ವೈಚಾರಿಕ ಸ್ಪಷ್ಟತೆಯಲ್ಲಿ ಅರಳಿದ ಮನುಷ್ಯಪ್ರೀತಿ

ಡಾ. ರಹಮತ್ ತರೀಕೆರೆಯವರು ನಮ್ಮ ನಡುವಿನ ಪ್ರಮುಖ ಸಂಸ್ಕøತಿ ಚಿಂತಕ ಹಾಗೂ ಸಂಶೋಧಕ.
ಕರ್ನಾಟಕವನ್ನು ಬಹುವಿಧದಲ್ಲಿ ಅರ್ಥಮಾಡಿಕೊಳ್ಳುತ್ತ, ಪರ್ಯಾಯ ಸಂಸ್ಕøತಿಗಳ ಶೋಧನೆಯಲ್ಲಿ ತೊಡಗಿರುವ ರಹಮತ್‍ರ ಚಿಂತನೆಗಳ ಪ್ರಾತಿನಿಧಿಕ ಸಂಕಲನ ‘ತನ್ನತನದ ಹುಡುಕಾಟ’ ಕೃತಿ .
ಮನುಷ್ಯವಿರೋಧಿ ತತ್ವಸಿದ್ಧಾಂತ ಅಜೆಂಡಾಗಳನ್ನು ಎದುರು ಹಾಕಿಕೊಂಡು ಸಂಶೋಧನೆ ಅಥವಾ ಚಿಂತನೆಗೆ ತೊಡಗುವ ಅವರ ಅಧ್ಯಯನದಲ್ಲಿ ಮಾನವೀಯತೆಯ ಬಾಗಿಲುಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಅವರ ಯಾವುದೇ ಬರವಣೆಗೆಗಳ ಮೂಲ ಆಶಯವೂ ಇದೇ ಆಗಿದೆ.
ಈ ಹಿನ್ನೆಲೆಯಲ್ಲಿ ರಹಮತ್‍ರವರ ಚಿಂತನೆಯನ್ನು ಹೊಸ ತಲೆಮಾರಿನ ಓದುಗರು ಮತ್ತು ವಿದ್ಯಾರ್ಥಿಗಳಿಗೆ ಪರಿಚಯಿಸುವ ದೃಷ್ಠಿಯಿಂದ ಶಿವಮೊಗ್ಗದ ಅಂತಃಕರಣ ಪ್ರಕಾಶನÀ ಈ ಸಂಕಲನವನ್ನು ಹೊರ ತಂದಿದೆ.
ಸಂಶೋಧನೆ, ಅಧ್ಯಯನಗಳನ್ನು ಸೀಮಿತ ಚೌಕಟ್ಟುಗಳೊಳಗೇ ಇಟ್ಟು ನೋಡುವವರ ಮಧ್ಯೆ ರಹಮತ್ ಅವರ ಧಾಟಿ ಅನನ್ಯವಾಗಿ ಕಾಣುತ್ತದೆ. ಕರ್ನಾಟಕದ ಅಲಕ್ಷಿತ ಸಮುದಾಯಗಳು, ಶೋಷಿತ ಜನವರ್ಗಗಳು, ಅವುಗಳ ಸಂಸ್ಕøತಿಯ ಕುರಿತೇ ಅಧ್ಯಯನ ನಡೆಸಿರುವ ಹಲವು ಲೇಖನಗಳು ಈ ಕೃತಿಯಲ್ಲಿ ಇವೆ.
ಈ ಸಮಾಜವನ್ನು ಒಡೆದು ಆಳುವವರ ಚಿಂತನೆಗಳಿಗೆ ಎದುರಾಗಿ ಅಧ್ಯಯನಗಳನ್ನು ರೂಪಿಸುತ್ತಾ , ಚರಿತ್ರೆ, ಪರಂಪರೆಯಲ್ಲಿ ಹಾಗೂ ಸಮಕಾಲೀನ ಸಂದರ್ಭದಲ್ಲಿ ಇರಬಹುದಾದ ಜೀವಪರ ಸಂಗತಿಗಳನ್ನು ಶೋಧಿಸುತ್ತಾ ರಹಮತ್ ಸಾಗುತ್ತಾರೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿದ ಅನೇಕರ ಚರಿತ್ರೆÉಯನ್ನು ಇಲ್ಲಿ ಪÀÅನರ್ ಕಟ್ಟಿಕೊಡಲಾಗಿದೆ. ಜೋಳದರಾಶಿ ದೊಡ್ಡನಗೌಡರ ಕುರಿತ ಚಿತ್ರ ಹಾಗೂ ಎಸ್.ಎಸ್. ಹಿರೇಮಠರ ಕುರಿತ ‘ಅವರು ತಲ್ಲಣಗಳಲ್ಲೇ ತೀರಿಕೊಂಡರು’ ಲೇಖನಗಳು ಈ ಮಾದರಿಯವು.
ಬೌದ್ಧ, ಸೂಫಿ, ದತ್ತ, ನಾಥ, ಶರಣ ಮುಂತಾದ ಅವೈದಿಕ ಪರಂಪರೆಗಳನ್ನು ಲೇಖಕರು ಗಾಢವಾಗಿ ಅಧ್ಯಯನ ಮಾಡಿದ್ದಾರೆ.
‘ಬಾಬರಿ ಮಸೀದಿ ಧ್ವಂಸ ಹಾಗು ನಂತರದ ಭಾರತ’À ರಹಮತ್ ಚಿಂತನೆಯನ್ನು ಬಹುವಾಗಿ ರೂಪಿಸಿವೆ. ‘ಬಾಬಾಬುಡನ್‍ಗಿರಿ : ಸೂಫಿ ಮತ್ತು ದತ್ತ’ ‘ಸಮುದಾಯಗಳ ಸೃಜನಶೀಲತೆಯ ಹುಡುಕಾಟ’ ಲೇಖನಗಳಲ್ಲಿ ಈ ಕಾಳಜಿ ಪ್ರಧಾನವಾಗಿದೆ.
ಬೌದ್ಧ ಧರ್ಮದ ಬಗ್ಗೆ ಒಲವಿಟ್ಟುಕೊಂಡು ಪ್ರಸ್ತುತ ಬೌದ್ಧಧರ್ಮ ಕರ್ನಾಟಕದ ಸಮಾಜದಲ್ಲಿ ಯಾವ ಕ್ರಮದಲ್ಲಿ ಆಚರಣೆಯಲ್ಲಿ ಇದೆ ಎಂದು ಶೋಧಿಸುತ್ತಾ ಪÀÅರುಷ ಪ್ರಧಾನ ಸಮಾಜದಲ್ಲಿ ಮತಾಂತರ ಏನೆಲ್ಲ ಸಂದಿಗ್ಧಗಳನ್ನು ತರಬಲ್ಲದು, ಹೆಣ್ಣಿನ ಧ್ವನಿಯನ್ನು ಅಡಗಿಸಬಲ್ಲದು ಎಂಬುದನ್ನು ‘ಯಶೋಧರೆಯ ಕಷ್ಟಗಳು’ ಲೇಖನ ಮನವರಿಕೆ ಮಾಡಿಕೊಡುತ್ತದೆ.
ಮತೀಯವಾದಿ ರಾಜಕಾರಣ ಸಿಕ್ಕ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಸಮುದಾಯಗಳನ್ನು ಒಡೆದು ಆಳಬಲ್ಲದು ಎಂಬುದು ದಿನನಿತ್ಯ ಅರಿವಾಗುತ್ತಿದೆ. ಉಣ್ಣುವ ಊಟವೂ ರಾಜಕಾರಣದ ದಾಳವಾಗುವ ದುರ್ದೈವ ಈ ದೇಶದ್ದು. ‘ಮಾಂಸಹಾರ’ದ ರಾಜಕಾರಣ ಚರಿತ್ರೆಯಲ್ಲಿ ಹೇಗೆ ಸಾಗಿ ಬಂದಿದೆ ಎಂಬುದರ ಮೇಲೆ ಬೆಳಕು ಚೆಲ್ಲುವ ‘ಹೊಲಸು’ ಆಹಾರ ಪ್ರಮಾಣ ಎನ್ನುವ ಲೇಖನ ನಮ್ಮ ಚಿಂತನೆಯನ್ನೇ ಬದಲಿಸುವಷ್ಟು ಪ್ರಭಾವಶಾಲಿಯಾಗಿದೆ.
ಗಂಭೀರ ಚಿಂತಕರು ಕೊಂಚ ಮಡಿವಂತಿಕೆ ತೋರುವ ಜನಪ್ರಿಯ ಸಿನಿಮಾ ಮಾಧ್ಯಮ ಕುರಿತೂ ಸಹ ಇಲ್ಲಿ ಒಂದು ಲೇಖನವಿದೆ. ಡಾ. ರಾಜಕುಮಾರ್ ಸಾವಿನ ಸಂದರ್ಭ ಇಟ್ಟುಕೊಂಡು ಬರೆದಿರುವ ‘ಈ ಸಾವುಗಳು ನ್ಯಾಯವೇ?’ ಎನ್ನುವ ಲೇಖನ ಸತ್ವಪÀÇರ್ಣವಾಗಿದ್ದು. ಸಿನೆಮಾ ಮಾಧ್ಯಮದ ಒಳಿತು ಕೆಡಕಿನ ಪರಿಣಾಮವನ್ನು ಸವಿವರವಾಗಿ ತಲಸ್ಪರ್ಷಿಯಾಗಿ ಚರ್ಚಿಸುತ್ತದೆ.
20ನೇ ಶತಮಾನದ ಕನ್ನಡನಾಡು ಕಂಡ ದೈತ್ಯ ಪ್ರತಿಭೆ ಕುವೆಂಪÀÅ ಅವರು ರಹಮತ್ ಚಿಂತನೆಯ ಕೇಂದ್ರ ಪ್ರಜ್ಞೆ. ಈ ಹಿನ್ನೆಲೆಯ ‘ಕುವೆಂಪÀÅ ಚಿಂತನೆ ಆಕರ್ಷಣೆ ವಿಕರ್ಷಣೆ’ ಲೇಖನ ಮೌಲ್ಯಭರಿತವಾದುದ್ದು. ಇಂತಹುಗಳ ಸಂಗಡ ಕನ್ನಡತನದ ಹುಡುಕಾಟವೇ ‘ತನ್ನತನದ ಹುಡುಕಾಟ’ ಅನೇಕ ಅನ್ಯಗಳ ನಡುವೆ ಕಳೆದುಹೋಗಿರುವ ಅಥವಾ ಅವಜ್ಞೆಗೆ ಒಳಗಾಗಿರುವ ಸತ್ವಭರಿತ ‘ಕನ್ನಡತನ’ ಎಲ್ಲಾ ಶಿಸ್ತುಗಳಲ್ಲಿ ಸಾಕಾರಗೊಳ್ಳಬೇಕು, ಆ ಮೂಲಕ ಕನ್ನಡ ನಾಡಿನ ಬದುಕು ಹೆಚ್ಚು ಪ್ರಜಾಪ್ರಭುತ್ವೀಯಗೊಳ್ಳಬೇಕು ಎನ್ನುವ ಮಹತ್ತರ ಹಂಬಲ ಲೇಖಕರದು.
‘ವೈಚಾರಿಕ ಸ್ಪಷ್ಟತೆ, ವಿಸ್ತಾರವಾದ ಅಧ್ಯಯನ, ಮನುಷ್ಯಪ್ರೀತಿ ಮತ್ತು ಭಾಷೆಯನ್ನು ದುಡಿಸಿಕೊಳ್ಳುವ ಬರವಣಿಗೆಯ ಶೈಲಿ ರಹಮತ್ ಅವರ ಶಕ್ತಿ. ತಾವು ನಂಬಿದ ವಿಚಾರಗಳನ್ನು ಒಬ್ಬ ನುರಿತ ವಕೀಲರಂತೆ ವಾದÀ ಪÀÅರಾವೆಗಳ ಮೂಲಕ ಅವರು ಮಂಡಿಸುತ್ತಾರೆ… ಅವರ ಬರವಣಿಗೆಗಳನ್ನು ಒಪ್ಪದವರು ಇರಬಹುದು, ಆದರೆ ತಪ್ಪÅ ಎನ್ನುವವರು ಇರಲಾರರು’ ಎಂದು ಮುನ್ನುಡಿಯಲ್ಲಿ ಬರೆದಿರುವ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರ ಮಾತುಗಳು ಅರ್ಥಪೂರ್ಣವಾಗಿವೆ. – ಮರ್ಗನಳ್ಳಿ ಪ್ರಕಾಶ
ಕೃತಿಯ ಪುಟಗಳಿಂದ
‘ಧರ್ಮವನ್ನು ಜನಾಂಗ ದ್ವೇಷವನ್ನಾಗಿ ಮಾಡಿ ಸಮಕಾಲೀನ ರಾಜಕಾರಣಕ್ಕೆ ಹೇಗೆ ಬಳಸಬೇಕು ಎಂಬ ತಂತ್ರಗಾರಿಕೆ ಧೇನಿಸುವ ಮತೀಯವಾದಿಗಳು ಮತ್ತು ಮೂಲಭೂತವಾದಿಗಳಿಗೆ ನಮ್ಮ ದೇಶದ ಜನಸಮುದಾಯಗಳು ನಿರ್ಮಾಣ ಮಾಡಿರುವ ಸಂಸ್ಕøತಿ ಪರಂಪರೆಗಳ ಅರಿವು ಕಡಿಮೆ. ಚರಾಚರವನ್ನು ‘ಹಿಂದು’ ‘ಮುಸ್ಲಿಂ’ ಎಂಬ ಎರಡು ಭಾಗಳಲ್ಲಿ ವಿಂಗಡಿಸಿ, ಎದುರಾಳಿಗಳಾಗಿ ನಿಲ್ಲಿಸಿ ನೋಡುವವರಿಗೆ ಭಾರತದ ಧರ್ಮ ಪಂಥ ಹಾಗೂ ಜನಸಮುದಾಯಗಳು ಮಾಡಿಕೊಂಡಿರುವ ಸ್ವೀಕಾರ ಹಾಗೂ ಅವು ಹುಟ್ಟಿಸಿರುವ ಮಿಲನ ಸಂಸ್ಕøತಿಯ ಸೂಕ್ಷ್ಮತೆ ಗೊತ್ತಿಲ್ಲ’.
ಕೃತಿ : ತನ್ನತನದ ಹುಡುಕಾಟ
ಕರ್ತೃ : ಡಾ. ರಹಮತ್ ತರೀಕೆರೆ
ಪ್ರಕಾಶನ : ಅಂತಃಕರಣ ಪ್ರಕಾಶನ, ಶಿವಮೊಗ್ಗ
ಪುಟ : 140, ಬೆಲೆ : 80 ರೂಪಾಯಿಗಳು

ಬಿಜೆಪಿಯಿಂದ ಪಾದಯಾತ್ರೆ

ಮಹಾತ್ಮಾ ಗಾಂಧಿಯವರ 151ನೇ ಜಯಂತಿ ಅಂಗವಾಗಿ ಭಾರತೀಯ ಜನತಾ ಪಕ್ಷವು ಅ.16ರಿಂದ ಸಂಸದರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ತಿಳಿಸಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *