

ನಿವೃತ್ತ ವಿಧಾನಸಭೆಯ ಕಾರ್ಯದರ್ಶಿ ಓಂಪ್ರಕಾಶರನ್ನು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕೃತ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವ ಮೂಲಕ ಹೊಸ ಸಂಪ್ರದಾಯಕ್ಕೆ ಕಾರಣರಾಗಿದ್ದಾರೆ.
ವಿಧಾನಸಭೆಯ ಶಿಸ್ತಿಗೆ ವ್ಯತಿರಿಕ್ತವಾಗಿ ನಿವೃತ್ತ ಅಧಿಕಾರಿಯನ್ನು ಸ್ಫೀಕರ್ ಸಲಹೆಗಾರರನ್ನಾಗಿ ನೇಮಿಸಿಕೊಂಡಿರುವುದಕ್ಕೆ ವಿಧಾನಸಭೆಯ ಒಳಗೆ ಮತ್ತು ಹೊರಗೆ ತೀವೃ ವಿರೋಧ ವ್ಯಕ್ತವಾಗಿದೆ. ವಿಧಾನಸಭೆಯ ಉದ್ಯೋಗಿಗಳು,ಅನ್ಯಪಕ್ಷಗಳ ಪ್ರಮುಖರು ಸೇರಿದಂತೆ ಅನೇಕರು ಕಾಗೇರಿಯವರ ಈ ಕ್ರಮವನ್ನು ವಿರೋಧಿಸಿದ್ದಾರೆ.ಈ ಬಗ್ಗೆ ಸ್ಫೀಕರ್ ಕಛೇರಿ ಯಾವ ಸ್ಫಸ್ಟನೆಯನ್ನೂ ನೀಡಿಲ್ಲ.
ಸಂಚಾರಕ್ಕೆ ಬಾರದ ರಸ್ತೆ- ಸರ್ವಋತು ರಸ್ತೆಗೆ ಆಗ್ರಹ
ಸಿದ್ದಾಪುರದ
ಹಲಗೇರಿ ಗ್ರಾಪಂ ವ್ಯಾಪ್ತಿಯ ಹೊನ್ನೆಕೈ ಊರಿನ ಸಂಪರ್ಕ ರಸ್ತೆಗಳು ಪೂರ್ತಿ ಕಚ್ಚಾ ರಸ್ತೆಗಳಾಗಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅವನ್ನು ಸರ್ವಋತು ರಸ್ತೆಗಳಾಗಿ ಅಭಿವೃದ್ಧಿಪಡಿಸಬೇಕೆಂದು ಹೊನ್ನೆಕೈ ಊರಿನ ಗ್ರಾಮಸ್ಥರು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಆಗ್ರಹಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು ಹೊನ್ನೆಕೈ ಊರಿನಿಂದ ಬೆಳ್ಳೆಮಡಿಕೆ ಮತ್ತು ಬೈಲಳ್ಳಿ ಊರುಗಳನ್ನು ಸಂಪರ್ಕಿಸುವ ಸುಮಾರು ಒಂದೂವರೆ ಕಿ.ಮೀ. ರಸ್ತೆ ಹಾಗೂ ಹೊನ್ನೆಕೈನಿಂದ ಚಂದ್ರಘಟಗಿ ಹಾಗೂ ಹೇಮಗಾರ ಗ್ರಾಮವನ್ನು ಸಂಪರ್ಕಿಸುವ ಸುಮಾರು 2 ಕಿಮೀ.ರಸ್ತೆ ಪೂರ್ತಿ ಕಚ್ಚಾರಸ್ತೆಯಾಗಿದ್ದು ಸಾರ್ವಜನಿಕರ, ವಾಹನಗಳ, ಜಾನುವಾರುಗಳ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ. ಹೊನ್ನೆಕೈನಿಂದ ಚಂದ್ರಘಟಗಿ, ಹೇಮಗಾರ ರಸ್ತೆಯಲ್ಲಿ ಹೊಳೆಗೆ ಸೇತುವೆ ನಿರ್ಮಿಸಲಾಗಿದ್ದರೂ ಮಳೆಯಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದ್ದು ಓಡಾಟ ಮಾಡಲು ಸಾಧ್ಯವಾಗದ ಸ್ಥಿತಿ ಇದೆ.
ಆದ್ದರಿಂದ ಈ ರಸ್ತೆಗಳನ್ನು ಸರ್ವಋತು ರಸ್ತೆಗಳಾಗಿ ಅಭಿವೃದ್ಧಿಪಡಿಸಬೇಕೆಂದು ಹೊನ್ನೆಕೈ ಗ್ರಾಮದ ರಾಘವೇಂದ್ರ ಡಿ.ಹೆಗಡೆ, ಗಣಪತಿ ಎನ್.ಹೆಗಡೆ, ಅಚ್ಯುತ ಡಿ.ಹೆಗಡೆ, ತಿಮ್ಮಜ್ಜ ಹೆಗಡೆ,ಗಣಪತಿ ಎಸ್.ಹೆಗಡೆ, ವಿವೇಕಾನಂದ ಎಂ.ಹೆಗಡೆ, ಪ್ರಕಾಶ ಹೆಗಡೆ, ಶ್ರೀಪಾದ ಹೆಗಡೆ,ಗಜಾನನ ಹೆಗಡೆ, ನಾಗಪತಿ ಭಟ್, ಮಹಾಬಲೇಶ್ವರ ಹೆಗಡೆ, ಸಿ.ಎನ್.ಹೆಗಡೆ ಮುಂತಾದವರು ಶಾಸಕರನ್ನು ಕೋರಿದ್ದಾರೆ.
