

ಧರ್ಮ ಸಂಸ್ಕೃøತಿ ಎನ್ನುವವರು ಮಲಹೊರುವವರನ್ನು ನೋಡಿ ಕಲಿಯುವ ಅಗತ್ಯವಿದೆ ಎಂದು ಹೇಳಿರುವ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಸುಖದಲ್ಲಿರುವವರು ರಜೆಪಡೆದು, ಪಾರ್ಟಿಮಾಡಿ ಧರ್ಮ,ಸಂಸ್ಕøತಿ ಎನ್ನುತ್ತೇವೆ, ಮಲಬಳಿದು ಭಗ್ನವಿಗ್ರಹದಂತೆ ಮೇಲೆದ್ದು ಬರುವ ಪೌರಕಾರ್ಮಿಕರನ್ನು ನೋಡಿ ಈ ಧರ್ಮ,ಸಂಸ್ಕøತಿ ಎಂದು ಭಾಷಣಬಿಗಿಯುವವರು ಕಲಿಯುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಬೆಂಗಳೂರು ನಗರದ ಸ್ನೇಹಶೃಂಗ ಸಾಹಿತ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾನವೀಯತೆ ದಿನದಿಂದ ದಿನಕ್ಕೆ ಸಾಯುತ್ತಿದೆ. ಮಲಬಳಿಯುವವರ ಬಳಿ ನಿಮಗೆ ಹೇಸಿಗೆಯಾಗುವುದಿಲ್ಲವೆ ಎಂದು ಕೇಳುವ ಪತ್ರಕರ್ತ,ಸುಖದಲ್ಲಿದ್ದು ಧರ್ಮ,ಸಂಸ್ಕøತಿ ಎನ್ನುವ ಜನರು ಈ ಪೌರಕಾರ್ಮಿಕರ ಬದುಕು,ಜೀವನಪ್ರೇಮದಿಂದ ಕಲಿಯುವ ಅಗತ್ಯವಿದೆ ಎಂದು ವಿವರಿಸಿದರು.
