ಸಿಬಿಲ್- ಈಗಲೇ ತಿಳಿದುಕೊಳ್ಳಿ.


(ನರೇಂದ್ರ ಹಿರೇಕೈ, ಲಾ ಛೇಂಬರ್ ಶಿರಸಿ)
ಸಾಲ ಯಾರಿಗೆ ಬೇಡ? ಸಾಲ ಕೊಡಲು ಸಾವಿರ ಬ್ಯಾಂಕುಗಳು ಕರೆಯುತ್ತಿರುವಾಗ, ಸಾಲ ಯಾರಿಗೆ ಬೇಡ ಹೇಳಿ! ಸಾಲ ಪಡೆದುಕೊಳ್ಳಲು ಸಾವಿರ ದಾರಿಗಳಿವೆ ನಿಜ ಆದರೆ ಸಾಲ ಪಡೆಯಲು ಅರ್ಹತೆ ಇರಬೇಕಲ್ಲವೇ. ಬಹಳಷ್ಟು ಜನಗಳಿಗೆ ಈಗೆಂದರೆ ಈಗ ಸಾಲ ಬೇಕು. ಎಷ್ಟೆಂದರೆ, ಗರಿಷ್ಟ ಎಷ್ಟು ಸಿಗುವುದೋ ಅಷ್ಟು. ಬ್ಯಾಂಕಿಗೆ ಹೋಗಿ ಕೇಳಿ ನೋಡಿ. ಅವರು ಕೇಳುವ ಮೊದಲ ಪ್ರಶ್ನೆ ಒಂದೇ “ಮರುಪಾವತಿ ಹೇಗೆ ಮಾಡುತ್ತೀರಿ” ಎಂದು.
ಆಗ “ನೋ ಕಮೆಂಟ್ಸ್ ಸರ್” ಉತ್ತರ ಕೊಟ್ಟರೆ ಮಾತ್ರ ಸಾಲ ಬಿಡಿ ಬರುವಾಗ ಕೈ ಕೂಡ ಕೊಡುವುದಿಲ್ಲ. ಮೊದಲೇ ಬ್ಯಾಂಕುಗಳೆಲ್ಲ ದಿವಾಳಿಯಾಗುತ್ತಿವೆ ಎಂಬ ವದಂತಿ ಇರುವಾಗ ಕಂಡಕಂಡವರಿಗೆ ಸಾಲ ಕೊಟ್ಟು ಕೈಸುಟ್ಟುಕೊಳ್ಳುತ್ತಾರೆಯೇ? ಮೊದಲೆಲ್ಲ ಸಾಲ ನೀಡುವಾಗ ಬ್ಯಾಂಕ್ ಗಳು ಸಾಲಿಗ ಹೇಳುವ ಮಾಹಿತಿಗಳ ಮೇಲೆಯೇ ಭರವಸೆ ಇಡಬೇಕಾಗುತ್ತಿತ್ತು. “ಬೇರೆ ಎಲ್ಲೆಲ್ಲಿ ಸಾಲ ಮಾಡಿದ್ದೀರಿ” ಅಂತ ಕೇಳಿದರೆ “ಬೇರೆ ಎಲ್ಲಿಯೂ ಸಾಲ ಇಲ್ಲ ಸಾರ್” ಅಂದಾಗ ನಂಬಬೇಕಾದ ಪರಿಸ್ಥಿತಿ ಇತ್ತು. ಈಗ!


ಈಗ ನಿಮ್ಮ ಯಾವ ಕಥೆಯನ್ನೂ ಬ್ಯಾಂಕರ್ ಕೇಳುವುದಿಲ್ಲ. ಒಂದು ಪ್ಯಾನ್ ಕಾರ್ಡ್ ಚೀಟಿಯನ್ನು ಅವರಿಗೆ ಕೊಟ್ಟರೆ ಸಾಕು, ನೀವು ನಿಮ್ಮ ವ್ಯವಹಾರಗಳ ಬಗ್ಗೆ ಬೇರೆನೂ ಹೇಳುವುದು ಬೇಡ. ಅವರೇ ನಿಮ್ಮ ಹಣಕಾಸು ವ್ಯವಹಾರದ ಜಾತಕವನ್ನು ತೆಗೆದು ನಿಮ್ಮ ಕೈಗಿಡುತ್ತಾರೆ. ಈ ಜಾತಕವನ್ನೇ ಬ್ಯಾಂಕ್ ಸಿಬಿಲ್ ಎಂದು ಕರೆಯುತ್ತದೆ. ಸಿಬಿಲ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.
ಸಿಬಿಲ್ ಎಂದರೇನು?
ಸಿಬಿಲ್ ಇದರ ಪೂರ್ಣ ಹೆಸರು ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್ ಅಂತಾಗುತ್ತದೆ. ಇದೊಂದು ಅಮೇರಿಕ ಮೂಲದ ಸಂಸ್ಥೆಯ ಹೆಸರಾಗಿದ್ದು ಪ್ರಸ್ತುತ ಟ್ರಾನ್ಸ್ಯೂನಿಯನ್ ಸಿಬಿಲ್ ಆಗಿ ಮರುನಾಮಕರಣ ಮಾಡಲಾಗಿದೆ. ಇದರ ಕೆಲಸ ಏನೆಂದರೆ ವ್ಯಕ್ತಿಗಳ ಮತ್ತು ಸಂಸ್ಥೆಗಳ ಸಾಲ ಯೋಗ್ಯತೆ ಯ ಬಗ್ಗೆ ವರದಿಯನ್ನು ತಯಾರಿಸುವುದಾಗಿದೆ. ಇದು ಭಾರತದ ಇಂಥಹ 4 ಸಂಸ್ಥೆಗಳಲ್ಲಿ ಒಂದಾಗಿದೆ. ಭಾರತದಲ್ಲಿ ಇದೇ ಕೆಲಸ ಮಾಡುವ ಇನ್ನುಳಿದ 3 ಸಂಸ್ಥೆಗಳು ಯಾವುವೆಂದರೆ:
ಇquiಜಿಚಿx ಅಡಿeಜiಣ Iಟಿಜಿoಡಿmಚಿಣioಟಿ Seಡಿviಛಿes
ಇxಠಿeಡಿiಚಿಟಿ ಅಡಿeಜiಣ Iಟಿಜಿoಡಿmಚಿಣioಟಿ
ಊigh ಒಚಿಡಿಞ ಅಡಿeಜiಣ Iಟಿಜಿoಡಿmಚಿಣioಟಿ Seಡಿviಛಿes
ಅIಃIಐ ಒದಗಿಸುವ ಕ್ರೆಡಿಟ್ ಸ್ಕೋರ್ ವರದಿಯಲ್ಲಿ ವ್ಯಕ್ತಿಯೊಬ್ಬ ಈ ಹಿಂದೆ ಮಾಡಿದ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾಹಿತಿ ಇದ್ದು, ಅಂಥಹ ವ್ಯವಹಾರಗಳಲ್ಲಿ ಆ ಎಷ್ಟು ಪ್ರಾಮಾಣಿಕವಾಗಿ ವ್ಯವಹರಿಸಿದ್ದಾನೆ ಎಂಬುದರ ಮೇಲೆ ಅಂಕಗಳನ್ನು ಕೊಡುತ್ತಾರೆ. ಸಾಮಾನ್ಯವಾಗಿ ಇದು 300 ರಿಂದ 900 ರ ನಡುವೆ ಇದ್ದಿರುತ್ತದೆ ಈ ಅಂಕವು ವ್ಯಕ್ತಿಯೊಬ್ಬನ ಸಾಲದ ಅರ್ಹತೆಯ ಸೂಚ್ಯಾಂಕವಾಗಿರುತ್ತದೆ. ಬ್ಯಾಂಕಿನವರು ಹೇಳುವಂತೆ ಈ ಅಂಕವು 750 ಕ್ಕಿಂತ ಹೆಚ್ಚಿದರೆ ಉತ್ತಮವೆಂದು ಪರಿಗಣಿಸಲಾಗುತ್ತದೆ.
ಸಿಬಿಲ್ ವರದಿಯನ್ನು ಪಡೆಯುವುದು ಹೇಗೆ?
ಅನ್ ಲೈನ್ ಮೂಲಕ ಸಿಬಿಲ್ ವರದಿಯನ್ನು ಪಡೆಯುವುದು ಸುಲಭ. ಮೊದಲು ವ್ಯಕ್ತಿಯೊಬ್ಬ ತನ್ನ ಪ್ರಥಮಿಕ ವಿವರಗಳನ್ನು ತುಂಬಿ ಪ್ರಮಾಣೀಕರಿಸಬೇಕು ಮತ್ತು ಆ ವ್ಯಕ್ತಿಯ ತನ್ನ ಕ್ರೆಡಿಟ್ ಕಾರ್ಡ ಮತ್ತು ಸಾಲದ ಖಾತೆಗಳೊಂದಿಗೆ ಸಂಬಂಧಿಸಿದ ಐದು ಪ್ರಶ್ನೆಗಳಲ್ಲಿ ಸರಿಯಾಗಿ ಮೂರು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ರೂ. 550/- ಪಾವತಿಸಿದ ಮೇಲೆ ಈ-ಮೇಲ್ ವಿಳಾಸಕ್ಕೆ ವರದಿಯನ್ನು ಕಳುಹಿಸಲಾಗುತ್ತದೆ.
ಸಿಬಿಲ್ ವರದಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಂಗತಿಗಳು:
ಸಿಬಿಲ್ ವರದಿಯಲ್ಲಿ ನಮೂದಿಸುವ ಕ್ರೆಡಿಟ್ ಸ್ಕೋರ್ ಎಷ್ಟು ಉತ್ತಮವಾಗಿರುವುದೋ ಅಷ್ಟು ಉತ್ತಮ ಸ್ಪಂದನೆಯನ್ನು ಬ್ಯಾಂಕರ್ ನೀಡುತ್ತಾರೆ. ಅಂಥವರು ಅತಿ ಸುಲಭದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತ ಬಂದಂತೆ ಬ್ಯಾಂಕರ್ ಕೂಡ ನಮ್ಮನ್ನು ಕಡೆಗಣಿಸುತ್ತಾ ಬರುತ್ತಾರೆ. ಹಾಗಾದರೆ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಂಗತಿಗಳು ಯಾವುವು? ಕೆಲವೊಂದು ಸಂಗತಿಗಳು ಈ ಕೆಳಗಿನಂತಿವೆ.

  1. ಹಲವಾರು ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್‍ಗಳು:
    ನೀವು ಹಲವಾರು ಸುರಕ್ಷಿತ ಅಥವಾ ಅಸುರಕ್ಷಿತ ಸಾಲಗಳನ್ನು ಪಡೆದುಕೊಂಡಿದ್ದರೆ ಅಥವಾ ನೀವು ಹಲವಾರು ಕ್ರೆಡಿಟ್ ಕಾರ್ಡಗಳನ್ನು ಹೊಂದಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗಬಹುದು. ಏಕೆಂದರೆ, ನೀವು ಈಗಾಗಲೇ ಹೆಚ್ಚಿನ ಸಾಲವನ್ನು ಪಡೆದಿರುವುದನ್ನು ಅದು ಸೂಚಿಸುತ್ತದೆ. ಸಾಮಾನ್ಯವಾಗಿ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ನಿಮ್ಮ ಸಾಲದ ಅರ್ಜಿಯನ್ನು ಅನುಮೋದಿಸುವ ಮೊದಲು ನಿಮ್ಮ ಸಾಲಕ್ಕೂ ಆದಾಯಕ್ಕೂ ಇರುವ ಅನುಪಾತವನ್ನು ಪರಿಗಣಿಸುತ್ತದೆ. ಆದ್ದರಿಂದ ಸಾಲ ಮತ್ತು ಕ್ರೆಡಿಟ್ ಕಾರ್ಡಗಳು ಮಿತಿಯಲ್ಲಿ ಇದ್ದಷ್ಟು ಅನುಕೂಲಕರ.
  2. ಸಾಲ ಮರುಪಾವತಿಯಲ್ಲಿ ವಿಳಂಬ:
    ನೀವು ಈಗಾಗಲೇ ಪಡೆದಿರುವ ಸಾಲದ ಮರುಪಾವತಿಯಲ್ಲಿ ವಿಳಂಬ ಮಾಡಿದ್ದೇ ಆದಲ್ಲಿ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ತಗ್ಗಿಸುತ್ತದೆ. ನಿಮ್ಮ ಪ್ರಸ್ತುತ ಸಾಲವನ್ನು ಮರುಪಾವತಿ ಮಾಡುವ ಬಗ್ಗೆ ನೀವು ಗಂಭೀರವಾಗಿಲ್ಲ ಅಥವಾ ನೀವು ಅವುಗಳನ್ನು ಮರುಪಾವತಿಸಲು ಸಾಧ್ಯವಿಲ್ಲ ಎಂದು ಇದು ಸೂಚಿಸುತ್ತದೆ. ಪರಿಣಾಮವಾಗಿ, ನಿಮ್ಮ ಕ್ರೆಡಿಟ್ ಸ್ಕೋರ್ ಕೆಳಗಿಳಿಯುತ್ತದೆ. ಆದ್ದರಿಂದ, ನಿಮ್ಮ ಸಾಲಗಳನ್ನು ನೀವು ಸಮಯಕ್ಕೆ ಪಾವತಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ಅಲ್ಲದೆ, ಯಾವುದೇ ಪಾವತಿಯು ತಪ್ಪಿಸದೆ ಇರುವಂತೆ ಖಚಿತಪಡಿಸಿಕೊಳ್ಳಲು ನಿಮ್ಮ ಏಕ ಮತ್ತು ಜಂಟಿ ಖಾತೆಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
  3. ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸುವುದು.
    ನಿಮ್ಮ ಕ್ರೆಡಿಟ್ ಮಿತಿಯನ್ನು ಹೆಚ್ಚಿಸಲು ವಿನಂತಿಸುವುದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು. ನೀವು ಸಂಪೂರ್ಣವಾಗಿ ಕ್ರೆಡಿಟ್ ಕಾರ್ಡಗಳನ್ನೇ ಅವಲಂಬಿಸಿರುವಿರಿ ಎಂದು ಸೂಚಿಸುತ್ತದೆ. ಆದ್ದರಿಂದ ಕ್ರೆಡಿಟ್ ಕಾರ್ಡ ಮಿತಿಯನ್ನು ನಿರಂತರವಾಗಿ ಹೆಚ್ಚಿಸುವುದನ್ನು ತಪ್ಪಿಸುವುದು ಯೋಗ್ಯ.
  4. ಸಾಲಗಳೇ ಇಲ್ಲದಿರುವುದು:
    ನೀವು ಯಾವುದೇ ಸಾಲಗಳನ್ನು ಪಡೆಯದೇ ಕೇವಲ ಹಲವಾರು ಕ್ರೆಡಿಟ್ ಕಾರ್ಡಗಳನ್ನು ಮಾತ್ರ ಪಡೆದುಕೊಂಡಿದ್ದರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು. ಹಲವಾರು ಜನ ಅನೇಕ ಕ್ರೆಡಿಟ್ ಕಾರ್ಡಗಳನ್ನು ಹೊಂದಿರುತ್ತಾರೆ. ಆದರೆ, ಒಂದೇ ಒಂದು ಸಾಲದ ಖಾತೆಯನ್ನು ಹೊಂದಿರುವುದಿಲ್ಲ. ಅಂದರೆ ಇದು ನೀವು ವಿಭಿನ್ನ ರೀತಿಯ ಸಾಲಗಳನ್ನು ನಿಭಾಯಿಸುವಲ್ಲಿ ನಿಮ್ಮ ವೈವಿಧ್ಯತೆಯು ಇಲ್ಲದಿರುವುದನ್ನು ಸೂಚಿಸುತ್ತದೆ.
  5. ಕ್ರೆಡಿಟ್ ಕಾರ್ಡ್ ಅನ್ನು ಬಳಸದೇ ಇರುವುದು:
    ಕ್ರೆಡಿಟ್ ಕಾರ್ಡಗಳನ್ನು ಹೊಂದಿದ್ದೂ ಅದನ್ನು ಬಳಸದೇ ಇದ್ದರೆ ಅದೂ ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಕ್ರೆಡಿಟ್ ಕಾರ್ಡ್‍ಗಳನ್ನು ನಿರಂತರವಾಗಿ ಬಳಕೆಮಾಡಿ ಮರುಪಾವತಿಯಲ್ಲಿಯೂ ಪ್ರಾಮಾಣಿಕವಾಗಿದ್ದಲ್ಲಿ ಮಾತ್ರ ಕ್ರೆಡಿಟ್ ಸ್ಕೋರ್ ಉತ್ತಮವಾಗಲು ಸಾಧ್ಯ.
  6. ಸಿಬಿಲ್ ವರದಿಯನ್ನು ಪರಿಶೀಲಿಸದೇ ಇರುವುದು:
    ನಿಮ್ಮ ಸಿಬಿಲ್ ವರದಿಯಲ್ಲಿ ಎನಾದರೂ ದೋಷದಿಂದ ತಪ್ಪು ಮಾಹಿತಿ ನಮೂದಾಗಿದ್ದರೆ ಅದನ್ನು ನಿಮ್ಮ ಪರಿಶೀಲನೆಯಿಂದ ಸರಿಪಡಿಸಬಹುದು. ಒಂದೊಮ್ಮೆ ನೀವು ನೋಡದೇ ಇದ್ದಲ್ಲಿ ಅದು ಮುಂದುವರಿಯುತ್ತ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.
    ಸಿಬಿಲ್ ವರದಿಯ ಮೇಲೆ ಯಾವುದೇ ಪರಿಣಾಮ ಬೀರದ ಸಂಗತಿಗಳು:
  7. ನಿಶ್ಚಿತ ಠೇವಣಿಗಳ (ಈIಘಿಇಆ ಆಇPಔSIಖಿ) ಮೇಲೆ ಸಾಲವನ್ನು ಪಡೆದುಕೊಂಡಿದ್ದರೆ.
  8. ನೀವು ಪಡೆದುಕೊಳ್ಳುವ ಸಂಬಳ ಎಷ್ಟೇ ಇದ್ದರೂ ಯಾವುದೇ ಪರಿಣಾಮ ಬೀರುವುದಿಲ್ಲ. ಸಿಬಿಲ್ ಯಾವತ್ತೂ ನಿಮ್ಮ ಆದಾಯವನ್ನು ಪರಿಗಣಿಸುವುದಿಲ್ಲ.
  9. ನಿಮ್ಮ ವಿಮಾ ಕಂತುಗಳನ್ನು ಪಾವತಿಸುವಲ್ಲಿ ವಿಳಂಬ ಮಾಡಿದರೂ ಅಥವಾ ಸಕಾಲದಲ್ಲಿ ತುಂಬಿದರೂ ಯಾವುದೇ ಪರಿಣಾಮ ಬೀರುವುದಿಲ್ಲ.
  10. ದೂರವಾಣಿ ಬಿಲ್ಲ್, ಮನೆ ಬಾಡಿಗೆ ಇತ್ಯಾದಿ ಸಂಗತಿಗಳೂ ಕೂಡ ಸಿಬಿಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಇತ್ತೀಚೆಗೆ ಎಲ್ಲಾ ಬ್ಯಾಂಕ್ ಗಳು ಸಾಲ ನೀಡುವ ಮೊದಲು ಸಿಬಿಲ್ ವರದಿಯನ್ನು ಪರಿಶೀಲಿಸಿಯೇ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ಸಿಬಿಲ್ ಸ್ಕೋರ್ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಬೇಕಾಗಿದೆ.
ಧನ್ಯವಾದಗಳು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *