
ದೇಶದ ಸಾರ್ವಜನಿಕ ಸ್ವತ್ತು ಭಾರತೀಯ ಜೀವ ವಿಮಾ ನಿಗಮ ಮತ್ತು ಖಾಸಗಿ ಸಂಸ್ಥೆ ಜಿಯೋ ಏಕಕಾಲದಲ್ಲಿ ವ್ಯತಿರಿಕ್ತ ಸುದ್ದಿಗಳನ್ನು ನೀಡಿವೆ. ಸಾರ್ವಜನಿಕ ನಿಗಮ ಎಲ್.ಐ.ಸಿ. ತನ್ನ ಗ್ರಾಹಕರಿಗೆ ನಿಗಮ ಲಾಭದಲ್ಲಿದೆ,ಭದ್ರವಾಗಿದೆ. ಕೆಲವು ವಿದ್ಯಮಾನಗಳು,ಬದಲಾವಣೆಯಿಂದ ಕೇಂದ್ರಸರ್ಕಾರ ನಷ್ಟದ ಉದ್ಯಮಗಳಲ್ಲಿ ಎಲ್.ಐ.ಸಿ. ಯಿಂದ ಹೂಡಿಕೆ ಮಾಡಿಸಿ ಹಾನಿ ಮಾಡುತ್ತಿದೆ ಎಂಬರ್ಥದ ಗಾಳಿಸುದ್ದಿಗಳು ಸಾಂಕ್ರಾಮಿಕವಾಗಿವೆ. ಆದರೆ ನಿಗಮ ಸಾರ್ವಜನಿಕ ಸಹಭಾಗಿತ್ವದ ಸಂಸ್ಥೆಯಾಗಿದ್ದು ಸಂಸ್ಥೆ ಪಾಲಸಿ ವಿಷಯಗಳನ್ನುಬೋರ್ಡ್‍ನಲ್ಲಿ ತೀರ್ಮಾನಿಸುತ್ತದೆ.ಸರ್ಕಾರದ ನೀತಿ-ನಿಯಮಗಳು ನಮಗೆ ಅನ್ವಯಿಸುತ್ತವೆಯಾದರೂ ಬೋರ್ಡ್ ತೀರ್ಮಾನದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲು ಅವಕಾಶವಿರುವುದಿಲ್ಲ ಹೀಗಾಗಿ ಅನಿರೀಕ್ಷಿತ ವಿದ್ಯಮಾನಗಳು ಎಲ್.ಐ.ಸಿ.ಗೆ ಸಂಬಂಧಿಸಿದ ಗಾಳಿ ಸುದ್ದಿಗಳ ಬಗ್ಗೆ ಜನತೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಎಲ್.ಐ.ಸಿ. ಪ್ರಕಟಣೆ ನೀಡಿದೆ.
ಇದು ಎಲ್.ಐ.ಸಿ. ಯಿಂದ ದೇಶದ ಜನತೆಗೆ ಸಿಕ್ಕ ಖುಷಿಯ ಸುದ್ದಿಯಾದರೆ
ಈಗಿನ ಕೇಂದ್ರ ಸರ್ಕಾರದ ಫಲಾನುಭವಿ ಸಂಸ್ಥೆಯಾದ ಜಿಯೋ ಕಳೆದ ನಾಲ್ಕೈದು ವರ್ಷಗಳಿಂದ ಕೊಟ್ಟ ವೇಗದ ಅಂತರ್ಜಾಲ ಮತ್ತು ಟಾಕ್‍ಟೈಮ್ ಮೇಲೆ ಕೂಡಾ ಹಣ ಆಕರಿಸುವ ಶಾಕಿಂಗ್ ಸುದ್ದಿ ನೀಡಿದೆ. ಜಿಯೋದಿಂದ ಗ್ರಾಹಕರಿಗೆ ಸಂದೇಶಗಳು ಬರುತಿದ್ದು ಅವು ಜಿಯೋ ಮತ್ತು ಅನ್ಯ ಸಂಪರ್ಕಜಾಲದ ಅಂತರ್ಜಾಲ ಮತ್ತು ಮಾತನಾಡುವ ಸಮಯದ ಮೇಲೆ ದರ ಆಕರಿಸುವ ಸೂಚನೆ ನೀಡಿದೆ.
ಇದೇ ತಿಂಗಳಿಂದಲೇ ಜಿಯೋ ದಿಂದ ಅನ್ಯ ನೆಟ್ವರ್ಕ್ ಗಳಿಗೆ ಕರೆ ಮಾಡಿದರೆ ನಿಮಿಷಕ್ಕೆ 6 ಪೈಸೆ ಚಾರ್ಜ್ ವಿಧಿಸಲಿದೆ. ಈ ದರ ಜಿಯೋದಿಂದ ಜಿಯೋ ಗೆ ಅನ್ವಯಿಸುವುದಿಲ್ಲ ಅಂದರೆ ಜಿಯೋದಿಂದ ಜಿಯೋ ಮೊಬೈಲ್,ಜಿಯೋದಿಂದ ಜಿಯೋ ಲ್ಯಾಂಡ್ ಲೈನ್ಗಳಿಗೆ ಚಾರ್ಚ್ ರಿಯಾಯತಿ ಇದೆ. ಆದರೆ ಜಿಯೋದಿಂದ ಅನ್ಯ ಸಂಪರ್ಕಜಾಲ ಸಂಸ್ಥೆಗಳ ಕರೆಗಳಿಗೆ ನಿಮಿಷಕ್ಕೆ 6ಪೈಸೆ ತಗುಲಲಿದೆ.
ವಾಹನವಿಮೆ,
ಆರೋಗ್ಯವಿಮೆ,
ಜೀವವಿಮೆ ಮಾಡಿಸುವವರು ಕರೆ ಮಾಡಿ-8277517164
