ಸ್ವರ್ಗ ಸಂಗೀತಕ್ಕೆ ತೆರೆದುಕೊಂಡ ವೇದಿಕೆ

ಗೋಸ್ವರ್ಗದಲ್ಲಿ ಸ್ವರ್ಗ ಸಂಗೀತಕ್ಕೆ ತೆರೆದುಕೊಂಡ ವೇದಿಕೆ
ಅಲ್ಲಿ ನಿಮ್ಮ ಸಂಗೀತ ಸುಧೆಯನ್ನು ಹರಿಸಲು ವಿಫುಲ ಅವಕಾಶ ಕಲ್ಪಿಸಲಾಗಿದೆ.
ಆದರೆ ವಾಹ್-ಭೇಷ್ ಎನ್ನುವ, ಆಗಾಗ ತಲೆದೂಗುವ, ಚಪ್ಪಾಳೆಯ ಸುರಿಮಳೆಗರೆವ, ತಮ್ಮಗಾಯನ ವೈಖರಿಯನ್ನು ವಿಮರ್ಶೆಗೆ ಹಚ್ಚುವ, ಕಾರ್ಯಕ್ರಮದ ನಂತರ ತಮ್ಮ ಬಳಿಬಂದು ಅಭಿನಂದನೆಯ ಮಾತುಗಳನ್ನಾಡುವ ಪ್ರೇಕ್ಷಕವರ್ಗವನ್ನು ತಮ್ಮ ಕಾರ್ಯಕ್ರಮದಲ್ಲಿ ನಿರೀಕ್ಷಿಸುವಂತಿಲ್ಲ.
ಗೌರವ ಧನವನ್ನಂತೂ ಮೊದಲೇ ಬಯಸುವಂತಿಲ್ಲ. ತಮ್ಮ ಆತ್ಮ ತೃಪ್ತಿಗೆ ತಾವು ಹಾಡಬಹುದು. ಅಲ್ಲಿ ತಮ್ಮ ಕಾರ್ಯಕ್ರಮಗಳಿಗೆ ಮೂಲಭೂತವಾದ ಅವಶ್ಯಕ ಪರಿಕರಗಳನ್ನಷ್ಟೇ ಪೂರೈಸಲಾಗುತ್ತದೆ. ಊಟೋಪಚಾರದ ವ್ಯವಸ್ಥೆಯೂ ಯಥಾಪ್ರಕಾರ ಇರುತ್ತದೆ. ಇಂತಹ ವಿನೂತನ ಪದ್ಧತಿಯಲ್ಲಿ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸುತ್ತಿರುವುದು ಗೋಸ್ವರ್ಗದಲ್ಲಿ.
ಸಿದ್ದಾಪುರ ತಾಲೂಕಿನ ಭಾನ್ಕುಳಿಯ ಶ್ರೀರಾಮದೇವಮಠದ ಪರಿಸರದಲ್ಲಿ. ಸ್ವರ್ಗ ಸಂಗೀತ ಶಿರೋನಾಮೆಯಲ್ಲಿ.
ಹೌದು! ಅಲ್ಲಿ ನಿಮಗೆ ನಿಮ್ಮ ಸಂಗೀತವನ್ನು ಆಸ್ವಾದಿಸುವ ಕೇಳುಗರಾದ ಮಾನವರು ಕಣ್ಣಿಗೆ ಕಾಣದಿರಬಹುದು. ಆದರೆ ನಿಮ್ಮ ಸಂಗೀತದ ಆಲಾಪನೆಗೆ ಸ್ಪಂದಿಸುವ ಸಾವಿರ ಗೋಮಾತೆಯರಿದ್ದಾರೆ.
ತಮ್ಮ ಎರಡುಸಾವಿರ ಕಿವಿಗಳನ್ನು ನಿಮಿರಿಸಿಕೊಂಡು ಅವುಗಳೂ ತಮ್ಮ ಸಂಗೀತ ಸುಧೆಯನ್ನು ಖಂಡಿತ ಸವಿಯುತ್ತವೆ. ಆಗಾಗ ಕರು-ಕಂದಮ್ಮಗಳು ತಮ್ಮ ಹಾಡಿಗೆ ಅಂಬಾ…ದನಿಗರೆಯುತ್ತಾ ನೆರವಲು ನೀಡಲೂಬಹುದು.
ಅಂತಹ ಪವಿತ್ರ ತಾಣದಲ್ಲಿ, ಗೋಮಾತೆಯ ಶುದ್ಧವಾದ ಉಸಿರಿನ ವಾತಾವರಣದಲ್ಲಿ, ಗೋವಿನ ಪದತಲದಲ್ಲಿ ಗಾಯಕರಾದ ತಾವೂ ಸಹ ತಮ್ಮ ಅಂತರಂಗ ತೃಪ್ತಿಗಾಗಿ, ಗೋವುಗಳ ಸಂತೋಷಕ್ಕಾಗಿ ಹಾಡುವ ಮನಸ್ಸಿದ್ದರೆ ತಡ ಮಾಡಬೇಡಿ. ಗೋಸ್ವರ್ಗದಲ್ಲಿಯ ಈ ಕುರಿತ ವ್ಯವಸ್ಥಾಪಕರನ್ನು(9480073956) ಸಂಪರ್ಕಿಸಿ. ತಮಗೂ ಅಲ್ಲಿ ಅವಕಾಶ ಒದಗಲಿದೆ.

ಶುಭಾರಂಭಗೊಂಡ ಸ್ವರ್ಗ ಸಂಗೀತ:
ಗೋಸ್ವರ್ಗದ ಪುಣ್ಯ ಪರಿಸರದಲ್ಲಿನ ಗೋಪದ ವೇದಿಕೆಯಲ್ಲಿ ಸ್ವರ್ಗ ಸಂಗೀತ ವಿಶಿಷ್ಟ ಕಾರ್ಯಕ್ರಮವು ವಿಜಯದಶಮಿಯ ಪರ್ವ ಕಾಲದಲ್ಲಿ ಶುಭಾರಂಭಗೊಂಡಿತು.
ಪ್ರಥಮ ಕಾರ್ಯಕ್ರಮದಲ್ಲಿ ಹಿಂದೂಸ್ಥಾನೀ ಗಾಯಕ ರಾಜೇಂದ್ರ ಬಾಳೇಹಳ್ಳಿ ತಮ್ಮ ಸುಮಧುರ ಕಂಠದಿಂದ ಗಾನಸುಧೆ ಹರಿಸಿ ಸಂಗೀತ ಸೇವೆ ನಡೆಸಿಕೊಟ್ಟರು. ಅವರಿಗೆ ತಬಲಾ ಸಾತ್ ನೀಡಿದವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀಕಾಂತ ಕಾಳಮಂಜಿ . ಹಾರ್ಮೊನಿಯಂ ನುಡಿಸಿ ಸಹಕರಿಸಿದವರು ಸಂಗೀತ ಶಿಕ್ಷಕ ರಾಜೇಂದ್ರ ಕೊಳಗಿಯವರು. ಪ್ರಥಮ ಸ್ವರ್ಗ ಸಂಗೀತ ಕಾರ್ಯಕ್ರಮವು ಹಲವು ತಾಸುಗಳ ಕಾಲ ನಡೆದು ಸಂಧ್ಯಾಕಾಲದ ಗೋಗಂಗಾರತಿಯೊಂದಿಗೆ ಮಂಗಲವಾಗಿದ್ದೂ ವಿಶೇಷವಾಗಿತ್ತು.

      ಇದು ಯುವಕರು,ನಿವೃತ್ತರು ಕಡ್ಡಾಯವಾಗಿ ಓದಲೇಬೇಕಾದ ಸ್ಟೋರಿ!

ಮಾರುತಿ
ಮಧುವನದ ಕತೆ
ಸಿದ್ಧಾಪುರ ತಾಲೂಕಿನ ಕಾನಗೋಡಿನ ನಿವೃತ್ತ ನೌಕರರೊಬ್ಬರು ಶ್ರೇಷ್ಠ ಜೇನು ಕೃಷಿಕರಾಗಿ ಜಿಲ್ಲೆಗೆ ಜೇನಿನ ಸವಿ ಉಣಿಸಿದ್ದಾರೆ.
ಮಾರುತಿ ಬೋರ್ಕರ್ ರಾಜ್ಯ ಸಾರಿಗೆ ಸಂಸ್ಥೆಯಮಾಜಿ ನೌಕರರು, ಕೃಷಿ ಪರಿಸರದ ಈ ನಿವೃತ್ತ ನೌಕರರಿಗೆ ಬಹಳ ಹಿಂದಿನಿಂದ ಜೇನು ತುಪ್ಪ, ಕೃಷಿಯ ಬಗ್ಗೆ ಆಸಕ್ತಿ ಇತ್ತಂತೆ. ನಿವೃತ್ತಿ ನಂತರ ಸಮಾನಮನಸ್ಕ ಜೇನು ಕೃಷಿಕರ ಸ್ನೇಹ ಮಾಡಿದ ಈ ಮಾರುತಿ ಈಗ ಮಾರುತಿ ಮಧುವನ ಎಂದೇ ಖ್ಯಾತರಾಗಿದ್ದಾರೆ.
ತಮ್ಮ ಹೆಸರಿನ ಬರೀ 5 ಗುಂಟೆ ಜಾಗದ ಜೊತೆಗೆ ಸಹೋದರರು, ಸ್ನೇಹಿತರು ಪರಿಚಿತರ ಮನೆಯಲ್ಲೆಲ್ಲಾ ಜೇನು ಗೂಡು ಇಡುವ ಇವರು ಕ್ವಿಂಟಾಲ್ ಲೆಕ್ಕದಲ್ಲಿ ಜೇನುಬೆಳೆಯುತ್ತಾರೆ. ಮಡದಿ ಮನೆ-ಮಂದಿಯನ್ನೆಲ್ಲಾ ಈ ಜೇನು ಕೃಷಿಗೆ ಬಳಸಿಕೊಳ್ಳುವ ಮಾರುತಿ ಬಿ.ಪಿ. ಶುಗರ್ ಸೇರಿದಂತೆ ನಾನಾ ಕಾಯಿಲೆಗಳಿರುವವರು ಈ ಜೇನಿನ ಸಂಘ ಮಾಡಿ ಆಗೀಗ ಕಚ್ಚಿಸಿಕೊಂಡರೆ ಔಷಧಿಯಂತೆ ಕೆಲಸಮಾಡುತ್ತದೆ ಎನ್ನುವ ಇವರು ಇಂಥ ಪ್ರಯೋಗಗಳಿಂದ ಹೆಸರು ಮಾಡಿದ್ದಾರೆ.
ಪ್ರಾಕೃತಿಕವಾಗಿ ಜೇನು, ನಸರಿ ಜೇನು ಬೆಳೆಯುವ ವಿಭಿನ್ನ ಪ್ರಯೋಗಗಳಲ್ಲಿ ಯಶಸ್ವಿಯಾಗಿರುವ ಇವರಿಗೆ ಜೇನು, ಜೇನುಕೃಷಿ ಬರಹಗಳೆಂದರೆ ಎಲ್ಲಿಲ್ಲದ ಪ್ರೀತಿ. ನೂರಾರು ಗೂಡುಗಳನ್ನು ಇಟ್ಟು ಜೇನು ತೆಗೆಯುತ್ತಾ ಫಲಕಂಡಿರುವ ಮಾರುತಿ ಕುಟುಂಬ ಮರದ ಪೊಟರೆಯಲ್ಲೇ ಔಷಧಿಗುಣಗಳ ಜೇನಿನ ಬೆಳೆ ಬೆಳೆದು ಖುಷಿ ಕಂಡಿದ್ದಾರೆ.
ಇವರು ಕ್ವಿಂಟಾಲ್ ಲೆಕ್ಕದಲ್ಲಿ ಬೆಳೆಯುವ ಜೇನಿನ ಸಾದಾ ಜೇನುತುಪ್ಪಕ್ಕೆ 250 ರಿಂದ ಕೇಜಿ.ಗೆ 300 ರೂಪಾಯಿ ಬೆಲೆಯಾದರೆ, ನಸ್ರಿ ತುಪ್ಪಕ್ಕೆ ಕನಿಷ್ಠ 2.5 ಸಾವಿರ ಒಂದು ಕೇಜಿ ತುಪ್ಪಕ್ಕೆ!. ಅಭ್ಯಾಸ, ಹವ್ಯಾಸಗಳಾಗಿ ಜೇನು ಕೃಷಿ ರೂಢಿಸಿಕೊಂಡಿರುವ ಮಾರುತಿ ಜೇನು ಕೃಷಿಯ ಆಸಕ್ತಿ-ಅಭಿರುಚಿ ವೃದ್ಧಿಸಿದ್ದು ಮಧುಕರ ಹೆಗಡೆಯವರ ಸ್ನೇಹ-ಸಹವಾಸದಿಂದ ಎನ್ನುವ ಇವರ ಮನೆಯಲ್ಲಿ ನಿತ್ಯ ಜೇನು ಉತ್ಫಾದನಾ ಪ್ರಾತ್ಯಕ್ಷಿಕೆ ನಡೆಯುತ್ತದೆ. ಜೇನು ಗೂಡು (ಪೆಟ್ಟಿಗೆ)ತಯಾರಿಕೆ, ಜೇನುಸಂಗ್ರಹ, ಜೇನು ಪಾಲನೆ, ಜೇನು ತುಪ್ಪ ಸಂಸ್ಕರಣೆ ಹೀಗೆ ಜೇನು ಉತ್ಫಾದನೆಯ ನಾನಾ ಹಂತಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸುವ ಇವರ ಸಾಧನೆ, ಸೇವೆಗೆ ತಾಲೂಕಿನ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಶ್ರೇಷ್ಠ ಜೇನು ಕೃಷಿಕ ಎಂದು ಗುರುತಿಸಿ, ಅಭಿನಂದಿಸಿವೆ.
ತಾಲೂಕಿನ ರೈತರಿಗೆ ಜೇನುಪೆಟ್ಟಿಗೆ, ಜೇನು, ಜೇನು ಪಾಲನಾ ವಿಧಾನಗಳೆಲ್ಲವನ್ನೂ ನೀಡುವ ಮಾರುತಿಬೋರ್ಕರ್ ಈಗ ಮಾರುತಿ ಮಧುವನ ಎಂದು ಅನ್ವರ್ಥಕನಾಮದಿಂದ ಕರೆಸಿಕೊಳ್ಳುತಿದ್ದಾರೆ.
ಆಸಕ್ತಿ-ಅಭಿರುಚಿ ಇದ್ದರೆ ವಯಸ್ಸು, ಹೆಚ್ಚಿನ ಅನುಕೂಲತೆಗಳ ಬೆಂಬಲವಿಲ್ಲದೆಯೂ ಸಾಧನೆ ಮಾಡಬಹುದು ಎಂಬುದಕ್ಕೆ ಮಾರುತಿ ಬೋರ್ಕರ್ ದೃಷ್ಟಾಂತ. ನಿವೃತ್ತ ನೌಕರರು ಸೇರಿದಂತೆ ಎಲ್ಲಾ ಕ್ಷೇತ್ರ, ವಯೋಮಾನದವರೂ ಕಿವಿ ಅರಳಿಸಿ, ಕಣ್ಣು ಅಗಲಿಸಿ ನೋಡುವಂತಹ ಸಾಧನೆ ಮಾಡಿರುವ ಈ ನಿವೃತ್ತ ನೌಕರ ಜೀವನೋತ್ಸಾಹ ಮತ್ತು ಜೀವಂತಿಕೆಗೆ ಸಾಕ್ಷಿ.
ವಿಶಿಷ್ಟ ಪೆಟ್ಟಿಗೆಗಳು-
ಜೇನು ಸಾಕಾಣಿಕೆಯಲ್ಲಿ ಜೇನು ಸಂಗ್ರಹಿಸುವ ಪೆಟ್ಟಿಗೆಗಳಿಗೂ ಮಹತ್ವವಿದೆ. ಕಾಡು ಹುಳುಗಳು ಜೇನು ಪೆಟ್ಟಿಗೆಗೆ ನುಗ್ಗಿದಾಗ ರಕ್ಷಣೆ ಮಾಡಿಕೊಳ್ಳುವ ವಿನ್ಯಾಸ,ನಸ್ರಿ ಜೇನನ್ನು ಉಪಾಯದಿಂದ ಪ್ಲಾಸ್ಟಿಕ್ ಬಾಟಲಿಯಲ್ಲಿ ಜೇನು ಪೆಟ್ಟಿಗೆಯಲ್ಲೇ ಉಪಾಯದಿಂದ ಸಂಗ್ರಹಿಸುವುದು ಹೀಗೆ ಜೇನು ಕೃಷಿ, ಜೇನು ತಯಾರಿಕೆಯ ಪೆಟ್ಟಿಗೆ ರಚನೆಯಲ್ಲೂ ವಿಶಿಷ್ಟ ವಿಧಾನ ಅನುಸರಿಸುವ ಮಾರುತಿ ಮಧುವನ ಈಗ ಜೇನು ಪೆಟ್ಟಿಗೆ ತಯಾರಿಸುವ ಸಣ್ಣ ಉದ್ಯಮಿಯಾಗಿಯೂ ಹೆಸರುಮಾಡುತಿದ್ದಾರೆ.
ಕೆಲಸ ಇಲ್ಲ ಎನ್ನುವ ಎಳೆಯರು ಮತ್ತು ನಿವೃತ್ತರಿಗೆಲ್ಲಾ ಜೇನು ಕೆಲಸಮಾಡಿ ನಾವು,ನೀವು, ಪರಿಸರ ಎಲ್ಲವೂ ಉಳಿಯೋಣ, ಉಳಿಸೋಣ ಎನ್ನುವ ಸಂದೇಶವೇ ಅವರು ಈ ಜಗತ್ತಿಗೆ ಕೊಡುವ ವಿವೇಕ,ಸಂದೇಶ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *