ನಶಿಸುತ್ತಿರುವ ಮಲೆನಾಡ ಆಲೆಮನೆ ಸೊಬಗು

ನಮ್ಮೂರ ಮಂದಾರ ಹೂವೆ… ಎನ್ನುವ ಹಾಡು ಕೇಳಿದಾಗಲೆಲ್ಲಾ ಆಲೆಮನೆ ಚಿತ್ರ ನೆನಪಾದರೆ ಮಲೆನಾಡಿಗರಿಗೆ ಆಲೇಮನೆಯ ದೃಶ್ಯಗಳೇ ಕಣ್ಮುಂದೆ ಬರುತ್ತವೆ.
ಒಂದಾನೊಂದು ಕಾಲದಲ್ಲಿ ಆತ್ಮನಿರ್ಭರದ ಅಂಗವಾಗಿ ರೈತರೆಲ್ಲಾ ಕಬ್ಬು ಬೆಳೆಯುತಿದ್ದರು. ಲಾಭ-ನಷ್ಟಗಳ ಲೆಕ್ಕಾಚಾರವಿಲ್ಲದೆ ಕಬ್ಬು ಬೆಳೆಯುವ ರೈತ ಆಲೆಮನೆಯ ಕಬ್ಬಿನ ಗಾಣಕ್ಕೆ ಎತ್ತು-ಕೋಣಗಳನ್ನು ಕಟ್ಟಿ ಅವುಗಳೊಂದಿಗೆ ಸಾಗುತ್ತಾ ನಲಿಯುತಿದ್ದ  ಕೃಷಿ ಸಂಸ್ಕೃತಿಯ ಒಂದು ಭಾಗವಾಗಿದ್ದ ಆಲೆಮನೆ ಈಗಿನ ಯಾಂತ್ರಿಕ, ತಾಂತ್ರಿಕ ಯುಗದಲ್ಲಿ ಆಗಿನಷ್ಟು ಅದ್ಭುತವಾಗಿಲ್ಲ ಆದರೆ ಈಗಲೂ ಆಲೇಮನೆ ಸೊಬಗು ಮುಂದುವರಿದಿರುವುದು ಮಲೆನಾಡಿನ ವಿಶೇಶ.

ಆಲೆಮನೆ, ಕೋಣಗಳು, ಆಲೆಮಾವ ಎನ್ನುವ ಚಿತ್ರಣ ಈಗ ತುಸು ಬದಲಾಗಿ ಗಾಣ,ಯಂತ್ರ,ವಿದ್ಯುತ್‌ ಬಳಕೆ ಗಳ ಹೊಸ ರೂಪದ ಆಲೆಮನೆಯಲ್ಲಿ ಅದೇ ಚಿಣ್ಣರಿದ್ದಾರೆ. ಆಲೆಮನೆಯ ಹಾಲು ಕಾಯಿಸುವ ಕೊಪ್ಪರಿಗೆ ಇದೆ. ಜೊತೆಗೆ ಬೆಂಕಿ- ಈ ದಿವ್ಯಾನುಭವದ ಆಲೆಮನೆ ಸೊಬಗನ್ನು ಒಂದಷ್ಟು ಭಾಗ ವ್ಯಾಪಾರೀಕರಣ,ಯಾಂತ್ರೀಕರಣ ಕಳೆದರೆ ಮಲೆನಾಡಿನಲ್ಲಿ ವಿಪರೀತವಾಗಿರುವ ಕಾಡು ಪ್ರಾಣಿಗಳ ಹಾವಳಿ ಕಬ್ಬು ಬೆಳೆಯುವ ರೈತರ ಆಸಕ್ತಿ ಕುಂದಿಸಿದೆ. ಎಲ್ಲಾ ಸವಾಲು, ತೊಂದರೆಗಳ ನಡುವೆ ಈಗಲೂ ಆಲೆಮನೆಯ ಸೊಬಗನ್ನು ಸವಿಯಲು ಖಾತರಾಗಿರುವ ಜನರಿಗೆ ಮಲೆನಾಡಿನ ಅಲ್ಲಲ್ಲಿ ಆಲೆಮನೆಯ ಸೊಬಗು ಉಣಿಸುವ ಉದಾರಿಗಳೂ ಇದ್ದಾರೆ. ಪ್ರತಿವರ್ಷ ನಡೆಯುವ ಹಬ್ಬದಂಥ ಆಲೆಮನೆಯಲ್ಲಿ ಕಬ್ಬಿನ ರಸ ಕುಡಿದು ಆತ್ಮೀಯರೊಂದಿಗೆ ಹರಟುವ ಮಲೆನಾಡಿನ ಆಲೇಮನೆ ಈಗಲೂ ವಿಶೇಶವೇ.


ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ತೆಂಗಿನಮನೆಯಲ್ಲಿ ನಡೆದ ಆಲೆಮನೆ ಇಂಥಹ ಸಬ್ರಮಕ್ಕೆ ಸಾಕ್ಷಿಯಾಯಿತು. ಕಬ್ಬಿನ ಸಿಹಿ,ರಸದ ಸ್ವಾದ ಸವಿದ ಅನೇಕರು ಆಲೆಮನೆ ಮಾಡಿ ಸ್ಥಳಿಯರನ್ನು ಖುಷಿಪಡಿಸುವ ಬಗ್ಗೆ ಸಂಬ್ರಮಿಸಿದರೆ ಸ್ವಯಂ ಆಲೆಮನೆ ನಡೆಸಿದ ರೈತರು ತಮ್ಮ ನೋವು-ನಲಿವು ಹೇಳಿಕೊಂಡರು. ಎಲ್ಲಾ ಸವಾಲುಗಳ ನಡುವೆ ಯಾಂತ್ರೀಕರಣದ ಆಲೆಮನೆ ಹಬ್ಬ ಜನರನ್ನು  ಖುಷಿ ಪಡಿಸಿದ್ದು ವಿಶೇಶ.

ಮೊದಲಿನ ಆಲೆಮನೆಯ ವಿಶೇಶವೇ ಬೇರೆ ಆದರೆ ಈಗಲೂ ನಾವು ಹಂಚಿ ತಿನ್ನುವ ಹಳೆ ಪದ್ಧತಿ ಉಳಿಸಿಕೊಂಡು ಊರುಕೇರಿಯ ಜನರಿಗೆ ಕಬ್ಬು-ಕಬ್ಬಿನ ಹಾಲು ಕೊಟ್ಟು ಖುಷಿ ಪಡುತಿದ್ದೇವೆ. ಕಾಡು ಪ್ರಾಣಿಗಳ ಹಾವಳಿ ರೈತನ ಆಸಕ್ತಿ-ಅಭಿರುಚಿ ಕುಂದಿಸಿದರೆ,ಯಾಂತ್ರೀಕರಣ ಮೊದಲಿನ ವ್ಯವಸ್ಥೆ ಬದಲಿಸಿದೆ ಆದರೂ ಆಲೆಮನೆ ವಿಶೇಶವೇ-ಡಿ.ಕೆ.ನಾಯ್ಕ, ತೆಂಗಿನಮನೆ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *