deshpande 75- ೨೫ ರಿಂದ ೭೫ ರ ವರೆಗೆ ಚುರುಕಿನ ನಡಿಗೆ

ಆರ್.ವಿ.ದೇಶಪಾಂಡೆ ರಾಜ್ಯ ರಾಜಕಾರಣದ ಮಹತ್ವದ ಹೆಸರು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ-ಮುಂಡಗೋಡು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ ಆರ್.ವಿ.ದೇಶಪಾಂಡೆ ತಿರುಗಿ ನೋಡಿದ್ದೇ ಇಲ್ಲ. ಕಾಂಗ್ರೆಸ್‌ ನಿಂದ ಜನತಾದಳ, ಲೋಕಶಕ್ತಿ,ಮರಳಿ ಕಾಂಗ್ರೆಸ್‌ ದೇಶಪಾಂಡೆ ಹೋದ ಕಡೆ ಅಧಿಕಾರ ಬರುತ್ತೋ,ಅಧಿಕಾರ ಅರಸಿ ದೇಶಪಾಂಡೆ ಹೋದಾಗಲೆಲ್ಲಾ ಅವಕಾಶ ದೊರೆಯುತ್ತೋ ಎನ್ನುವುದೇ ಒಗಟು. ಹಳಿಯಾಳದ ಯುವ ವಕೀಲ ರಘುನಾಥ ವಿಶ್ವನಾಥ ದೇಶಪಾಂಡೆ ೨೫ ರ ಹರೆಯದಲ್ಲೇ ರಾಜಕೀಯ ಪ್ರವೇಶಿಸಿದರು ಅಂದಿನಿಂದ ಈವರೆಗೆ ದೇಶಪಾಂಡೆ ೫ ದಶಕಗಳ ಕಾಲ ರಾಜ್ಯ ರಾಜಕಾರಣದ ಭಾಗವಾಗಿ ಈವರೆಗೆ ೮ ಬಾರಿ ಶಾಸಕರಾಗಿ, ಸಚಿವರಾಗಿ, ಪಕ್ಷದ ರಾಜ್ಯ ಅಧ್ಯಕ್ಷರಾಗಿ, ವಿರೋಧಪಕ್ಷದ ನಾಯಕರಾಗಿ ಚಾಪು ಮೂಡಿಸಿದ್ದಾರೆ.

೫೦ ವರ್ಷಗಳ ತಮ್ಮ ರಾಜಕೀಯದ ಸುದೀರ್ಘ ಅವಧಿಯಲ್ಲಿ ಹಲವು ಬಾರಿ ತಾವು ಬಯಸಿದ ಖಾತೆ ಪಡೆದು ಹೆಸರು ಮಾಡಿದ್ದಾರೆ. ಹಳಿಯಾಳ ಕ್ಷೇತ್ರ, ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಅಭಿವೃದ್ಧಿ ಕೆಲಸಗಳ ಕಾಮಗಾರಿ ಫಲಕಗಳ ಮೇಲೆ ತಮ್ಮ ಹೆಸರು ಛಾಪಿಸಿರುವ ದೇಶಪಾಂಡೆ ತಮ್ಮ ಗುರುವಿಗಾಗಿ ತಮ್ಮ ಕ್ಷೇತ್ರ-ಹುದ್ದೆಗಳನ್ನೆಲ್ಲಾ ಬಿಟ್ಟುಕೊಟ್ಟ ಧೀಮಂತ. ಜನತಾದಳದಿಂದ ರಾಮಕೃಷ್ಣ ಹೆಗಡೆಯವರನ್ನು ಉಚ್ಛಾಟಿಸಿದ್ದಾಗ ಗುರು ಹೆಗಡೆಯವರೊಂದಿಗೆ ಜನತಾದಳ ಬಿಟ್ಟುಬಂದ ದೇಶಪಾಂಡೆ ಗುರುವಿಗಾಗಿಮಿಡಿದ ಶಿಷ್ಯ.

ರಾಜಕೀಯ ಗರಡಿಯ ಬಿಗಿಪಟ್ಟುಗಳ ೫೦ ವರ್ಷದ ಸುವರ್ಣ ಅನುಭವಕ್ಕೂ ತಮ್ಮ ಬದುಕಿನ ಅಮೃತಮಹೋತ್ಸವಕ್ಕೂ ಸರಿಯಾಗಿ ೭೫ ವರ್ಷಗಳ ಅವಧಿಯಲ್ಲಿ ೫೦ ವರ್ಷ ನಿರಂತರ ರಾಜಕಾರಣ ಮಾಡಿರುವ ದೇಶಪಾಂಡೆ ಈಗಲೂ ದಣಿದಿಲ್ಲ. ಸರ್ಕಾರ ಬರಲಿ, ಅಧಿಕಾರ ಇರಲಿ, ಇಲ್ಲದಿರಲಿ ಸರ್ಕಾರ, ಪಕ್ಷದ ವಲಯದಲ್ಲಿ ವರ್ಚಸ್ವಿ ನಾಯಕರಾಗಿ ಹೆಸರುಮಾಡಿರುವ ಇವರ ವಿಶೇಶವೆಂದರೆ ಪಕ್ಷ,ಸಿದ್ಧಾಂತಗಳ ಬಗ್ಗೆ ಮಾತನಾಡುತ್ತಾರೆಯೆ ವಿನ: ದೇಶಪಾಂಡೆ ಯಾರ ವಯಕ್ತಿಕ ವಿಚಾರದಲ್ಲಿ ಮಾತನಾಡುವ ವ್ಯಕ್ತಿಯಲ್ಲ. ಜಿಲ್ಲೆಯ ತಂತ್ರಗಾರಿಕೆಯ ಮೇಲ್ವರ್ಗ, ಬಹುಸಂಖ್ಯಾತ ಹಿಂದುಳಿದ ವರ್ಗ ಎಲ್ಲರ ನಡುವೆ ಅಲ್ಪಸಂಖ್ಯಾತನಾಗಿ ಜನಪ್ರತಿನಿಧಿಯಾಗುತ್ತಾ ಎಲ್ಲರ ಅಚ್ಚರಿಗೆ ಕಾರಣವಾದ ದೇಶಪಾಂಡೆ ಈಗ ತಮ್ಮ ಮಗ ಪ್ರಶಾಂತ್‌ ದೇಶಪಾಂಡೆ ಮೂಲಕ ರಾಜಕೀಯ ಪ್ರಯೋಗಕ್ಕಿಳಿಯುವ ಯೋಚನೆಯಲ್ಲಿದ್ದಾರೆ. ನಿರಂತರ ಅಧಿಕಾರ,ಅನುಕೂಲಗಳ ಸುಖ ಕಂಡರೂ ಅದನ್ನು ಅಮಲಾಗಿಸಿಕೊಳ್ಳದ ದೇಶಪಾಂಡೆ ಈಗಲೂ ತಮ್ಮ ಸಂಸ್ಥೆ, ಟ್ರಸ್ಟ ಗಳ ಮೂಲಕ ಸಮಾಜಸೇವೆಯಲ್ಲಿದ್ದಾರೆ. ಕೋವಿಡ್‌ ಅವಧಿ, ಪ್ರವಾಹ ಪರಿಸ್ಥಿತಿಗಳಲ್ಲಿ ಪರ್ಯಾಯ ಸರ್ಕಾರದ ರೀತಿ ಕೆಲಸ ಮಾಡಿರುವ ದೇಶಪಾಂಡೆ ಅಪ್ಪ ಮಕ್ಕಳು ತಮ್ಮ ಕುಟುಂಬದ ೫ ದಶಕಗಳ ರಾಜಕೀಯ ಪರಂಪರೆಯ ಮುಂದುವರಿಕೆಗೆ ಪಣ ತೊಟ್ಟಂತಿದೆ. ಅಸಂಖ್ಯ ವರ್ಷಗಳ ರಾಜಕೀಯ ಶಕ್ತಿಯಿಂದ ತಮ್ಮ ವಲಯ ಬೆಳೆಸಿಕೊಂಡಿರುವ ಮಾಜಿ ಸಚಿವ ದೇಶಪಾಂಡೆ ಮಾರ್ಚ್‌ ೧೬ ರಂದು ತಮ್ಮ ೭೫ ನೇ ಜನ್ಮದಿನ ಆಚರಿಸಿಕೊಳ್ಳುತಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *