

ಕಳೆದ ಬುಧವಾರ ಸಿದ್ಧಾಪುರದಿಂದ ಮಂಗಳೂರಿಗೆ ಹೊರಟಿದ್ದ ಕಾರಿನಲ್ಲಿದ್ದ ಸರೋಜಿನಿ ನಾಯ್ಕರ ಮಕ್ಕಳು ಮೊಮ್ಮಕ್ಕಳು ಸೇರಿ ಒಟ್ಟೂ ಏಳು ಜನ ಅಪಘಾತದಿಂದ ತೀವೃವಾಗಿ ಗಾಯಗೊಂಡಿದ್ದರು. ತೀವೃಸ್ವರೂಪದ ಗಾಯಗಳಾದ ಇಡೀ ಕುಟುಂಬವನ್ನು ಶಿವಮೊಗ್ಗ ಮತ್ತು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿತ್ತು

ಬಲು ಅಪರೂಪದ ಮಡಮಾಸ್ ಮೀನು ಸಿದ್ಧಾಪುರದ ಮೀನುಮಾರುಕಟ್ಟೆಗೆ ಬಂದಿದ್ದು ತಡವಾಗಿ ಸುದ್ದಿಯಾಗಿದೆ. ಕಳೆದ ವಾರ ಮಹಾರಾಷ್ಟ್ರದಿಂದ ಬಂದ ಮೀನುಗಾಡಿಯಲ್ಲಿ 35 ಕೇಜಿ ಯ ಒಂದು ಮಡಮಾಸ್ ಮೀನು ಬಂದಿದ್ದು ನೋಡಿ ಮೀನು ಪ್ರೀಯರು ಕಣ್ಣರಳಿಸಿದರು. ಮೀನು ಬಿರ್ಯಾನಿಗೆ ಬಳಸುವ ಈ ಮೀನನ್ನು ಕತ್ತರಿಸಿ, ವಿಭಾಗಿಸಿದ ಸುನಿಲ್ ಆತ್ಮೀಯರಿಗೆ ಕೊಟ್ಟು ಸಂಬ್ರಮಿಸಿದರು. ಇತ್ತೀಚಿನ ದಿನಗಳಲ್ಲಿ ಇಷ್ಟು ದೊಡ್ಡಗಾತ್ರದ ಮೀನು ಸಿದ್ದಾಪುರ ಮೀನುಮಾರುಕಟ್ಟೆಗೆ ಬಂದಿದ್ದೇ ಅಪರೂಪ ಎನ್ನುತ್ತಾರೆ ಇಲ್ಲಿಯ ಮೀನುವ್ಯಾಪಾರಿಗಳು.

ತಹಸಿಲ್ದಾರ ಗೀತಾ ವರ್ಗಾವಣೆ
ಸಿದ್ದಾಪುರದ ತಹಸಿಲ್ದಾರರಾಗಿ ಕಾರ್ಯನಿರ್ವಹಿಸುತ್ತಾ ಒಂದು ವರ್ಷವೂ ಪೂರ್ತಿಯಾಗದ ಸಮಯದಲ್ಲಿ ಗೀತಾಸಿ.ಜಿ.ಯವರ ವರ್ಗಾವಣೆಯಾಗಿದೆ.ಇವರ ಜಾಗಕ್ಕೆ ಸಾಗರದ ಮಂಜುಳಾ ಭಜಂತ್ರಿ ಆಗಮಿಸಲಿದ್ದು ಸೋಮುವಾರ ಅಥವಾ ಮಂಗಳವಾರ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನುವ ಸುದ್ದಿಯಾಗಿದೆ.


