ಸಿದ್ಧಾಪುರ ತಾಲೂಕಿನ ಗಡಿಪ್ರದೇಶ ಶಿರಸಿಬಾಳೂರು-ಕಾನಸೂರು-ಸಿದ್ಧಾಪುರ ರಸ್ತೆಯ ಗಿರಗಡ್ಡೆ ಬಳಿ ಬೃಹತ್ ಒಣಗಿದ ಮರವೊಂದು ರಸ್ತೆಪಕ್ಕದ ಮಾವಿನ ಮರಕ್ಕೆ ಒರಗಿದ್ದು ಈ ಒಣಮರ ರಸ್ತೆಗೆ ಬೀಳುವ ಸಮಯದಲ್ಲಿ ಅಪಾಯವಾಗುವ ಸಾಧ್ಯತೆ ಬಗ್ಗೆ ಸ್ಥಳಿಯರು ಎಚ್ಚರಿಸಿದ್ದಾರೆ.
ಇದೇ ವರ್ಷ ತಾಲೂಕಿನ ಮಾವಿನಗುಂಡಿ ಬಳಿ ಮರ ಒಂದು ರಸ್ತೆ ಮೇಲೆ ಬಿದ್ದು ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರನ್ನು ಬಲಿತೆಗೆದುಕೊಂಡಿತ್ತು. ಈ ಅಪಾಯದ ನಂತರ ತಾಲೂಕಿನಾದ್ಯಂತ ಅಪಾಯದ ಮರಗಳನ್ನು ತೆರವುಮಾಡುವ ಬಗ್ಗೆ ಸಮೀಕ್ಷೆ ನಡೆದಿತ್ತು.
ಈ ವರ್ಷದ ಮಳೆಗಾಲದ ಸಮಯದಲ್ಲಿ ರಸ್ತೆಗೆ ಬಾಗಿ ಮಾವಿನಮರವೊಂದಕ್ಕೆ ಒರಗಿರುವ ಒಣಮರ ಈ ವರೆಗೆ ನೆಲಕ್ಕುರುಳದೆ ಸಾರ್ವಜನಿಕ ರಸ್ತೆಗೆ ಕಮಾನಿನಂತೆ ಬಾಗಿಕೊಂಡಿದೆ. ಈ ಮರ ಯಾವುದೇ ಸಮಯದಲ್ಲಿ ಬೀಳುವ ಸಾಧ್ಯತೆ ಇದ್ದು ಈ ಮರ ವಾಹನ ಸವಾರರು ಸಾಗುವ ಸಮಯದಲ್ಲಿ ಅಥವಾ ಪಾದಚಾರಿಗಳು ಸಾಗುವ ಸಮಯದಲ್ಲಿ ಧರೆಗುರುಳಿದರೆ ಜೀವಹಾನಿ, ತೊಂದರೆಗಳಾಗುವ ಸಾಧ್ಯತೆ ನಿಚ್ಚಳವಾಗಿದೆ.
ಈ ಅಪಾಯ ಸಾಧ್ಯತೆಯನ್ನು ಗಮನಿಸಿರುವ ಸ್ಥಳಿಯರು ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ ಅರಣ್ಯ ಇಲಾಖೆ ಈ ವರೆಗೆ ಕ್ರಮ ಜರುಗಿಸದಿರುವುದರಿಂದ ಜನತೆ ಈ ಅಪಾಯದ ಬಗ್ಗೆ ಭಯಭೀತರಾಗಿದ್ದಾರೆ. ಈ ಹಳೆದೊಡ್ಡಮರ ತೆರವುಮಾಡುವ ಮೂಲಕ ಸ್ಥಳಿಯರ ತೊಂದರೆ,ಭಯಕ್ಕೆ ಪರಿಹಾರದ ಅಭಯ ನೀಡಬೇಕೆಂದು ಮಾಧ್ಯಮಗಳ ಮೂಲಕ ಜನತೆ ತಾಲೂಕಾ ಆಡಳಿತ ಮತ್ತು ಅರಣ್ಯ ಇಲಾಖೆಗಳನ್ನು ಆಗ್ರಹಿಸಿದ್ದಾರೆ.
ಗಾಂಧಿ ಸಾಧನೆ,ಸಿದ್ಧಾತದ ಮೂಲಕ ಜನಜಾಗೃತಿ
ಗಾಂಧೀಜಿ ವೈಯಕ್ತಿಕ ಮತ್ತು ಸಾರ್ವಜನಿಕ ಸ್ವಚ್ಛತೆ ಪ್ರತಿಪಾದಿಸುವ ಜೊತೆಗೆ ಅವುಗಳ ಅನುಷ್ಠಾನಕ್ಕೆ ಶ್ರಮಿಸಿದ್ದರು,ಅವರ ಸಾಧನೆ, ಸಿದ್ಧಾಂತಗಳನ್ನು ಹೊಸಪೀಳಿಗೆಗೆ ತಿಳಿಸುವ ಮೂಲಕ ಜಾಗೃತಿಮೂಡಿಸಬೇಕು ಎಂದು ತಹಸಿಲ್ದಾರ ಗೀತಾ ಸಿ.ಜಿ. ಹೇಳಿದರು.
ಅವರು ತಾಲೂಕಾ ಆಡಳಿತ ಪ್ರಾರಂಭಿಸಿದ ಸ್ವಚ್ಛತಾ ಕಾರ್ಯಕ್ರಮದ ಜಾಥಾ ಉದ್ಘಾಟಿಸಿ ಮಾತನಾಡಿದರು. ಜಾಥಾ ಮೂಲಕ ಪ್ಲಾಸ್ಟಿಕ್ ಅಪಾಯದ ಜನಜಾಗೃತಿ ಮೂಡಿಸಿದ ತಾಲೂಕಾ ಆಡಳಿತ ವಿವಿಧೆಡೆ ಶ್ರಮದಾನ ನಡೆಸಿತು. ಪ್ಲಾಸ್ಟಿಕ್‍ಗೆ ಪರ್ಯಾಯ
ಸಿದ್ಧಾಪುರ ತಾಲೂಕಿನ ಕಡಕೇರಿಯಲ್ಲಿ ಪ್ಲಾಸ್ಟಿಕ್ ಕ್ಯಾನ್ ಗಳಿಗೆ ಬದಲು ಸ್ಟೀಲ್ ಕ್ಯಾನ್ ನೀಡುವ ಮೂಲಕ ಸದಸ್ಯರನ್ನು ಪ್ಲಾಸ್ಟಿಕ್ ಬಳಕೆಯಿಂದ ದೂರವಿರಲು ಪ್ರೇರೇಪಿಸಲಾಯಿತು.
ಸಿದ್ಧಾಪುರ ತಾಲೂಕಾ ಆಡಳಿತ ಪ್ಲಾಸ್ಟಿಕ್ ಅಪಾಯದ ಸ್ಥಬ್ಧಚಿತ್ರ ಪ್ರದರ್ಶಿಸುವ ಮೂಲಕ ಪ್ಲಾಸ್ಟಿಕ್ ಗೆ ಪರ್ಯಾಯದ ಅಗತ್ಯವನ್ನು ಒತ್ತಿ ಹೇಳಿತು.