

ಸಿದ್ದಾಪುರ ಶಂಕರಮಠದಲ್ಲಿ ನಡೆಯುತ್ತಿರುವ ಸಂಸ್ಕøತಿ ಸಂಪದೋತ್ಸವದಲ್ಲಿ ರಂಗಸೌಗಂಧ ತಂಡದ ಅಂಧಕಾರ ಪೌರಾಣಿಕ ನಾಟಕ ಪ್ರದರ್ಶನಗೊಂಡು ಸೇರಿದ ಜನಸ್ತೋಮವನ್ನು ರಂಜಿಸಿತು.
ಮಹಾಭಾರತದ ಕಥಾವಸ್ತುವುಳ್ಳ ನಾಟಕದಲ್ಲಿ ದೃತರಾಷ್ಟ್ರನಾಗಿ ರಾಜಾರಾಮ ಭಟ್ಟ, ಹೆಗ್ಗಾರಳ್ಳಿ, ಸುಯೋಧನನಾಗಿ ನಾಗಪತಿ ಭಟ್ಟ ವಡ್ಡಿನಗದ್ದೆ, ಕರ್ಣನಾಗಿ ಗಣಪತಿ ಹೆಗಡೆ ಗುಂಜಗೋಡ, ಸಂಜಯನಾಗಿ ಗಣಪತಿ ಹೆಗಡೆ ಹುಲಿಮನೆ, ಕುಂತಿಯಾಗಿ ಪ್ರವೀಣಾ ಹೆಗಡೆ, ಗಾಂಧಾರಿಯಾಗಿ ಶುಭಾ ರಮೇಶ ಅತ್ಯುತ್ತಮವಾಗಿ ಪಾತ್ರ ನಿರ್ವಹಿಸಿದರೆ ರಾಮ ಅಂಕೋಲೆಕರ್, ಶಮಂತ ಹೆಗಡೆ, ಐ.ಕೆ.ಸುಂಗೊಳ್ಳಿಮನೆ, ಸೈನಿಕರಾಗಿ ಗಮನಸೆಳೆದರು.
ನಾಟಕಕ್ಕೆ ರಾಜೇಂದ್ರ ಕೊಳಗಿ ಹಾಗೂ ಜಯರಾಮ ಭಟ್ಟ ಹೆಗ್ಗಾರಳ್ಳಿ ಯವರ ಸಂಗೀತವಿತ್ತು. ಶ್ರೀಪಾದ ಹೆಗಡೆ ಕೊಡನಮನೆ ವಿನ್ಯಾಸವಿದ್ದು ಗಣಪತಿ ಹೆಗಡೆ ಹುಲಿಮನೆ ನಾಟಕ ನಿರ್ದೇಶಿಸಿದ್ದರು.

