

ಸಿದ್ದಾಪುರ ಪಟ್ಟಣದ ಶಂಕರಮಠದಲ್ಲಿ ನವರಾತ್ರಿ ಪ್ರಯುಕ್ತ ಸಂಸ್ಕೃತಿ ಸಂಪದೋತ್ಸವ ಸಂಭ್ರಮದಿಂದ ನಡೆಯಿತು.
6ದಿನಗಳಕಾಲದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 3ನೇದಿನ ಮುರಳೀವನ ಸಾಂಸ್ಕೃತಿಕ ಸಂಘಟನೆಯು ನಾದಪ್ರದಕ್ಷಿಣೆ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿತು.
ಪ್ರಾರಂಭದಲ್ಲಿ ರಾಜೇಂದ್ರ ಹೆಗಡೆ ಕೊಳಗಿ ಹಿಂದುಸ್ಥಾನಿ ಗಾಯನದಲ್ಲಿ ರಾಗ ಮುಲ್ತಾನಿ (ವಿಲಂಬಿತ್ ಏಕತಾಲ, ದೃತ್ ತೀನ್ ತಾಲ) ಪ್ರಸ್ತುತ ಪಡಿಸಿದರು. ನಂತರ ಪಾಲಿಸೆನ್ನ ಮಾತೆ.. ಭಕ್ತಿರಚನೆಯನ್ನು ಹಾಡಿದರು. ಇವರಿಗೆ ಮಹೇಶ ಹೆಗಡೆ ಹೊಸಗದ್ದೆ(ತಬಲಾ), ಜಯರಾಮ ಭಟ್ಟ ಹೆಗ್ಗಾರಳ್ಳಿ( ಸಂವಾದಿನಿ) ಸಾತ್ ನೀಡಿದರು.
ಮುಂದಿನ ಭಾಗದಲ್ಲಿ ನಿತಿನ್ ಹೆಗಡೆ ಕಲಗದ್ದೆ ತಬಲಾ ಸೋಲೊ ಪ್ರಸ್ತುತ ಪಡಿಸಿ ತಮ್ಮ ಕೈಚಳಕದಿಂದ ಪ್ರೇಕ್ಷಕರ ಮನಗೆದ್ದರು.
ಡಾ. ಸಮೀರ ಬಾದ್ರಿಯವರ ಹಾರ್ಮೋನಿಯಂ ಲೆಹರಾ ಅಷ್ಟೇ ಪ್ರಬುದ್ಧವಾಗಿ ಮೂಡಿಬಂತು.
ಮೂರನೇ ಭಾಗದಲ್ಲಿ ಕೊಳಲುವಾದಕ ಕಿರಣ ಹೆಗಡೆ ಮಘೇಗಾರ ಹಾಗೂ ಪ್ರಸಿದ್ಧ ಹಿಂದುಸ್ಥಾನಿ ಗಾಯಕ ರವಿಕಿರಣ ಮಣಿಪಾಲ ಬಾನ್ಸುರಿ – ಗಾಯನ ಜುಗಲಬಂದಿ ಪ್ರದರ್ಶಿಸಿದರು.
ಇವರು ರಾಗ ಪೂರಿಯಾ ಕಲ್ಯಾಣ್, ದುರ್ಗಾ, ರಾಗಮಾಲಾ ಗಳನ್ನು ಕ್ರಮವಾಗಿ ಪ್ರಸ್ತುತಪಡಿಸಿದರು. ಇವರಿಗೆ ಭಾರವಿ ದೇರಾಜೆ ಸುರತ್ಕಲ್ ತಬಲಾದಲ್ಲಿ ಹಾಗೂ ಶಶಿಕಿರಣ ಮಣಿಪಾಲ ಸಂವಾದಿನಿಯಲ್ಲಿ ಜೋಡಿಯಾದರು. ಚಿನ್ಮಯ್ ಭಟ್ಟ ತಾನ್ಪುರದಲ್ಲಿ ಸಹಕರಿಸಿದರು. ಗಣಪತಿ ಬಿ ಹಿತ್ತಲಕೈ ಸ್ವಾಗತಿಸಿ ವಂದಿಸಿದರು. ಎಂ.ಕೆ.ನಾಯ್ಕ ಹೊಸಳ್ಳಿ ನಿರೂಪಿಸಿದರು.
