನನಗೆ ಗೆಲುವಾಗಲಿದೆ. ಬಿ.ಜೆ.ಪಿ.ಯ ಸ್ನೇಹಿತರು ಕೊನೆಗೂ ನನ್ನನ್ನು ಬಂಧಿಸುವ ಸಂಚಿನಲ್ಲಿ ಜಯ ಕಂಡಿದ್ದಾರೆ ಅವರಿಗೆ ನನ್ನ ಅಭಿನಂದನೆ ಎಂದು ಟ್ವೀಟ್ ಮಾಡಿದ್ದಾರೆ.

