

ಹಿರಿಯರ ಅನುಭವವೇ ಶಿಕ್ಷಣ, ಸಂವಿಧಾನವೇ ಶ್ರೇಷ್ಠ
-ಸಿದ್ಧರಾಮ ಎಸ್.
ಶಾಸಕಾಂಗ,ಕಾರ್ಯಾಂಗ, ನ್ಯಾಯಾಂಗಗಳು ಸಂವಿಧಾನದ ಪರಿಧಿಯೊಳಗೆ ಕೆಲಸಮಾಡಬೇಕಾಗುತ್ತದೆ ಇವೆಲ್ಲವುಗಳಿಗಿಂತ ಸಂವಿಧಾನ ಶ್ರೇಷ್ಠ ಎಂದಿರುವ ಕಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಸಿದ್ಧರಾಮ ಎಸ್. ಸಂವಿಧಾನದ ಅರಿವಿಲ್ಲದೆ ಮಾಡುವ ಕೆಲಸ ಫಲಕೊಡುವುದು ಕಷ್ಟ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಇಂದು ಇಲ್ಲಿಯ ಲಯನ್ಸ್
ಬಾಲಭವನದಲ್ಲಿ ನಡೆದ ಹಿರಿಯ ನಾಗರಿಕರ ದಿನಾಚರಣೆ ಮತ್ತು ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ವೈದ್ಯ ಡಾ.ಎಂ.ಪಿ.ಶೆಟ್ಟಿ ಮತ್ತು ನಿವೃತ್ತ ಶಿಕ್ಷಕ ಲಕ್ಷ್ಮಣ ನಾಯ್ಕ ರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಬಗ್ಗೆ ಪ್ರಾಸ್ಥಾವಿಕವಾಗಿ ಮಾತನಾಡಿದ ನಿವೃತ್ತನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ತಾಲೂಕಿನಲ್ಲಿ ನಿವೃತ್ತ ನೌಕರರ ಸಂಘದಿಂದ ಸ್ವಚ್ಛತೆ,ಶೌಚಾಲಯ ನಿರ್ಮಾಣ, ಮಳೆಕೊಯ್ಲಿನ ತಿಳುವಳಿಕೆ ನೀಡುತಿದ್ದೇವೆ.ಅದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಶೆಟ್ಟಿ ಮತ್ತು ನಾಯ್ಕ ಸಾರ್ವಜನಿಕ ಸಹಕಾರ,ಜನರ ಪ್ರೀತಿಯಿಂದ ತಮ್ಮ ಬದುಕು ಸಹನೀಯವಾಗಿರುವುದಕ್ಕೆ ಕೃತಜ್ಞತೆ ತಿಳಿಸಿದರು.
ಹಿರಿಯರ ಅನುಭವವೇ ಶಿಕ್ಷಣ, ಸ್ವಾರ್ಥ,ಲಾಭ,ಲೋಭಗಳಿಂದ ಇಂದು ಮಾನವೀಯ ಸಂಬಂಧಗಳೇ ಶಿಥಿಲವಾಗುತ್ತಿರುವುದರಿಂದ ಕಾನೂನು,ಸಂವಿಧಾನ ಇದಕ್ಕೆ ಪರಿಹಾರ ನೀಡುತ್ತವೆ
-ಸಿದ್ಧರಾಮ ಎಸ್.
ವೈಚಾರಿಕ ಸ್ಪಷ್ಟತೆಯಲ್ಲಿ ಅರಳಿದ ಮನುಷ್ಯಪ್ರೀತಿ
ಡಾ. ರಹಮತ್ ತರೀಕೆರೆಯವರು ನಮ್ಮ ನಡುವಿನ ಪ್ರಮುಖ ಸಂಸ್ಕøತಿ ಚಿಂತಕ ಹಾಗೂ ಸಂಶೋಧಕ.
ಕರ್ನಾಟಕವನ್ನು ಬಹುವಿಧದಲ್ಲಿ ಅರ್ಥಮಾಡಿಕೊಳ್ಳುತ್ತ, ಪರ್ಯಾಯ ಸಂಸ್ಕøತಿಗಳ ಶೋಧನೆಯಲ್ಲಿ ತೊಡಗಿರುವ ರಹಮತ್‍ರ ಚಿಂತನೆಗಳ ಪ್ರಾತಿನಿಧಿಕ ಸಂಕಲನ ‘ತನ್ನತನದ ಹುಡುಕಾಟ’ ಕೃತಿ .
ಮನುಷ್ಯವಿರೋಧಿ ತತ್ವಸಿದ್ಧಾಂತ ಅಜೆಂಡಾಗಳನ್ನು ಎದುರು ಹಾಕಿಕೊಂಡು ಸಂಶೋಧನೆ ಅಥವಾ ಚಿಂತನೆಗೆ ತೊಡಗುವ ಅವರ ಅಧ್ಯಯನದಲ್ಲಿ ಮಾನವೀಯತೆಯ ಬಾಗಿಲುಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಅವರ ಯಾವುದೇ ಬರವಣೆಗೆಗಳ ಮೂಲ ಆಶಯವೂ ಇದೇ ಆಗಿದೆ.


