
ಸಿದ್ದಾಪುರದ
ಹಲಗೇರಿ ಗ್ರಾಪಂ ವ್ಯಾಪ್ತಿಯ ಹೊನ್ನೆಕೈ ಊರಿನ ಸಂಪರ್ಕ ರಸ್ತೆಗಳು ಪೂರ್ತಿ ಕಚ್ಚಾ ರಸ್ತೆಗಳಾಗಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅವನ್ನು ಸರ್ವಋತು ರಸ್ತೆಗಳಾಗಿ ಅಭಿವೃದ್ಧಿಪಡಿಸಬೇಕೆಂದು ಹೊನ್ನೆಕೈ ಊರಿನ ಗ್ರಾಮಸ್ಥರು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಆಗ್ರಹಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು ಹೊನ್ನೆಕೈ ಊರಿನಿಂದ ಬೆಳ್ಳೆಮಡಿಕೆ ಮತ್ತು ಬೈಲಳ್ಳಿ ಊರುಗಳನ್ನು ಸಂಪರ್ಕಿಸುವ ಸುಮಾರು ಒಂದೂವರೆ ಕಿ.ಮೀ. ರಸ್ತೆ ಹಾಗೂ ಹೊನ್ನೆಕೈನಿಂದ ಚಂದ್ರಘಟಗಿ ಹಾಗೂ ಹೇಮಗಾರ ಗ್ರಾಮವನ್ನು ಸಂಪರ್ಕಿಸುವ ಸುಮಾರು 2 ಕಿಮೀ.ರಸ್ತೆ ಪೂರ್ತಿ ಕಚ್ಚಾರಸ್ತೆಯಾಗಿದ್ದು ಸಾರ್ವಜನಿಕರ, ವಾಹನಗಳ, ಜಾನುವಾರುಗಳ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ. ಹೊನ್ನೆಕೈನಿಂದ ಚಂದ್ರಘಟಗಿ, ಹೇಮಗಾರ ರಸ್ತೆಯಲ್ಲಿ ಹೊಳೆಗೆ ಸೇತುವೆ ನಿರ್ಮಿಸಲಾಗಿದ್ದರೂ ಮಳೆಯಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದ್ದು ಓಡಾಟ ಮಾಡಲು ಸಾಧ್ಯವಾಗದ ಸ್ಥಿತಿ ಇದೆ.
ಆದ್ದರಿಂದ ಈ ರಸ್ತೆಗಳನ್ನು ಸರ್ವಋತು ರಸ್ತೆಗಳಾಗಿ ಅಭಿವೃದ್ಧಿಪಡಿಸಬೇಕೆಂದು ಹೊನ್ನೆಕೈ ಗ್ರಾಮದ ರಾಘವೇಂದ್ರ ಡಿ.ಹೆಗಡೆ, ಗಣಪತಿ ಎನ್.ಹೆಗಡೆ, ಅಚ್ಯುತ ಡಿ.ಹೆಗಡೆ, ತಿಮ್ಮಜ್ಜ ಹೆಗಡೆ,ಗಣಪತಿ ಎಸ್.ಹೆಗಡೆ, ವಿವೇಕಾನಂದ ಎಂ.ಹೆಗಡೆ, ಪ್ರಕಾಶ ಹೆಗಡೆ, ಶ್ರೀಪಾದ ಹೆಗಡೆ,ಗಜಾನನ ಹೆಗಡೆ, ನಾಗಪತಿ ಭಟ್, ಮಹಾಬಲೇಶ್ವರ ಹೆಗಡೆ, ಸಿ.ಎನ್.ಹೆಗಡೆ ಮುಂತಾದವರು ಶಾಸಕರನ್ನು ಕೋರಿದ್ದಾರೆ.
