

ಈಗಿನ ಸ್ಫರ್ಧಾತ್ಮಕ ಯುಗದಲ್ಲಿ ತಾಂತ್ರಿಕಜ್ಞಾನದ ಅಗತ್ಯ ಹೆಚ್ಚಾಗಿದ್ದು ಸರ್ಕಾರ,ಸಂಘ ಸಂಸ್ಥೆಗಳು ನೀಡುವ ತರಬೇತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕರೆ ನೀಡಿರುವ ತಹಸಿಲ್ದಾರ ಗೀತಾ ಸಿ.ಜಿ. ಸರ್ಕಾರದ ಯೋಜನೆಗಳ ನೆರವು ಪಡೆಯುವ ತರಬೇತಿ ಕೇಂದ್ರಗಳು ಸರಿಯಾಗಿ ತರಬೇತಿ ನೀಡದಿದ್ದರೆ ತಮ್ಮ ಗಮನಕ್ಕೆ ತರಬೇಕೆಂದು ಸೂಚಿಸಿದರು.
ನಗರದ ನೌಕರರ ಭವನದಲ್ಲಿ ನಡೆದ ಜೆ.ಸಿ.ಆಯ್.ನ ವಿವಿಧ ವಿಷಯಗಳ ತರಬೇತಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಸೂಚನೆ ನೀಡಿದರು.
ಉಚಿತ ತರಬೇತಿಗಳಿಗೆ ಸರ್ಕಾರ ಧನ ಸಹಾಯ ಮಾಡುತ್ತದೆ.ಫಲಾನುಭವಿಗಳು ಉಚಿತ ತರಬೇತಿಯೆಂದು ನಿರ್ಲಕ್ಷ ಮಾಡಿದರೆ ಅದರಿಂದ ವಿದ್ಯಾರ್ಥಿಗಳು, ಸರ್ಕಾರಕ್ಕೆ ಹಾನಿ, ತರಭೇತಿ ನೀಡುವವರಿಗೆ ಲಾಭವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಅಡಿಕೆವರ್ತಕರ ಸಂಘದ ಅಧ್ಯಕ್ಷ ಪ್ರಕಾಶ ಹೆಗಡೆ ಈಗಿನ ದಿನಗಳಲ್ಲಿ ಕಲಿಯುವವರಿಗೆ ವ್ಯಾಪಕ ಅವಕಾಶ, ಅನುಕೂಲಗಳಿವೆ ಈ ಅವಕಾಶ ಬಳಸಿಕೊಂಡು ಉಪಯೋಗ ಪಡೆಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮಕ್ಕೆ ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆ.ಸಿ.ಆಯ್. ತಾಲೂಕಾಧ್ಯಕ್ಷ ಎನ್.ಟಿ.ನಾಯ್ಕ ಮಾತನಾಡಿ ಸಂಸ್ಥೆಯ ಧ್ಯೇಯ,ಕಾರ್ಯಕ್ರಮದ ಉದ್ಧೇಶಗಳನ್ನು ತಿಳಿಸಿದರು. ಕೆಲವು ಜೆ.ಸಿ.ಆಯ್.ಪ್ರತಿನಿಧಿಗಳು, ವಿದ್ಯಾರ್ಥಿ,ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಪ್ಲಾಸ್ಟಿಕ್‍ಗೆ ಪರ್ಯಾಯ
ಸಿದ್ಧಾಪುರ ತಾಲೂಕಿನ ಕಡಕೇರಿಯಲ್ಲಿ ಪ್ಲಾಸ್ಟಿಕ್ ಕ್ಯಾನ್ ಗಳಿಗೆ ಬದಲು ಸ್ಟೀಲ್ ಕ್ಯಾನ್ ನೀಡುವ ಮೂಲಕ ಸದಸ್ಯರನ್ನು ಪ್ಲಾಸ್ಟಿಕ್ ಬಳಕೆಯಿಂದ ದೂರವಿರಲು ಪ್ರೇರೇಪಿಸಲಾಯಿತು.
ಸಿದ್ಧಾಪುರ ತಾಲೂಕಾ ಆಡಳಿತ ಪ್ಲಾಸ್ಟಿಕ್ ಅಪಾಯದ ಸ್ಥಬ್ಧಚಿತ್ರ ಪ್ರದರ್ಶಿಸುವ ಮೂಲಕ ಪ್ಲಾಸ್ಟಿಕ್ ಗೆ ಪರ್ಯಾಯದ ಅಗತ್ಯವನ್ನು ಒತ್ತಿ ಹೇಳಿತು.

