

ಸಿಮ್ರಾನ್ ಸಾಬ್ ರಾಜ್ಯಮಟ್ಟಕ್ಕೆ
ಸಿದ್ಧಾಪುರ ತಾಲೂಕಿನ ಹಾರ್ಸಿಕಟ್ಟಾ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿ ಸಿಮ್ರಾನ್ ಸಾಬ್ ಎತ್ತರ ಜಿಗಿತದಲ್ಲಿ ಜಿಲ್ಲೆಗೆ ದ್ವಿತಿಯ ಸ್ಥಾನ ಪಡೆದುರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
.ಸಿದ್ಧಾಪುರ ತಾಲೂಕಿನ ಸಂಪಖಂಡದ ಕಾರ್ತಿಕ ನಾಗೇಶ್ ನಾಯ್ಕ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಕ್ಕೆ ಆಯ್ಕೆಯಾಗಿದ್ದಾನೆ. ಈಗ ಕುಮಟಾ ಬಾಳಿಗಾ ಕಾಲೇಜಿನಲ್ಲಿ ಮೊದಲವರ್ಷದ ಪಿ.ಯು. ಓದುತ್ತಿರುವ ಈತ ಶುಕ್ರವಾರ ಭಟ್ಕಳ ಶಿರಾಲಿಯಲ್ಲಿ ನಡೆದ ಜಿಲ್ಲಾಮಟ್ಟದ ಪಂದ್ಯಾಟದಲ್ಲಿ ಆಲ್‍ರೌಂಡರ್ ಆಗಿ ಮೆಚ್ಚುಗೆ ಗಳಿಸಿದ್ದಾನೆ.

ಹೊಸ ಪಿ.ಆಯ್.
ರಿಗೆ ಹಳೆ ಸವಾಲು
ಸಿದ್ಧಾಪುರ ತಾಲೂಕಿನ ಪಿ.ಆಯ್. ಆಗಿ ಪ್ರಕಾಶ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗೆ ಹೊಸಬರಲ್ಲದ ಪ್ರಕಾಶ ಸಿದ್ಧಾಪುರಕ್ಕೆ ಹೊಸಬರು.
ಈ ಹಿಂದೆ ಇಲ್ಲಿದ್ದ ವೀರೇಂದ್ರಕುಮಾರ,ಜಯರಾಮಗೌಡರ ನಂತರ ಸಿದ್ಧಾಪುರದ ಶಾಂತಿ-ಸುವ್ಯವಸ್ಥೆ ಹದಗೆಡದಿದ್ದರೂ ಇಸ್ಪೀಟ್,ಓ.ಸಿ.,ಮಟಕಾ,ಮಂಡ್ಲದಂಥಹ ವ್ಯವಹಾರಗಳು ಮಿತಿಮೀರಿದ್ದವು.
ಗ್ರಾಮೀಣ ಪ್ರದೇಶದಲ್ಲಿ ಸಾರಾಯಿ ವಿರೋಧಿ ಚಳವಳಿ ನಡೆಸಿದ ಕೆಲವು ಜನಪ್ರತಿನಿಧಿಗಳು,ಸಂಘ,ಪಕ್ಷಗಳು ನಗರದಲ್ಲಿ ಬೇನಾಮಿ,ಹರಾಮಿ ನಕಲಿ ಹೆಸರಿನ ಕ್ಲಬ್‍ಗಳ ಮೂಲಕ ಇಸ್ಫೀಟ್ ವ್ಯವಹಾರ ನಡೆಸುತಿದ್ದರು. ಇದರಿಂದಾಗಿ ನಗರದ ಏಕೈಕ ಖಾಸಗಿ ವಸತಿಗೃಹ ಇಸ್ಫೀಟ್ ಪಂಟರುಗಳಿಂದ ತುಂಬಿ ತುಳುಕುತಿತ್ತು ಎನ್ನುವ ಮಾಹಿತಿಗಳಿವೆ.
ಹಿಂದಿನ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜಾತ್ರೆ,ಸಮಾರಾಧನೆಯ ಕಾರ್ಯಕ್ರಮಗಳಲ್ಲಿ ಖಾಕಿ ನೆರವಿನಿಂದಲೇ ಮಂಡ್ಲಗಳ ಆಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ವಿರೋಧ ವ್ಯಕ್ತವಾಗಿತ್ತು. ಇದೇ ಅವಧಿಯಲ್ಲಿ ಓ.ಸಿ.ವ್ಯವಹಾರ ಹೆಚ್ಚಿತ್ತು ಎನ್ನಲಾಗುತ್ತಿದೆ.
ಸಿದ್ಧಾಪುರದಲ್ಲಿ ಓ.ಸಿ.ವ್ಯವಹಾರದಲ್ಲಿ ಆನಂದ ಕಾಣುವ ಕೆಲವು ವ್ಯಕ್ತಿಗಳಿದ್ದು ಈಗ ಅವರ ವ್ಯವಹಾರ ಗ್ರಾಮೀಣ ಪ್ರದೇಶದಲ್ಲಿ ಆನಂದದಿಂದಲೇ ಸಾಗಿರುವ ಮಾಹಿತಿ ಇದೆ. ಹೀಗೆ ಹಿಂದಿದ್ದ ಅಕ್ರಮವ್ಯವಹಾರಗಳು ಈಗಿನ ಗುಲಾಮಿ ಸರ್ಕಾರದಲ್ಲಿ ಮಿತಿಮೀರಿದ್ದು ಪೊಲೀಸರು ವಾಹನ ಸವಾರರನ್ನು ಹೆದರಿಸುವುದು, ಅಕ್ರಮ ವ್ಯಹಾರಿಗಳನ್ನು ಬೆಂಬಲಿಸುವುದು ಮಾಡುತಿದ್ದಾರೆ ಎನ್ನುವ ಗುರುತರ ಆರೋಪಗಳಿದ್ದವು. ಜಿಲ್ಲೆಗೆ ಹೊಸ ಪೊಲೀಸ್ ವರಿಷ್ಠಾಧಿಕಾರಿಗಳ ಆಗಮನವಾಗುತ್ತಲೇ ಗರಿಗೆದರಿದ ಅಕ್ರಮ ವ್ಯವಹಾರಗಳನ್ನು ನಿಯಂತ್ರಿಸುವ ಕೆಲಸ ಹೊಸ ಪಿ.ಆಯ್.ಗಳಿಂದ ಆಗಬೇಕಾಗಿದೆ.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
