
ನಾ ಸುರಿವ ಮಳೆಯಾಗಿದ್ದರೆಮುಗಿಲಿನಿಂದ ಬೀಳುವಾಗಎದೆಯ ತಟ್ಟಿ, ಹೆಮ್ಮೆಯಿಂದಕೂಗಿ ಹೇಳುತಿದ್ದೆ ,ನನಗೆ ಯಾವುದೇ ಜಾತಿ ಇಲ್ಲವೆಂದು ! ನಾ ಹರಿವ ನೀರಾಗಿದ್ದರೆ,ಉಚ್ಚರ ,ಶ್ವಪಚರ ಮೈಯ್ಯಉಜ್ಜಿ ಉಜ್ಜಿ ತೊಳೆದು,ಇಬ್ಬರ ಕೊಳೆಯ ಜಗಕೆ ತೋರಿ ಸಾಬೀತು ಮಾಡುತಿದ್ದೆಶ್ರೇಷ್ಟತೆಯು ಹಸಿ ಸುಳ್ಳೆಂದು ! ನಾ ಬೀಸುವ ಗಾಳಿಯಾಗಿದ್ದರೆಉಸಿರಾಡುವಾಗಲಾದರುಒಮ್ಮೆ ಬೆದರಿಕೆಯೊಡ್ಡಿ !ಮನದಟ್ಟು ಮಾಡಿಬಿಡುತಿದ್ದೆ.ಮಾನವತೆಗು ಮಿಗಿಲಾದಯಾವುದೆ “ಧರ್ಮ”ವಿಲ್ಲವೆಂದು! ನಾ ಸುಡುವ ಬೆಂಕಿಯಾಗಿದ್ದರೆಕಲಿಯುಗದ ಮುಸುಡಿಗೆಕಪ್ಪುಮಸಿಯಂತಂಟಿರುವಲಿಂಗ ಭೇದದ ಮುಸುಕಹಾಗೆ ಕಿತ್ತರವಿಬಿಡುತಿದ್ದೆ ಸುಟ್ಟು ಬೂದಿ ಮಾಡಲೆಂದು ನಾ ಉರಿವ ದೀಪವಾಗಿದ್ದರೆಒಮ್ಮೆಯೂ ಆರದೆಎಲ್ಲರ ಎದೆಯೊಳಗೆ ಪ್ರಕಾಶ ಮಾನವಾಗಿಉರಿದುಬಿಡುತಿದ್ದೆಪ್ರೀತಿಯ ಬೆಳಕ ಶಾಶ್ವತವಾಗಿ ಹಂಚಲೆಂದು ನಾ ಅಳುವ ಮಗುವಾಗಿದ್ದರೆಬೆಳವಣಿಗೆಯ ದಿಕ್ಕರಿಸಿಜೋರಾಗಿ ಅಳುತ ಖುಷಿಯ ಪಡುತತಾಯ್ಮಡಿಲಲಿ ಬೆಚ್ಚನೆ ಮಲಗಿಬಿಡುತಿದ್ದೆಮಲಿನವಾಗದೆಮಗುವಾಗಿಯೆ ಉಳಿಯಲೆಂದು ಮೊದಲು ಮನುಜನಾಗಲೆಂದು ಮನು ಪುರ |
