

ಕನ್ನಡದ ಮೊದಲ ವಾಕ್ ಚಿತ್ರದ ನಟಿ ಎಸ್.ಕೆ.ಪದ್ಮಾದೇವಿ ನಿಧನರಾಗಿದ್ದಾರೆ.ಅವರು ಕನ್ನಡದ ಮೊದಲ ವಾಕ್ ಚಿತ್ರ 1934 ರಲ್ಲಿ ತೆರೆಕಂಡ ಭಕ್ತದ್ರುವ ಚಿತ್ರದಲ್ಲಿ ನಟಿಸಿದ್ದರು.
ಬೆಂಗಳೂರಿನವರಾಗಿ ರಂಗಭೂಮಿ,ಆಕಾಶವಾಣಿ, ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದ ಅವರು ಸಂಗೀತ ಸಂಯೋಜಕರು, ಗಾಯಕಿಯಾಗಿಯೂ ಹೆಸರು ಮಾಡಿದ್ದರು. ಕನ್ನಡ ಸೇರಿದಂತೆ ಕೆಲವು ಭಾಷೆಗಳ ಸಿನೆಮಾ, ಧಾರವಾಹಿಗಳಲ್ಲಿ ನಟಿಸಿದ್ದ ಇವರು ಅವರ 95 ನೇ ವಯಸ್ಸಿನಲ್ಲಿ ನಿಧನರಾದಂತಾಗಿದೆ.

