

ಸಿದ್ದಾಪುರ; ತಾಲೂಕಿನಾದ್ಯಂತ ಇಂದು ಭೂಮಿಪೂಜೆ (ಶೀಗೆ ಹುಣ್ಣಿಮೆ) ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ತಾವು ಬೆಳೆದ ಬೆಳೆ ಇನ್ನೇನು ಕೈಗೆ ಬರುವ ಹಂತದಲ್ಲಿ ಇದೆ. ಹೀಗಿರುವಾಗ ಭೂತಾಯಿಗೆ ಸೀಮಂತ ಕಾರ್ಯ ನೆರವೇರಿಸಲು ಮಹಿಳೆಯರು ಸಡಗರದಿಂದ ರಾತ್ರಿಯಿಂದಲೇ ಬಯಕೆಯ ಅಡುಗೆಗಳನ್ನು ಸಿದ್ದಪಡಿಸುತ್ತಾರೆ. ಕಡುಬು, ಕಜ್ಜಾಯ, ವಿವಿಧಬಗೆಯ ಪಲ್ಯೆ ಸೇರಿದಂತೆಹಲವು ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ. ಬೆಳಿಗ್ಗೆ ತಮ್ಮತಮ್ಮ ಹೊಲಗದ್ದೆಗಳಿಗೆ ತೆರಳಿ ಭೂಮಿತಾಯಿಯನ್ನು ಶೃಂಗಾರ ಮಾಡಿ ಪೂಜೆ ನೆರವೆರಿಸುತ್ತಾರೆ. ಬೆಳಿಗ್ಗೆಯಿಂದಲೇ ಹೋಯ್…ಹೋಯ್…ಹೋಯ್ ಎಂಬ ಧ್ವನಿ ಕೇಳುವುದೇ ಎಲ್ಲಿಲ್ಲದ ಆನಂದ. ನಂತರ ಹೊಲದಲ್ಲಿ ಕುಳಿತು ಊಟಮಾಡಿ ಮನೆಗೆ ತೆರಳುತ್ತಾರೆ.ಹೊಲದಲ್ಲಿ ಊಟ ಮಾಡುವುದೇ ಒಂದು ಸಂತೋಷದ ಕ್ಷಣ.











