

350 ವರ್ಷಗಳ ಮನೆಗೆ ಇನ್ನೂ 750 ವರ್ಷಗಳ
ಆಯುಷ್ಯ!
ಸಾಮಾನ್ಯವಾಗಿ ಒಂದು ಕಟ್ಟಡ ಒಂದು ಮನೆಯ ಸಧೃಡತೆಯ ಅವಧಿ ನೂರು ವರ್ಷಗಳು ಎಂಬುದು ಸಾಮಾನ್ಯ ಗೃಹಿಕೆ, ಆದರೆ ಇಲ್ಲೊಂದು ಮನೆ ಈಗಾಗಲೇ 350 ವಸಂತಗಳನ್ನು ಕಳೆದಿದ್ದು ಇಂಜಿನಿಯರ್ ಗಳ ಸಮೀಕ್ಷೆಯಿಂದ ಈ ಮನೆ ಇನ್ನೂ 750ವರ್ಷಗಳ ವರೆಗೆ ಭದ್ರವಾಗಿರಲಿದೆ ಎನ್ನುವ ವಿಸ್ಮಯದ ವಿಚಾರ ಬೆರಗುಗೊಳಿಸುವಂತಿದೆ.
ಇದೇ ಮನೆಗೆ ಮಹಾತ್ಮಾಗಾಂಧಿ ಕೂಡಾ ಭೇಟಿ ನೀಡಿದ್ದರು ಎನ್ನುವ ವಿಚಾರ ಕುತೂಹಲ ಕೆರಳಿಸಿದೆ.
ಈ ವಿಶಿಷ್ಟ ಮನೆ ಇರುವುದು ಸಿದ್ದಾಪುರದ ಹೃದಯ ಭಾಗದಲ್ಲಿ ಪಟ್ಟಣ ಪಂಚಾಯತ್
ಎದುರಿನ ಎರಡನೇ ರಸ್ತೆಯಲ್ಲಿರುವ ಈ ಮನೆ ಮಣ್ಣು ಮತ್ತು ಮರಗಳಿಂದ ನಿರ್ಮಾಣವಾಗಿದೆ. ಇಲ್ಲಿರುವ ಮರದ ಕೆತ್ತನೆ ಶತಮಾನಗಳ ಹಿಂದಿನ ಕುಸುರಿ ಕಲೆಗೆ ಪುಟವಿಟ್ಟಂತಿದೆ.
ಈ ಮನೆಯ ಆಯುಷ್ಯ ಈಗಾಗಲೇ 350 ವರ್ಷಗಳು ಇದು ಮತ್ತೂ 750 ವರ್ಷಗಳ ವರೆಗೆ ಸುಭದ್ರವಾಗಿರುತ್ತದೆ ಎನ್ನುವ ತಜ್ಞರ ಅಭಿಪ್ರಾಯದಂತೆ ಬದಲಾವಣೆಗಳನ್ನು ಮಾಡದೆ ಹೀಗೇ ಉಳಿಸಿಕೊಳ್ಳಬೇಕೆಂದಿದ್ದೇನೆ ಎನ್ನುತ್ತಾರೆ ಈ ಮನೆಯ ಮಾಲಿಕ ರಾಧಾಕೃಷ್ಣ ಹೆಗಡೆ.
ಅಂದಹಾಗೆ ದೊಡ್ಮನೆ ಕುಟುಂಬದ ಈ ಪರಿವಾರ ಈ ಮನೆಯನ್ನು ಬೇರೆಯವರಿಂದ ಖರೀದಿಸಿದ್ದಂತೆ.
1934 ರಲ್ಲಿ ಈ ಮನೆಗೆ ಮಹಾತ್ಮಾಗಾಂಧಿ ಭೇಟಿ ನೀಡಿದ್ದು, ಸ್ವಾತಂತ್ರ್ಯ ಹೋರಾಟಗಾರ್ತಿ ಮಹಾದೇವಿತಾಯಿ ಇದೇ ಮನೆಯಿಂದ ಗಾಂಧಿ ಸಂಪರ್ಕದಿಂದ ವಿನೋಭಾಭಾವೆಯವರ ಆಶ್ರಮ ಸೇರಿದ್ದು ಸೇರಿದಂತೆ ಈ ಮನೆಗೂ ದೇಶದ ಸ್ವಾತಂತ್ರ್ಯ ಹೋರಾಟ, ಗಾಂಧಿ-ಶಾಂತಿ ಚಳವಳಿಗೂ ನಂಟಿದೆ.ಈ ನಂಟಿನ ನೆನಪು ಉಳಿಸುವ ಕೆಲಸಕ್ಕೆ ಈ ಕುಟುಂಬ ಮನಸ್ಸುಮಾಡಿದೆ.


