ಮಾ.15 ರಿಂದ ಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆ

Thumbnail image

ಮಾ.15 ರಿಂದ ಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆ : ಸಕಲ ಸಿದ್ಧತೆ

https://samajamukhi.net/category/uttara-kannada/?fbclid=IwAR2UKamZN7sZFj6724a0R7qdWqEzieJTtfFIi_Ll3aLAYmKMxtC8WQO8NI8

ರಾಜ್ಯದ ಅತಿದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಿರಸಿಯ ಮಾರಿಕಾಂಬ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ದೇವಾಲಯ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮಾರ್ಚ್ 15ರಿಂದ 23ರ ವರೆಗೆ ಜಾತ್ರೆ ನಡೆಯಲಿದೆ.

ಶಿರಸಿ(ಉತ್ತರ ಕನ್ನಡ) : ರಾಜ್ಯದ ಅತಿದೊಡ್ಡ ಜಾತ್ರೆ ಅಂತ ಹೆಗ್ಗಳಿಕೆ ಪಡೆದಿರೋ ಶಿರಸಿಯ ಮಾರಿಕಾಂಬಾ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಜಾತ್ರೆಯ ಮುಂಚಿತವಾಗಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಗಳು ಶಾಸ್ತ್ರೋಕ್ತವಾಗಿ ನಡೆಯುತ್ತಿದ್ದು, ಜಾತ್ರೆಗೆ ಅಗತ್ಯವಿರುವ ಗದ್ದುಗೆ ಮಂಟಪ, ಪೊಲೀಸ್ ಬಂದೋಬಸ್ತ್ ಸೇರಿದಂತೆ ಅಗತ್ಯ ಸಿದ್ಧತೆಗಳು ದೇವಸ್ಥಾನದಿಂದ ಮತ್ತು ಪೊಲೀಸ್ ಇಲಾಖೆಯಿಂದ ನಡೆದಿವೆ.

ಮಾ.15 ರಿಂದ ಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆ

ದಕ್ಷಿಣ ಭಾರತದಲ್ಲೇ ಅತಿದೊಡ್ಡ ಜಾತ್ರೆ ಎಂದು ಪ್ರಸಿದ್ಧಿ ಪಡೆದಿರುವ ಮಾರಿಕಾಂಬಾ ಜಾತ್ರೆ ಮಾರ್ಚ್ 15 ರಿಂದ 23ರವರೆಗೆ ನಡೆಯಲಿದ್ದು, ದೇವಾಲಯದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಾರ್ಚ್​ 15 ರ ರಾತ್ರಿ ದೇವಿಯ ಕಲ್ಯಾಣೋತ್ಸವ ಜರುಗಲಿದ್ದು, 16 ರ ಬೆಳಗ್ಗೆ ರಥೋತ್ಸವ ಜರುಗಲಿದೆ. ನಂತರ 5 ದಿನಗಳ ಕಾಲ ಸೇವಾ ಕಾರ್ಯಗಳು ನೆರವೇರಲಿದ್ದು, ಮಾ. 23 ರಂದು ದೇವಿಯು ನಿರ್ಗಮಿಸಲಿದ್ದಾಳೆ. ಈಗಾಗಲೇ ದೇವಿಯ ರಥೋತ್ಸವದ ವರೆಗಿನ ಎಲ್ಲಾ ಧಾರ್ಮಿಕ ವಿಧಾನಗಳು ಅಚ್ಚುಕಟ್ಟಾಗಿ ನಡೆದಿದ್ದು, ದೇವಿಯ ಪ್ರತಿಷ್ಠಾಪನೆಗೊಳ್ಳುವ ಮಂಟಪವೂ ಉತ್ತಮವಾಗಿ ರಚನೆಯಾಗಿದೆ.

ಈ ಬಗ್ಗೆ ದೇವಾಲಯದ ಅಧ್ಯಕ್ಷ ಆರ್ ಜಿ ನಾಯ್ಕ್ ಅವರು ಮಾತನಾಡಿ, ಈ ಬಾರಿಯ ಜಾತ್ರಾ ವೈಭವಕ್ಕಾಗಿ ಸಕಲ ಸಿದ್ಧತೆಗಳೂ ನಡೆಯುತ್ತಿದ್ದು, ಶಿರಸಿಯ ಹೃದಯ ಭಾಗವಾಗಿರೋ ಬಿಡಕಿ ಬೈಲಲ್ಲಿ ದೇವಿಯ ಗದ್ದುಗೆಗೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಒಂದೆಡೆ ದೇವಿಯ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದು, ಮತ್ತೊಂದೆಡೆ ದೇವಿ ದರ್ಶನಕ್ಕೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿದೆ. ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ವರಿಷ್ಠಾಧಿಕಾರಿ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಪಡೆಯನ್ನೂ ರಚಿಸಲಾಗಿದೆ.

ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ಜಾತ್ರೆಗೆ ದಿನಗಣನೆ ಪ್ರಾರಂಭವಾಗಿದ್ದು, ಅಷ್ಟೇ ವೇಗದಲ್ಲಿ ಸಕಲ ಸಿದ್ಧತೆಗಳು ಕೂಡಾ ನಡೆಯುತ್ತಿದೆ. ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ವಿಶಾಲ ಹೊರಾಂಗಣವನ್ನ ತಯಾರು ಮಾಡಲಾಗುತ್ತಿದೆ. ಇನ್ನೇನು ಎರಡು ದಿನದಲ್ಲಿ ಪ್ರಾರಂಭಗೊಳ್ಳುವ ದೇವಿಯ ಜಾತ್ರಾ ಮಹೋತ್ಸವವನ್ನ ಕಣ್ತುಂಬಿಕೊಳ್ಳಲು ರಾಜ್ಯಾದ್ಯಂತ ಭಕ್ತರು ಎದುರು ನೋಡುತ್ತಿದ್ದಾರೆ.‌‌ (etbk)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ...

ಕಾಳಗದಲ್ಲಿ “ಅಧ್ಯಕ್ಷ ಗಾದಿ”,.. ಲಾಭಿಯೇ ಮುಂದಿನ ಹಾದಿ..!??

Sirsi block congress issue….( ಓದುಗರ ವಿಶ್ಲೇಷಣೆ) ಶಿರಸಿ ಬ್ಲಾಕ್ ಕಾಂಗ್ರೆಸ್ ರಾಜಕೀಯ ಕಣದಲ್ಲಿ ಈಗ ಸಖತ್ ಟೆನ್ಷನ್! ಪರೇಡ್ ಮುಗಿಸಿದ ಬೆನ್ನಲ್ಲೇ, ಈಗ...

ಒಂದು ಪತ್ರ.. ಒಡೆದಾಳುವವರ ದಾಳವಾಗಬೇಡಿ ನಾಮಧಾರಿಗಳೆ…

ಮಾನ್ಯರೆ… ನಮಸ್ಕಾರಗಳು… ಕೆಲವು ದಿವಸಗಳಿಂದ ನಿಮಗೊಂದು ಪತ್ರ ಬರೆಯಬೇಕೆಂದುಕೊಂಡು ಯೋಚಿಸುತ್ತಾ ಈ ಬರಹ ಬರೆಯುತ್ತಿದ್ದೇನೆ. Samaajamukhi youtube channel, samajamukhi.net News ಮೂಲಕ ನೀವು...

ಓಣಿಕೇರಿ ಮಾಸ್ತ್ಯ ರಾಮ ನಾಯ್ಕ ನಿಧನ

ಸಿದ್ದಾಪುರ, ತಾಲೂಕಿನ ಕಿಲಾರ ಓಣಿಕೇರಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಮಾಸ್ತ್ಯಾ ರಾಮ ನಾಯ್ಕ ಮಂಗಳವಾರ ನಿಧನರಾದರು. ಮೂವರು ಗಂಡುಮಕ್ಕಳು ಸೇರಿ ಅಪಾರ ಬಂಧು ಬಳಗ...

ಯಾರಾಗ್ತಾರೆ…ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ?

ಉತ್ತರಕನ್ನಡಜಿಲ್ಲೆಯ೧೩ ಬ್ಲಾಕ್ಕಾಂಗ್ರೆಸ್ ಗಳ ವೇಟ್ ಒಂದಾದರೆ ಸಿದ್ದಾಪುರದ ತಾಲೂಕಾ ಕಾಂಗ್ರೆಸ್ ಬಲವೇ ಬೇರೆ . ಒಂದು ಕಾಲದಲ್ಲಿ ಬಂಗಾರಪ್ಪ ಒಲುವಿನಿಂದ ಇಡೀ ಜಿಲ್ಲೆ ಸಿದ್ದಾಪುರವನ್ನು...

Latest Posts

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ ಒಬ್ಬರೇ ಶಾಸಕರು’. ಆದರೆ ಹೈಕಮಾಂಡ್ ಸೂತ್ರ ಮಾತ್ರ ಅತ್ತ ಶಿರಸಿಯಲ್ಲಿ ಬೆಂಕಿ ಹಚ್ಚಿದರೆ, ಇತ್ತ ಸಿದ್ದಾಪುರದಲ್ಲಿ ಅದೇ ಸೂತ್ರ ಸಾಹೇಬರಿಗೆ ಬಾಯಿಗೆ ಜಾರಿ ಬಿದ್ದ ತುಪ್ಪದಂತಾಗಿದೆ! ಬನ್ನಿ.. ಸಿದ್ದಾಪುರ...

Recommended For You

About the Author: Kanneshwar Naik

Leave a Reply

Your email address will not be published. Required fields are marked *