

ರಾಜ್ಯ ವಿಧಾನಸಭೆಯ ಕಲಾಪಕ್ಕೆ ಖಾಸಗಿ ದೃಶ್ಯಮಾಧ್ಯಮಗಳ ನಿಷೇಧ ಮತ್ತು ಪ್ರವಾಹ ಪರಿಹಾರದ ಬಗ್ಗೆ ಚರ್ಚೆಗೆ ಅವಕಾಶ ನೀಡದ ರಾಜ್ಯ ವಿಧಾನಸಭಾ ಅಧ್ಯಕ್ಷ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆಯವರ ಪಕ್ಷಪಾತದ ನಡೆ ಬಗ್ಗೆ ಸಾರ್ವಜನಿಕ ವಲಯ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ತೀವೃ ವಿರೋಧ ವ್ಯಕ್ತವಾಗಿದೆ. ಶಾಸನ ಸಭೆಯಲ್ಲಿ ಜನಪ್ರತಿನಿಧಿಗಳು ಏನು? ಮಾಡುತ್ತಾರೆ. ಹ್ಯಾಗೆ ವರ್ತಿಸುತ್ತಾರೆ ಎಂದು ತಿಳಿಯುವ ಹಕ್ಕು ಮತದಾರ ಸಾರ್ವಜನಿಕರು ಅಥವಾ ಜನಸಾಮಾನ್ಯರಿಗಿದೆ. ಹಿಂದೆಲ್ಲಾ ಮಾಧ್ಯಮಸ್ವಾತಂತ್ರ್ಯ, ಶಾಸಕರ ಹಕ್ಕು, ಹಕ್ಕುಚ್ಯುತಿ,ಜನಪ್ರತಿನಿಧಿಗಳ ತೇಜೋವಧೆ, ಮಾಧ್ಯಮಗಳ ಮಿತಿಗಳ ಬಗ್ಗೆ ಅನೇಕ ಬಾರಿ ವಿಧಾನಸಭೆಯಲ್ಲಿ ಚರ್ಚೆಯಾಗಿದೆ.
ವಾಟಾಳ್‍ನಾಗರಾಜ್, ಎಂ.ಪಿ.ಪ್ರಕಾಶ ಸೇರಿದಂತೆ ಅನೇಕ ಶಾಸಕರು, ಜನಪ್ರತಿನಿಧಿಗಳ ಮೇಲೆ ಮಾಧ್ಯಮಗಳ ಬರಹ ಆಧರಿಸಿ ಶಾಸನಸಭೆಯಲ್ಲಿ ಚರ್ಚೆಯಾಗಿ ಅಂತಿಮವಾಗಿ ಮಾಧ್ಯಮಸ್ವಾತಂತ್ರ್ಯವನ್ನು ಎತ್ತಿಹಿಡಿದ ಅನೇಕ ಉದಾಹರಣೆಗಳು ರಾಜ್ಯ ವಿಧಾನ ಸಭೆಯಲ್ಲೇ ನಡೆದಿವೆ.
ಇವುಗಳಿಗೆಲ್ಲಾ ಸಾಕ್ಷಿಯಾಗಿರುವ ಈಗಿನ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸರಳರು,ಸಜ್ಜನರು ಎನ್ನುವ ಆರೋಪಗಳಿವೆ.ಆದರೆ ಅವರು ಪಕ್ಕಾ ಮತಾಂಧ,ಕೋಮುವಾದಿ ವಿಚಾರಧಾರೆಯ ಸಂಘದ ನಿಷ್ಠಾವಂಥ ಎನ್ನುವುದು ಅನೇಕರಿಗೆ ತಿಳಿದಿಲ್ಲದ ಸತ್ಯ.ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಪ್ರತಿನಿಧಿಸುವ ಶಿರಸಿ-ಸಿದ್ಧಾಪುರ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ ದಲಿತರಿಗೆ ಕನಿಷ್ಠ ಅನುಕೂಲತೆಗಳಿಲ್ಲ, ಹಿಂದುಳಿದ ಬಹುಸಂಖ್ಯಾತರಿಗೆ ನಾಯಕತ್ವವಿಲ್ಲ.ಜೀತದಾಳುಗಳಂತೆ ಬದುಕುವ ಪರಿಶಿಷ್ಟರಿಗೆ ಆಶ್ರಯಮನೆ(ನಿರ್ಮಾಣ)ಗೆ ಅವಶ್ಯವಿರುವ ತುಂಡು ಭೂಮಿಯಿಲ್ಲ. ಇದಕ್ಕೆ ಪ್ರತಿಯಾಗಿ ಕಾಗೇರಿಯವರ ಉಚ್ಛಶ್ರೀಮಂತ ವರ್ಗ ಎಕರೆಲೆಕ್ಕದ ಲಾಭದ ಕಂದಾಯ ಭೂಮಿ ಜೊತೆಗೆ ಕೆನರಾ ಪ್ರಿವಿಲೆಜ್ ನ ಬೆಟ್ಟಭೂಮಿ ಅನುಕೂಲ ಪಡೆದಿದೆ.
ಉತ್ತರಕನ್ನಡ ಜಿಲ್ಲೆ ಸೇರಿದ ರಾಜ್ಯದ ದಲಿತರು, ಹಿಂದುಳಿದವರು, ಅಲ್ಫಸಂಖ್ಯಾತ ಬಹುಸಂಖ್ಯಾತರ ಬಗ್ಗೆ ಕಾಳಜಿ,ಲಕ್ಷ್ಯ ವಹಿಸದ ಕಾಗೇರಿ, ಅನಂತರ ಪರಿವಾರ ಉಳ್ಳವರ ಬೆಟ್ಟಭೂಮಿ ಸೇರಿದಂತೆ ದೇವಾಲಯ, ಧರ್ಮ, ಆಚರಣೆ, ಹಿಂದುತ್ವ ಸೇರಿದ ಬಹುಸಂಖ್ಯಾತರನ್ನು ವಂಚಿಸುವ ಉಳ್ಳವರ ಪರವಾಗಿ ಪಕ್ಷಪಾತ ಮಾಡುತ್ತಿದೆ ಮತ್ತು ಅಂಥ ವ್ಯವಸ್ಥೆ,ಸರ್ಕಾರಿ ಅನುಕೂಲಕ್ಕೆ ಉತ್ತೇಜಿಸುತ್ತಿದೆ.
ಹೀಗೆ ಇಡೀ ವ್ಯವಸ್ಥೆಯನ್ನು ಉಳ್ಳವರ ಪರವಾಗಿ ಒಗ್ಗಿಸಿಕೊಳ್ಳಲು ಬಹುಸಂಖ್ಯಾತರ ತಲೆಯಲ್ಲಿ ಧರ್ಮ, ರಾಷ್ಟ್ರೀಯತೆ,ದೇಶಪ್ರೇಮದ ಹುಸಿನಾಟಕಗಳನ್ನು ನಡೆಸುತ್ತಾ ಸರ್ಕಾರಿ, ಅರೆಸರ್ಕಾರಿ, ಖಾಸಗಿಕ್ಷೇತ್ರದಲ್ಲಿ ಮೇಲ್ವರ್ಗದ ಪರವಾಗಿನ ವ್ಯವಸ್ಥೆಯನ್ನು ರೂಪಿಸುತ್ತಿದೆ. ಇಂಥ ಅವ್ಯವಸ್ಥೆ, ಅವಿವೇಕಗಳನ್ನೇ ಲಾಭಕೋರ ಶೂದ್ರ ಆಶಾಢಭೂತಿಗಳ ಬಾಯಲ್ಲಿ ದೇಶಪ್ರೇಮ, ರಾಷ್ಟ್ರೀಯತೆ ಎಂದು ಹೇಳಿಸಿ ಬಹುಸಂಖ್ಯಾತರನ್ನು ವಂಚಿಸುತ್ತಿದೆ.
ಇಂಥ ಹಿನ್ನೆಲೆ, ಮೂಲದ ಪರಿವಾರದ ನೀತಿಯ ಸಮರ್ಥಕರು,ಪೋಷಕರೂ ಆದ ಕಾಗೇರಿ ಮತ್ತು ಬಿ.ಜೆ.ಪಿ. ತಮ್ಮವರು ಮತ್ತು ತಮ್ಮ ಪರವಾಗಿರುವವರಿಗೆ ಒಂದು ನೀತಿ, ಅನ್ಯರಿಗೆ ಒಂದು ನೀತಿ ಎನ್ನುವ ತಾರತಮ್ಯವನ್ನು ಉತ್ತೇಜಿಸುತ್ತಾ, ಪೋಶಿಸುತಿದ್ದಾರೆ.
ಭೌದ್ಧಿಕ, ಮಾನಸಿಕ ಗುಲಾಮಿತನದ ಪ್ರತಿಪಕ್ಷಗಳು, ವಿರೋಧಿ ನಾಯಕರೆದುರು ಸುಳ್ಳನ್ನು ಸತ್ಯ, ಸತ್ಯವನ್ನು ಸುಳ್ಳುಮಾಡುವ ಸಂಘದ ನೀತಿಯನ್ನು ಪೋಶಿಸುತ್ತಿರುವ ಕಾಗೇರಿ ಪರಿವಾರ ಬಿ.ಜೆ.ಪಿ. ಮತ್ತು ಉಳ್ಳವರನ್ನು ಬಳಸಿಕೊಂಡೇ ರಾಜ್ಯದ ವಿಧಾನಸಭೆ,ಆಡಳಿತದಲ್ಲಿ ಗುಜರಾತ್ ಮಾದರಿಯಂತೆ! ಉತ್ತರಕನ್ನಡ ಮಾದರಿಯನ್ನೇ ಜಾರಿ ಮಾಡಲು ಹೊರಟಂತಿದೆ. ಮೇಲ್ನೋಟಕ್ಕೆ ಸಜ್ಜನಿಕೆ,ಸರಳತೆ ಎನ್ನುವಂತಿರುವ ಅವರ ನಡತೆ, ವ್ಯಕ್ತಿತ್ವ, ಆಚರಣೆಗಳು ಶುದ್ಧ ದ್ರೋಹದ ನಾಟಕ ಎನ್ನುವ ಸತ್ಯ ಉತ್ತರಕನ್ನಡ ಜಿಲ್ಲೆ ಸೇರಿದ ರಾಜ್ಯದ ಕೆಲವರಿಗಾದರೂ ತಿಳಿದಿರುವ ಸತ್ಯ.
ಈಗ ಕಾಗೇರಿ ಶಾಸನ ಸಭೆಯಲ್ಲಿ ರಾಜ್ಯದ ಸಂಕಷ್ಟ, ತೊಂದರೆಯಲ್ಲಿರುವ ಜನರ ಬಗ್ಗೆ ಚರ್ಚೆಗೆ ಅವಕಾಶ ನೀಡದಿರುವುದು, ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಅವರ ಅಸಲಿ ಗುಣ,ಸಂಘದ ನೀಚ ನೀತಿಯ ಪ್ರತಿಬಿಂಬ.
ಈಗ ವಿಧಾನಸಭಾ ಅಧ್ಯಕ್ಷರಾಗಿ ಸದನದಲ್ಲಿ ಜನವಿರೋಧಿಯಾಗಿ ವರ್ತಿಸುತ್ತಿರುವ ಸಭಾಪತಿ ಕಾಗೇರಿ ಮತ್ತವರ ಪರಿವಾರ ಲಾಗಾಯ್ತಿನಿಂದಲೂ ಇಂಥದ್ದೇ ದುಷ್ಟ ನಡವಳಿಕೆಗಳಿಂದ ಜನಾಭಿಪ್ರಾಯ ವಶಪಡಿಸಿಕೊಳ್ಳುವ ಅನೇಕ ತಂತ್ರಗಳನ್ನು ಮಾಡಿದೆ. ಮಾಧ್ಯಮಗಳು, ವಿರೋಧಪಕ್ಷಗಳು ವಿಶ್ವೇಶ್ವರ ಹೆಗಡೆಯಂಥ ಸಂಘನಿಷ್ಟರ ಹರಾಮಿತನವನ್ನು ಸಕಾಲದಲ್ಲಿ ವಿರೋಧಿಸುವ ಮೂಲಕ ಅವರ ಲಾಗಾಯ್ತಿನ ಮುಖವಾಡವನ್ನು ಕಳಚಿದಂತಾಗಿದೆ. ಮುಖ್ಯಮಂತ್ರಿ,ಸಭಾಧ್ಯಕ್ಷರಂಥ ಉನ್ನತ ಹುದ್ದೆಯಲ್ಲಿ ಕುಳಿತು ಜನವಿರೋಧಿಯಾಗಿ ವರ್ತಿಸುವ ಬಿ.ಜೆ.ಪಿ.ಯ ರಾಜ್ಯ ಮತ್ತು ಕೇಂದ್ರದ ಸರ್ವಾಧಿಕಾರಿತನ ಅವರ ಸಂಘನಿಷ್ಟರ ಅಧಿಕಾರದಿಂದ ಅನುಷ್ಠಾನವಾಗುತ್ತಿದೆ.
ಎಲ್ಲದನ್ನೂ ಎಲ್ಲವನ್ನೂ ಲಾಭದ ಲೆಕ್ಕಾಚಾರದ ಮೂಲಕ ನೋಡುವ ಇಂಥ ಸಂಘಿಗಳ ಸಂಘದ ನಡೆಯನ್ನು ಸಕಾಲದಲ್ಲಿ ವಿರೋಧಿಸುವ ಮೂಲಕ ವಿಪಕ್ಷಗಳು, ಮಾಧ್ಯಮಗಳು ತಮ್ಮ ಪ್ರಬುದ್ಧತೆ ಪ್ರದರ್ಶನ ಮಾಡಿದ್ದಾರೆ. ಇಂಥ ನಡೆಗೆ ಬೆಂಬಲಿಸದ ವ್ಯವಸ್ಥೆ ನಿಧಾನವಾಗಿ ಸರ್ವಾಧಿಕಾರಿ, ಪ್ಯಾಸಿಷ್ಟ್ ವ್ಯವಸ್ಥೆಯಾಗಿ ತನ್ನ ಅಸಲಿತನ ಪ್ರದರ್ಶಿಸುವ ಮೂಲಕ ಹಬ್ಬುತ್ತಿರುವ ಮೋದಿ, ಕಾಗೇರಿ ಗಳ ಜನವಿರೋಧಿ ಸಂಘದ ನೀತಿಯನ್ನು ಸಾರ್ವತ್ರಿಕವಾಗಿ ವಿರೋಧಿಸಲು ಇದೇ ಸಕಾಲ. ಮೋದಿ ಗುಜರಾತ್ ನಲ್ಲಿ ಮಾಡಿದ್ದು ಶಿರಸಿ ಶಾಸಕ, ಉತ್ತರ ಕನ್ನಡ ಸಂಸದರು ಶಿರಸಿ- ಉತ್ತರ ಕನ್ನಡದಲ್ಲಿ ಮಾಡುತ್ತಿರುವುದು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಜನವಿರೋಧಿತನದ ನಡವಳಿಕೆಗಳು ಎನ್ನುವ ಜನಜಾಗೃತಿಯಾಗುವ ಮೂಲಕ ಉಳ್ಳವರ ಬಹುಜನ ವಿರೋಧಿ,ಗಣತಂತ್ರವಿರೋಧಿ ಅವ್ಯವಸ್ಥೆಗೆ ನಿಯಂತ್ರಣ ತರುವ ಕೆಲಸ ತುರ್ತಾಗಿ ಆಗಬೇಕಿದೆ.
ಗ್ರಾಹಕರಿಗೆ ಎಲ್.ಐ.ಸಿ.ಯಿಂದ ಸಿಹಿಸುದ್ದಿ,ಜಿಯೋದಿಂದ ಕಹಿಸುದ್ದಿ
ದೇಶದ ಸಾರ್ವಜನಿಕ ಸ್ವತ್ತು ಭಾರತೀಯ ಜೀವ ವಿಮಾ ನಿಗಮ ಮತ್ತು ಖಾಸಗಿ ಸಂಸ್ಥೆ ಜಿಯೋ ಏಕಕಾಲದಲ್ಲಿ ವ್ಯತಿರಿಕ್ತ ಸುದ್ದಿಗಳನ್ನು ನೀಡಿವೆ. ಸಾರ್ವಜನಿಕ ನಿಗಮ ಎಲ್.ಐ.ಸಿ. ತನ್ನ ಗ್ರಾಹಕರಿಗೆ ನಿಗಮ ಲಾಭದಲ್ಲಿದೆ,ಭದ್ರವಾಗಿದೆ. ಕೆಲವು ವಿದ್ಯಮಾನಗಳು,ಬದಲಾವಣೆಯಿಂದ ಕೇಂದ್ರಸರ್ಕಾರ ನಷ್ಟದ ಉದ್ಯಮಗಳಲ್ಲಿ ಎಲ್.ಐ.ಸಿ. ಯಿಂದ ಹೂಡಿಕೆ ಮಾಡಿಸಿ ಹಾನಿ ಮಾಡುತ್ತಿದೆ ಎಂಬರ್ಥದ ಗಾಳಿಸುದ್ದಿಗಳು ಸಾಂಕ್ರಾಮಿಕವಾಗಿವೆ. ಆದರೆ ನಿಗಮ ಸಾರ್ವಜನಿಕ ಸಹಭಾಗಿತ್ವದ ಸಂಸ್ಥೆಯಾಗಿದ್ದು ಸಂಸ್ಥೆ ಪಾಲಸಿ ವಿಷಯಗಳನ್ನುಬೋರ್ಡ್‍ನಲ್ಲಿ ತೀರ್ಮಾನಿಸುತ್ತದೆ.ಸರ್ಕಾರದ ನೀತಿ-ನಿಯಮಗಳು ನಮಗೆ ಅನ್ವಯಿಸುತ್ತವೆಯಾದರೂ ಬೋರ್ಡ್ ತೀರ್ಮಾನದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲು ಅವಕಾಶವಿರುವುದಿಲ್ಲ ಹೀಗಾಗಿ ಅನಿರೀಕ್ಷಿತ ವಿದ್ಯಮಾನಗಳು ಎಲ್.ಐ.ಸಿ.ಗೆ ಸಂಬಂಧಿಸಿದ ಗಾಳಿ ಸುದ್ದಿಗಳ ಬಗ್ಗೆ ಜನತೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಎಲ್.ಐ.ಸಿ. ಪ್ರಕಟಣೆ ನೀಡಿದೆ.


