ಶಿಕ್ಷಕ-ಶಿಕ್ಷಕಿಯರ ಅಸಹಕಾರದ ನಡುವೆ ಮತಪಟ್ಟಿ ಸ್ಫೆಷಲ್‍ಡ್ರೈವ್‍ಗೆ ಅಡಚಣೆ

ಶಿಕ್ಷಕ-ಶಿಕ್ಷಕಿಯರ ಅಸಹಕಾರದ ನಡುವೆ ಮತಪಟ್ಟಿ ಸ್ಫೆಷಲ್‍ಡ್ರೈವ್‍ಗೆ ಅಡಚಣೆ
ರಾಜ್ಯದಲ್ಲಿ ಬೂತ್ ಮಟ್ಟದ ಅಧಿಕಾರಿಗಳಾಗಿ ಶಿಕ್ಷಕರು ಕೆಲಸಮಾಡಲು ನಿರಾಕರಿಸಿದವಿದ್ಯಮಾನದ ನಡುವೆ ಕೆಲವೆಡೆ ಶಿಕ್ಷಕ,ಶಿಕ್ಷಕಿಯರು ಕೆಲಸ ಪ್ರಾರಂಭಿಸಿದ್ದರೆ ಉತ್ತರಕನ್ನಡದಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಶಿಕ್ಷಕರು ಹಾಜರಾಗದೆ ಅಸಹಕಾರ ನಡೆದಿದೆ.
ಈಗ ರಾಜ್ಯದಲ್ಲಿ ಶೀಘ್ರಮತದಾರರ ಪಟ್ಟಿ ಪುನರ್ ರಚನೆಯ ಅಭಿಯಾನ ನಡೆಯುತ್ತಿದೆ. ಈ ಅಭಿಯಾನ ಸೇರಿದಂತೆ ರಾಜ್ಯದ ಮತದಾರರ ಪಟ್ಟಿ ಪರಿಷ್ಕರಣೆ,ಹೊಸಸೇರ್ಪಡೆಗಳಿಗೆ ಬೂತ್ ಮಟ್ಟದಲ್ಲಿ ಅಧಿಕಾರಿಗಳನ್ನಾಗಿ ಶಿಕ್ಷಕರು ಸೇರಿದಂತೆ ಸರ್ಕಾರಿ ಅಧಿಕಾರಿಗಳನ್ನು ನೇಮಿಸುತ್ತಾರೆ.
ಸಿದ್ಧಾಪುರದ ಉದಾಹರಣೆ ಗಮನಿಸುವುದಾದರೆ ತಾಲೂಕಿನಲ್ಲಿ 82 ಶಿಕ್ಷಕರನ್ನು ಬೂತ್(ಒಟ್ಟೂ 117 ಬೂತ್ ಗಳು) ಮಟ್ಟದ ಅಧಿಕಾರಿಗಳನ್ನಾಗಿ ಕಂದಾಯ ಇಲಾಖೆ ನೇಮಕ ಮಾಡಿದೆ. ಈ ಶಿಕ್ಷಕರಲ್ಲಿ 25 ಕ್ಕಿಂತ ಹೆಚ್ಚು ಶಿಕ್ಷಕಿಯರಿದ್ದಾರೆ.
ಮತದಾರರ ಪಟ್ಟಿ ಕೆಲಸ ದಿನದ ಸಮಯದಲ್ಲಿ ಮಾಡುವುದು ಕಷ್ಟ, ನಿಯಮದ ಪ್ರಕಾರ ಶಿಕ್ಷಕ,ಶಿಕ್ಷಕಿಯರು ಶಾಲಾ ಸಮಯದ ನಂತರ ಅಂದರೆ ಸಾಯಂಕಾಲ 4-30ರ ನಂತರ ಮತದಾರರ ಪಟ್ಟಿಗಾಗಿ ಬೂತ್ ಮಟ್ಟದ ಅಧಿಕಾರಿಗಳಾಗಿ ಅಲೆಯಬೇಕು. ಶಿಕ್ಷಕ,ಶಿಕ್ಷಕಿಯರನ್ನು ಇಂಥ ಕೆಲಸಕ್ಕೆ ನೇಮಿಸಬಾರದು ಎನ್ನುವ ಆದೇಶ, ನಿರ್ಧೇಶನಗಳಿವೆ. ಆದರೆ ಕಂದಾಯ ಇಲಾಖೆ ಈ ಕೆಲಸಕ್ಕೆ ಮತ್ತೆ ಶಿಕ್ಷಕ-ಶಿಕ್ಷಕಿಯರನ್ನೇ ನೇಮಕ ಮಾಡಿದೆ.
ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಶಿಕ್ಷಕರ ಸಂಘದಿಂದ ರಾಜ್ಯ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಕೂಡಾ ನೀಡಲಾಗಿದೆ. ಶಿಕ್ಷಕ-ಶಿಕ್ಷಕಿಯರು ಒಬ್ಬೊಬ್ಬರೇ ಗ್ರಾಮೀಣ ಪ್ರದೇಶದ ದುರ್ಗಮ ಹಳ್ಳಿಗಳನ್ನು ಸುತ್ತುವುದು ಕಷ್ಟ,ಇದರಿಂದ ಶಿಕ್ಷಕರು ಮಾನಸಿಕ ನೆಮ್ಮದಿ ಕಳೆದುಕೊಂಡು ಪಠ್ಯ-ಪಠ್ಯೇತರ ಚಟುವಟಿಕೆಗಳನ್ನು ನಿರ್ಲಕ್ಷಿಸುವ ಅಪಾಯ ಎದುರಾಗಿದೆ. ರಾಜ್ಯ ಚುನಾವಣಾ ಆಯೋಗದ ನಿರ್ಧೇಶನ, ಸರ್ಕಾರದ ಆದೇಶದಂತೆ ಸರ್ಕಾರಿ ಅಧಿಕಾರಿಗಳು ಬೂತ್ ಮಟ್ಟದ ಅಧಿಕಾರಿಗಳಾಗಿ ಕೆಲಸಮಾಡುತಿದ್ದಾರೆ. ಈ ಬಗ್ಗೆ ಶಿಕ್ಷಕರ ವಲಯದಲ್ಲಿ ವಿರೋಧ ವ್ಯಕ್ತವಾಗಿದ್ದು ಈ ವಾರದ ಪ್ರಾರಂಭದಿಂದ ಆಗಬೇಕಿದ್ದ ಕೆಲಸವನ್ನು ಸಿದ್ಧಾಪುರದ ಶಿಕ್ಷಕ-ಶಿಕ್ಷಿಕಿಯರು ಈ ವರೆಗೂ ಶುರುಮಾಡಿಲ್ಲ. ಶಿಕ್ಷಕ-ಶಿಕ್ಷಕಿಯರ ಈ ಅಸಹಕಾರಕ್ಕೆ ತೇಪೆ ಹಚ್ಚಿ ಅಸಹಕಾರದ ಪ್ರತಿಭಟನೆಕಾರರನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮನಒಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಶಿಕ್ಷಣ ಇಲಾಖೆ, ಕಂದಾಯ ಇಲಾಖೆಗಳ ನಿರ್ಧೇಶನವನ್ನು ದಿಕ್ಕರಿಸಿ ಸೆ.18 ರ ಬುಧವಾರದ ವರೆಗೆ ಸಿದ್ಧಾಪುರದಲ್ಲಿ ಬೂತ್ ಮಟ್ಟದ ಚುನಾವಣೆ ಕೆಲಸ ಪ್ರಾರಂಭವಾಗಿಲ್ಲ. ಹೀಗೆ ಶಿಕ್ಷಕ-ಶಿಕ್ಷಕಿಯರಿಗೆ ನೀಡಲಾದ ಚುನಾವಣೆಯ ಹೆಚ್ಚುವರಿ ಕೆಲಸಕ್ಕೆ ಸಿದ್ಧಾಪುರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವಿರೋಧ ವ್ಯಕ್ತವಾಗಿದೆ.
ಶಿಕ್ಷಕ ಶಿಕ್ಷಕಿಯರಿಗೆ ಕೆಲಸದ ಒತ್ತಡದ ನಡುವೆ ಚುನಾವಣೆಯ ಮತದಾರರ ಪಟ್ಟಿ ತಯಾರಿಕೆಯ ಹೆಚ್ಚುವರಿ ಕೆಲಸ ಅಪೇಕ್ಷಣೀಯವಲ್ಲ, ಭಾರತದಲ್ಲಿ ಗ್ರಾಮಗಳಲ್ಲಿ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿರುವ ಯುವಕರ ಪಡೆಯೇ ಇದೆ. ಈ ವಿದ್ಯಾವಂತ ನಿರುದ್ಯೋಗಿಗಳನ್ನು ಬಳಸಿಕೊಂಡು ಮತದಾರರ ಪಟ್ಟಿ ತಯಾರಿಸಬಹುದು. ಸಿದ್ಧಾಪುರ, ಶಿರಸಿ-ಸಾಗರ ಸೇರಿದಂತೆ ಬಹುತೇಕ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮತದಾರರ ಪಟ್ಟಿಗಾಗಿ ಶಿಕ್ಷಕ,ಶಿಕ್ಷಕಿಯರು ಅಲೆಯುವುದು ಕಷ್ಟ, ಹಾಗಾಗಿ ಶಿಕ್ಷಕ-ಶಿಕ್ಷಕಿಯರ ಈ ಹೆಚ್ಚುವರಿ ಕೆಲಸ ನಿಲ್ಲಿಸಬೇಕು.

  • ಎಂ.ಕೆ.ನಾಯ್ಕ ಕಡಕೇರಿ, ಪ್ರಾ.ಶಾ.ಶಿ.ಸಂಘದ
    ತಾಲೂಕಾ ಅಧ್ಯಕ್ಷ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *