


ತ್ಯಾಗಲಿಗ್ರೂಪ್ ಗ್ರಾಮಗಳ ಸೇ.ಸ.ಸಂ.ದ 102 ನೇ ಹುಟ್ಟುಹಬ್ಬ
ಅಬಲರನ್ನು ಸಬಲರನ್ನಾಗಿಸುವುದೇ ಸಹಕಾರ
ಅಬಲರನ್ನು ಸಬಲರನ್ನಾಗಿ ಮಾಡುವುದೇ ಸಹಕಾರಿಧ್ಯೇಯ ಎಂದಿರುವ ಲೆಕ್ಕಪರಿಶೋಧನಾ ಸಹಾಯಕ ನಿರ್ಧೇಶಕ ರಾಮಪ್ಪ ಸಹಕಾರಿ ರಂಗದ ಯಶಸ್ಸು ಅನೇಕ ಅಂಶಗಳನ್ನು ಆಧರಿಸಿದೆ ಎಂದಿದ್ದಾರೆ.
ಸಿದ್ಧಾಪುರತಾಲೂಕಿನ ತ್ಯಾಗಲಿಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ 102 ನೇ ಹುಟ್ಟುಹಬ್ಬದ ಸಮಾರೋಪ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಹಕಾರಿ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯಪಾಲನೆಯಾಗುತ್ತಿದೆ. ಒಂದು ಸಂಸ್ಥೆ ನೂರು ವರ್ಷಗಳನ್ನು ಪೂರೈಸಿದೆ ಎಂದರೆ ಅದು ಆ ಭಾಗದ ಸಮಾಜೋದ್ಧಾರದ ಕೆಲಸದಲ್ಲಿ ಮುಂಚೂಣಿಯಲ್ಲಿದೆ ಎಂದರ್ಥ ಎಂದರು.
ಕೃಷಿ ಸೇರಿದಂತೆ ಸಮಾಜದ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು, ಪ್ರತಿಭಾವಂತರನ್ನು ಸನ್ಮಾನಿಸಿ, ಗೌರವಿಸಿದ ಈ ಕಾರ್ಯಕ್ರಮದ ಇನ್ನೊಬ್ಬ ಅತಿಥಿ ನಿವೃತ್ತ ಪ್ರಾಂಶುಪಾಲ ಕೆ.ಎನ್.ಹೊಸ್ಮನಿ ಮಾತನಾಡಿ ಶಿಸ್ತು,ಬದ್ಧತೆಯಿಂದ ತ್ಯಾಗಲಿ ಸೇವಾಸಹಕಾರಿ ಸಂಘ ಯಶಸ್ವಿಯಾಗಿದೆ ಎಂದು ಶ್ಲಾಘಿಸಿದರು.
ಈ ಕಾರ್ಯಕ್ರಮದ ಅಂಗವಾಗಿ ನಡೆಸಿದ ನಾನಾ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಅಧ್ಯಕ್ಷ ಎನ್.ಬಿ.ಹೆಗಡೆ ಮತ್ತೀಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಆರ್.ಹೆಗಡೆ ಬಾಳೇಗದ್ದೆ ಸ್ವಾಗತಿಸಿದರು.


