

ಸಿದ್ದಾಪುರ ಪಟ್ಟಣದಲ್ಲಿ ವಿವಿಧ ಇಲಾಖೆಯ ನೌಕರರು ಕಳೆದ ಹಲವು ದಿನಗಳಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು, ಮಹಾನವಮಿ ಹಬ್ಬದದಿನದಂದೂ ಸ್ವಚ್ಛತಾ ಕಾರ್ಯ ಮುಂದುವರಿಸಿದರು. ಹೊಸೂರಿನ ಗುಡ್ಡೆಕೇರಿ, ಪಕ್ಕದ ಜನತಾ ಕಾಲನಿ ಮುಂತಾದಕಡೆಗಳಲ್ಲಿ ಪಟ್ಟಣ ಪಂಚಾಯತದ ಚುನಾಯಿತ ಪ್ರತಿನಿಧಿಗಳು ಹಾಗೂ ನೌಕರರು ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಿದರು.
ಪ.ಪಂ.ನ ಸದಸ್ಯೆ ಯಶೋದ ಆರ್ ಮಡಿವಾಳ, ಇನ್ಸ್ಪೆಕ್ಟರ್ ಲಕ್ಷ್ಮೀಬಾಯಿ, ಸಿಬ್ಬಂದಿಗಳಾದ ಕುಮಾರ ನಾಯ್ಕ, ಶ್ರೀರಾಮ ನಾಯ್ಕ, ವಿದ್ಯಾ ನಾಯ್ಕ, ತಹಸೀಲ್ದಾರ್ ಕಚೇರಿಯ ಅನಿಲ್ ನಾಯ್ಕ, ಸದಾನಂದ ನಾಯ್ಕ ಮುಂತಾದವರು ಹಾಗೂ ಸ್ಥಳೀಯ ಅಂಗನವಾಡಿಯ ಕಾರ್ಯಕರ್ತೆಯರು, ವಸತಿ ನಿಲಯದ ಸಿಬ್ಬಂದಿಗಳು ಸ್ವಚ್ಛತಾಕಾರ್ಯದಲ್ಲಿ ಪಾಲ್ಗೊಂಡರು.
ಹೊಸೂರು ಬಂಕೇಶ್ವರ ದೇವಸ್ಥಾನದ ಆವರಣ ಸ್ವಚ್ಛತೆ
ಸಿದ್ದಾಪುರ ತಾಲೂಕಿನ ಪಟ್ಟಣ ವ್ಯಾಪ್ತಿಯ ಹೊಸೂರಿನ ಬಂಕೇಶ್ವರ ದೇವಸ್ಥಾನದ ಆವರಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಇತ್ತೀಚೆಗೆ ಸ್ವಚ್ಛತಾ ಕಾರ್ಯನಡೆಸಲಾಯಿತು.
ತಾಲೂಕಿನ ವಿವಿಧ ಇಲಾಖೆಗಳು, ಬಂಕೇಶ್ವರ ದೇವಸ್ಥಾನ ಸಮಿತಿ, ಸರಕಾರಿ ನೌಕರರ ಸಂಘ ಸಂಯುಕ್ತವಾಗಿ ಈ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದವು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಶ ನಾಯ್ಕ ಇಂದು ನಾವು ಸಾಕಷ್ಟು ಮುಂದುವರಿದಿದ್ದೇವೆ. ಆದರೆ ಸ್ವಚ್ಛತೆಯ
ಬಗ್ಗೆ ಇನ್ನೂ ಹೆಚ್ಚಿನ ಗಮನ ಹರಿಸಬೇಕಿದೆ. ಅದರಲ್ಲೂ ಪ್ಲಾಸ್ಟಿಕ್ ಕಸವನ್ನು ದೂರಮಾಡಬೇಕಿದೆ. ಈ ಬಗ್ಗೆ ಎಲ್ಲರೂ ಜವಾಬ್ಧಾರಿ ವಹಿಸಬೇಕು ಎಂದರು.
ಬಂಕೇಶ್ವರ ದೇವಸ್ಥಾನದ ಆಡÀಳಿತ ಸಮಿತಿಯ ಅಧ್ಯಕ್ಷ ಆರ್,ಆಯ್,ನಾಯ್ಕ ಮಾತನಾಡಿ ಸ್ವಚ್ಛತಾ ಅಭಿಯಾನದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಹಾಗೂ ನೌಕರರ ಸಂಘದ ಕರೆಗೆ ಸ್ಪಂದಿಸಿ ಊರಿನ ಯುವಕರು ಹಾಗೂ ಹಿರಿಯರು ಪಾಲ್ಗೊಂಡಿದ್ದಕ್ಕೆ ಸಂತಸವ್ಯಕ್ತಪಡಿಸಿ ಧನ್ಯವಾದ ಸಲ್ಲಿಸಿದರು.
ಪಟ್ಟಣ ಪಂಚಾಯತದ ಸದಸ್ಯೆ ಯಶೋದ ಆರ್ ಮಡಿವಾಳ, ಮಂಜುಳಾ ಜಿ ನಾಯ್ಕ, ವಿಜಯೇಂದ್ರ ಗೌಡರ್ , ದೇವಸ್ಥಾನದ ಆಡಳಿತ ಸಮಿತಿಯ ಕಾರ್ಯದರ್ಶಿ ಜೆ.ಆರ್.ಹೊಸೂರ, ಸದಸ್ಯರಾದ ರವಿ ಗೌಡರ್, ಕೃಷ್ಣ ಕಡಕೇರಿ, ನೌಕರ ಸಂಘದ ಪದಾಧಿಕಾರಿಗಳಾದ ತೇಜಸ್ವಿ ನಾಯ್ಕ, ಯಶವಂತ ಅಪ್ಪಿನಬೈಲ, ಎನ್.ಆಯ್.ಗೌಡ, ಸದಸ್ಯರಾದ ಎಂ.ಕೆ.ನಾಯ್ಕ ಹೊಸಳ್ಳಿ, ಹರೀಶ ನಾಯ್ಕ, ನಿವೃತ್ತ ನೌಕರರು, ಬಂಕೇಶ್ವರ ಕಬ್ಬಡ್ಡಿ ಸಂಘ ಹಾಗೂ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘಗಳ ಸದಸ್ಯರು, ಹೊಸೂರಿನ ನಾಗರಿಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
