60 ವರ್ಷಗಳ ಸಮಸ್ಯೆಗೆ 50 ವರ್ಷಗಳ ಹೋರಾಟ!


ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಅರಣ್ಯ ಅಧಿಕಾರಿಗಳು ಸರ್ಕಾರ,ಜನಪ್ರತಿನಿಧಿಗಳ ಮಾತು ಕೇಳುತ್ತಿಲ್ಲ ಎಂದು ಕಳೆದ ವಾರ ಸಭಾಧ್ಯಕ್ಷರಾಧಿಯಾಗಿ ಬಹುತೇಕ ಜನಪ್ರತಿನಿಧಿಗಳು ರಾಜ್ಯ ವಿಧಾನಸಭೆ ಕಲಾಪದಲ್ಲಿ ಅಲವತ್ತುಕೊಂಡಿದ್ದಾರೆ.
ಹಿಂದಿನ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಆ ಬಹುರ್ಹುಕುಂ ಸಾಗವಳಿದಾರರಿಗೆ ಪಟ್ಟಾ ಕೊಟ್ಟು ನನಗೆ ನೆಮ್ಮದಿಯಿಂದ ಸಾಯಲು ಬಿಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿನಂತಿಸಿದ್ದರು.
ಹೀಗೆ ಅರಣ್ಯ ಇಲಾಖೆ, ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಅನೇಕರ ತಲೆನೋವಿನ ವಿಚಾರ ಈ ಅರಣ್ಯ ಅತಿಕ್ರಮಣ ಅಥವಾ ಬಗುರ್ ಹುಕುಂ. ಉತ್ತರಕನ್ನಜಿಲ್ಲೆಯೊಂದರಲ್ಲೇ ಲಕ್ಷಾಂತರ ಪ್ರಕರಣಗಳು ರಾಜ್ಯದಲ್ಲಿ ಸರಿಸುಮಾರು ಹತ್ತು ಲಕ್ಷ ಅತಿಕ್ರಮಣ ಪ್ರಕರಣಗಳು ಸೇರಿ ಕೋಟ್ಯಂತರ ಜನರ ಬದುಕು-ಜನಜೀವನದ ತೊಂದರೆಯಾಗಿರುವ ಅರಣ್ಯ ಅತಿಕ್ರಮಣ ಹೋರಾಟಕ್ಕೆ ಒಂದು ಹಿನ್ನೆಲೆಯಿದೆ.
1970ರ ದಶಕದಲ್ಲಿ ಉತ್ತರಕನ್ನಡದ ಸಂಸದರಾಗಿದ್ದ ಡಾ.ದಿನಕರ ದೇಸಾಯಿ ಅಂದಿನ ನಾಡ ದೊರೆಗಳ ಎದುರು ಉತ್ತರಕನ್ನಡ ಜಿಲ್ಲೆಯ ಅರಣ್ಯ ಸಾಗುವಳಿದಾರರ ಸಮಸ್ಯೆ ಬಗ್ಗೆ ಹೇಳಿ-ಕೇಳಿ ನಂತರ ಚಳವಳಿ ನಡೆಸಿ, ಪ್ರತಿಭಟನೆಗಳ ಮೂಲಕ ಸರ್ಕಾರಕ್ಕೆ ಈ ಸಮಸ್ಯೆಯ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದ್ದರು. ಅಂದಿನ ರಾಜ್ಯ-ಕೇಂದ್ರ ಸರ್ಕಾರಗಳ ಎದುರು ದಣಿವರಿಯದ ಹೋರಾಟ ನಡೆಸಿದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂದಿನ ಜನನಾಯಕ ಡಾ.ದಿನಕರ ದೇಸಾಯಿಯವರಿಂದ ಪ್ರಾರಂಭವಾಗಿ ಇಂದಿನ ರವೀಂದ್ರನಾಯ್ಕ ರ ವರೆಗೆ ರಾಜ್ಯದ ನೂರಾರು ಜನ ಹೋರಾಟಗಾರರು ಸಾವಿರಾರು ಬಾರಿ ಪ್ರತಿಭಟನೆ,ಹೋರಾಟ, ಚಳವಳಿ ಮಾಡಿ ಅರಣ್ಯ ಸಾಗುವಳಿ ಭೂಮಿ ಹಕ್ಕಿಗಾಗಿ ಹೋರಾಡಿದ್ದಾರೆ. ಆದರೆ, ಈ 50-60 ವರ್ಷಗಳಲ್ಲಿ ರಾಜ್ಯದ ನೂರಾರು ಜನರೂ ಈ ಅರಣ್ಯಭೂಮಿಯ ಸಾಗುವಳಿ ಹಕ್ಕು ಪಡೆದಿಲ್ಲ. ಈಗ ಇದೇ ಅರಣ್ಯಭೂಮಿ ಸಾಗುವಳಿದಾರರಿಗೆ ಅಭಯಾರಣ್ಯ, ಜಿ.ಪಿ.ಎಸ್.ಕಿರಿಕಿರಿಗಳು ಸೇರಿದ ಅನೇಕ ಬಾಧೆಗಳು ಕಾಡತೊಡಗಿವೆ. ಈ ಸಮಯದಲ್ಲಿ 2005-2006 ರ ಅರಣ್ಯ ಹಕ್ಕು ಅಧಿನಿಯಮ ಪರಿಶಿಷ್ಟರನ್ನು ಹೊರತುಪಡಿಸಿ ಇತರ ಯಾವ ಅರಣ್ಯಭೂಮಿಸಾಗುವಳಿದಾರರಿಗೂ ನೆರವಾಗಿಲ್ಲ.
ಇದೇ ಅಧಿಸೂಚನೆ ಅಡಿ ನಕ್ಸಲ್ ಬಾಧಿತರು ಮತ್ತು ಬಾಧಿತ ಪ್ರದೇಶಗಳ ವಿಶೇಶ ಅರ್ಹತೆ/ರಿಯಾಯತಿಗಳು ದಾಖಲೆಯಲ್ಲಿ ಮಾತ್ರ ಎನ್ನುವಂತಾಗಿವೆ. ವಾಸ್ತವ ಹೀಗಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಈಗ ಮಳೆ, ಪ್ರವಾಹದಲ್ಲಿ ನಿರಾಶ್ರತರಾಗಿರುವವರಿಗೂ ಮಾನವೀಯತೆ ಆಧಾರದ ಕರುಣೆಯಿಂದ ಅತಿಕ್ರಮಣ ಮಾನ್ಯತೆ,ಅಕ್ರಮ-ಸಕ್ರಮಗಳಿಗೆ ಅವಕಾಶವಾಗಿಲ್ಲ.
ಇದೇ ವಿಷಯವನ್ನಿಟ್ಟುಕೊಂಡು ಹೋರಾಟ ಮಾಡುತ್ತಿರುವ ಉತ್ತರಕನ್ನಡ ಜಿಲ್ಲೆಯ ಅರಣ್ಯ ಹಕ್ಕು ಹೋರಾಟ ಸಮಿತಿ ಸೋಮುವಾರ ಮುಂಡಗೋಡಿನಲ್ಲಿ ಬೃಹತ್ ಸಮಾವೇಶ ಏರ್ಪಡಿಸಿದೆ.
ಈ ಸಮೀತಿಯ ಅಧ್ಯಕ್ಷ ಎ.ರವೀಂದ್ರ ರಿಗೆ ಇಂಥ ಹೋರಾಟ, ಚಳವಳಿ, ಸಮಾವೇಶಗಳ ಲೆಕ್ಕವೂ ಇಲ್ಲ, ಅದರಿಂದ ಫಲವೂ ಇಲ್ಲ ಎನ್ನುವ ಅನುಭವ. ಆದರೆ, ಈ ಮೂವತ್ತು ವರ್ಷಗಳಿಂದ ಎದೆಗುಂದದ ರವೀಂದ್ರ ಈಗಲೂ ಅದೇ ಹಳೆ ಹುರುಪಿನಿಂದ ಪ್ರತಿಭಟನೆ, ಹೋರಾಟ, ಚಳವಳಿ ಸಂಘಟಿಸುತಿದ್ದಾರೆ. ಆಳುವವರು, ನಿರ್ಣಾಯಕ ಸ್ಥಾನದಲ್ಲಿರುವ ಜನನಾಯಕರಿಗೆ ಬೇಡವಾಡ ಈ ಜನಸಾಮಾನ್ಯರ ಹಕ್ಕಿನ ಪ್ರಶ್ನೆ ಪ್ರಭುತ್ವದೆದುರು ಬಡವನ ಸಿಟ್ಟು ದವಡೆಗೆ ಮೂಲ ಎನ್ನುವಂತಾಗಿದೆ.
ಉತ್ತರಕನ್ನಡದ ಲಕ್ಷಾಂತರ ಅರಣ್ಯ ಹಕ್ಕು ಸಾಗುವಳಿದಾರರು ಸೇರಿದ ರಾಜ್ಯದ ಹತ್ತುಲಕ್ಷ ಸಂಖ್ಯೆಯ ಜನ, ಕುಟುಂಬಗಳಿಗೆ ತಮ್ಮ ನೆಲೆ-ಜೀವನೋಪಾಯದ ಅರಣ್ಯಭೂಮಿ ತಮ್ಮದಾಗುವ ಹಿನ್ನೆಲೆಯಲ್ಲಿ ರಾಜ್ಯ, ಕೇಂದ್ರ ಸರ್ಕಾರಗಳ ಸಹಾನುಭೂತಿಯೂ ದೊರೆತಿಲ್ಲ.
ಅರಣ್ಯಭೂಮಿ ಸಾಗುವಳಿದಾರರು, ಅವರ ಹೋರಾಟಗಾರರು ಭೂಮಿಗಾಗಿ ಅಲೆಯುವ ಚೋಮನಂತಾಗಿದ್ದು ರವೀಂದ್ರ ರ ಹೋರಾಟ ಅವರ ಬವಣೆ-ನೋವಿಗೆ ಸಾಂತ್ವನ ಬಿಟ್ಟರೆ ಮದ್ದಾಗಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಆಳುವವರಿಗೆ ಅರಿಯದ ಸಮಸ್ಯೆ, ಕಾಣದ ತೊಂದರೆಯಾಗಿರುವ ಅರಣ್ಯ ಹಕ್ಕು ಬೇಡಿಕೆದಾರರ ಹೋರಾಟ ಫಲನೀಡದಿದ್ದರೆ ಶತಮಾನದ ಸಮಸ್ಯೆಯೊಂದು ಹಾಗೇ ಮುಂದುವರಿದಂತೆ. ಈ ದಿಸೆಯಲ್ಲಿ ಆಶಾದಾಯಕ ಸ್ಫಂದನಕ್ಕೆ ಎದುರು ನೋಡುತ್ತಿರುವ ಅರಣ್ಯಭೂಮಿ ಅತಿಕ್ರಮಣದಾರರು ತಮ್ಮ ನೆಲೆಯಲ್ಲೇ ಪರಕೀಯರಾಗಿರುವುದು ಸಾಮಾಜಿಕ ಅನಿಷ್ಟಕ್ಕಿಂತ ಕಡಿಮೆಯಲ್ಲ. -ಕನ್ನೇಶ್ ಕೋಲಶಿರ್ಸಿ,ಸಿದ್ಧಾಪುರ(ಉ.ಕ.)

ಮಲೆನಾಡಿನ ಭೂಮಣಿ ಹಬ್ಬದ ವಿಭಿನ್ನ ದೃಶ್ಯಗಳು
ಸಿದ್ದಾಪುರ; ತಾಲೂಕಿನಾದ್ಯಂತ ಇಂದು ಭೂಮಿಪೂಜೆ (ಶೀಗೆ ಹುಣ್ಣಿಮೆ) ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ತಾವು ಬೆಳೆದ ಬೆಳೆ ಇನ್ನೇನು ಕೈಗೆ ಬರುವ ಹಂತದಲ್ಲಿ ಇದೆ. ಹೀಗಿರುವಾಗ ಭೂತಾಯಿಗೆ ಸೀಮಂತ ಕಾರ್ಯ ನೆರವೇರಿಸಲು ಮಹಿಳೆಯರು ಸಡಗರದಿಂದ ರಾತ್ರಿಯಿಂದಲೇ ಬಯಕೆಯ ಅಡುಗೆಗಳನ್ನು ಸಿದ್ದಪಡಿಸುತ್ತಾರೆ. ಕಡುಬು, ಕಜ್ಜಾಯ, ವಿವಿಧಬಗೆಯ ಪಲ್ಯೆ ಸೇರಿದಂತೆಹಲವು ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ. ಬೆಳಿಗ್ಗೆ ತಮ್ಮತಮ್ಮ ಹೊಲಗದ್ದೆಗಳಿಗೆ ತೆರಳಿ ಭೂಮಿತಾಯಿಯನ್ನು ಶೃಂಗಾರ ಮಾಡಿ ಪೂಜೆ ನೆರವೆರಿಸುತ್ತಾರೆ. ಬೆಳಿಗ್ಗೆಯಿಂದಲೇ ಹೋಯ್…ಹೋಯ್…ಹೋಯ್ ಎಂಬ ಧ್ವನಿ ಕೇಳುವುದೇ ಎಲ್ಲಿಲ್ಲದ ಆನಂದ. ನಂತರ ಹೊಲದಲ್ಲಿ ಕುಳಿತು ಊಟಮಾಡಿ ಮನೆಗೆ ತೆರಳುತ್ತಾರೆ.ಹೊಲದಲ್ಲಿ ಊಟ ಮಾಡುವುದೇ ಒಂದು ಸಂತೋಷದ ಕ್ಷಣ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *