ಆಧಾರ್ ಗೋಳಾಟ ಸಾರ್ವಜನಿಕರ ಆಕ್ರೋಶ

ಸಿದ್ದಾಪುರ ತಾಲೂಕು ಸೇರಿದಂತೆ ಜಿಲ್ಲೆ, ರಾಜ್ಯಾದ್ಯಂತ ಆಧಾರ ನೋಂದಣಿ,ತಿದ್ದುಪಡಿ, ಲಗತ್ತಿಸುವಿಕೆ ಸಾರ್ವಜನಿಕರ ತಲೆನೋವಿಗೆ ಕಾರಣವಾಗಿದೆ.
ಕೆಲವು ವರ್ಷಗಳಿಂದ ಸಾಮೂಹಿಕವಾಗಿ ಆಧಾರ್ ಸಂಖ್ಯೆ ಮಾಡಿಕೊಟ್ಟ ಸರ್ಕಾರಿ ವ್ಯವಸ್ಥೆ ಈಗಲೂ ಅದನ್ನು ಕಡ್ಡಾಯವಾಗಿಸಿದೆ. ಆದರೆ ಆಧಾರ ದಾಖಲು, ನೋಂದಣಿ,ತಿದ್ದುಪಡಿ ಸೇರಿದಂತೆ ಆಧಾರ್ ಸಂಬಂಧಿ ಕೆಲಸಗಳಿಗಾಗಿ ಜನರು ಮುಂಜಾನೆಯಿಂದ ಸರತಿ ಸಾಲಲ್ಲಿ ನಿಂತು ಗೋಳಾಡುವಂತಾಗಿದೆ. ಸಿದ್ದಾಪುರದಲ್ಲಿ ಪೊಸ್ಟ್ ಮುಖ್ಯ ಕಛೇರಿ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್‍ಗಳಲ್ಲಿ ಆಧಾರ್ ಸಂಬಂಧಿ ಕೆಲಸ ಮಾಡಿಕೊಡಲಾಗುತ್ತಿದೆ. ಆದರೆ ಎರಡೂ ಕಡೆ ನುರಿತ, ಅನುಭವಿ ನೌಕರರಿಲ್ಲದಿರುವುದು, ಸಹನೆಯಿಂದ ಕೆಲಸ ಮಾಡದ ಸಿಬ್ಬಂದಿಗಳಿಂದ ಸಾರ್ವಜನಿಕರಿಗೆ ತೊಂದರೆ ಆಗಿದೆ.
ಸರ್ಕಾರ ಇಂಥ ವ್ಯವಸ್ಥೆಗಳನ್ನು ನೀಡುವಾಗ ಉತ್ತರದಾಯಿಯಾದ, ಸರಿಯಾಗಿ ಕೆಲಸಮಾಡಬಲ್ಲ ಸಿಬ್ಬಂದಿ ವ್ಯವಸ್ಥೆ ಇಡಬೇಕು, ಆದರೆ ಈ ವ್ಯವಸ್ಥೆ ಸರ್ಕಾರದ ಕೆಲಸ ದೇವರ ಕೆಲಸ ಎನ್ನುವಂತಾಗಿದೆ ಎಂದು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಹುಟ್ಟಿನಿಂದ ಸಾಯುವವರೆಗೆ ಆಧಾರ್ ಕಡ್ಡಾಯ, ಆಧಾರ ಅನಿವಾರ್ಯ ಎನ್ನುತ್ತಿದೆ. ಆದರೆ ಅದರ ನೋಂದಣಿಗೆ ಸರಿಯಾದ ವ್ಯವಸ್ಥೆ ಮಾಡುತ್ತಿಲ್ಲ ಎಂದು ಗಟ್ಟಿಧ್ವನಿಯಲ್ಲಿ ಆರೋಪಿಸಿದ ಹಿರಿಯರೊಬ್ಬರು ಆಧಾರ್ ರದ್ದು ಮಾಡುತ್ತೇವೆ ಎಂದು ಬಂದ ಸರ್ಕಾರ ಈಗ ಆಧಾರ್ ಕಡ್ಡಾಯ ಮಾಡಿ ಜನರನ್ನು ಹಿಂಸಿಸುತ್ತಿದೆ. ಅವಶ್ಯ ವ್ಯವಸ್ಥೆ, ಸಂರಚನೆ ಮಾಡದ ಸರ್ಕಾರ ಸುಳ್ಳು-ನಾಟಕಗಳಿಂದ ಜನರನ್ನು ಪೀಡಿಸುತ್ತಿದೆ. ಈಗಿನ ಕೇಂದ್ರ ಸರ್ಕಾರದ ಎರಡನೇ ಅವಧಿ ಸಾರ್ವಜನಿಕರ ಮೇಲೆ ಗದಾಪ್ರಹಾರದ ಪರ್ವವಾಗಿದೆ ಎಂದು ಆರೋಪಿಸಿದ್ದಾರೆ.
ಸಿದ್ದಾಪುರ ಸೇರಿದಂತೆ ಬಹುತೇಕ ತಾಲೂಕು, ಜಿಲ್ಲೆ, ರಾಜ್ಯಗಳಲ್ಲಿ ಆಧಾರ ನೋಂದಣಿಯ ಸಮಸ್ಯೆ, ರಗಳೆ ನಿತ್ಯ ವಿದ್ಯಮಾನವಾಗಿದೆ. ಆಧಾರ ಮಾಡಿಕೊಡುವ ಕಚೇರಿಗಳ ಎದುರು ಜನತೆ ಸೂರ್ಯ ಹುಟ್ಟುವ ಮೊದಲೇ ಬಂದು ಕೂತಿದ್ದು ಸಂಜೆ ಸರತಿ ಸಾಲು ಮುಗಿಯುತ್ತಲೇ ಗೊಣಗುತ್ತಾ ಮನೆ ಹಾದಿ ಹಿಡಿಯುತಿದ್ದಾರೆ. ಪ್ರವಾಹ, ಮಳೆ, ಬೆಳೆ ಹಾನಿ ಈ ರಗಳೆಗಳ ಮಧ್ಯೆ ಆಯುಷ್ ಮಾನ ಭಾರತ, ಆಧಾರ ಕಾರ್ಡ್, ತಿಂಗಳಿಗೊಮ್ಮೆ ಕೊಟ್ಟ ದಾಖಲೆಗಳನ್ನೇ ಕೊಡುವುದು ಇದು ಬಂಡವಾಳಶಾಹಿಗಳ ಸರ್ಕಾರದ ಜನಸಾಮಾನ್ಯರ ಸುಲಿಗೆ ರೀತಿ ಎಂದು ಹೆಸರು ಹೇಳಲಿಚ್ಛಿಸದ ಸಾರ್ವಜನಿಕರೊಬ್ಬರು ಆರೋಪಿಸಿದರು.
ಉತ್ತರಕನ್ನಡ ಜಿಲ್ಲೆಯಲ್ಲಂತೂ ಸರ್ಕಾರಿ, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಶಾಸಕರು, ಸಂಸದರು ಕೇಳುತ್ತಿಲ್ಲ. ಸ್ಥಳಿಯ ಪ್ರತಿನಿಧಿಗಳಿಗೆ ಆ ಜ್ಞಾನವೂ ಇಲ್ಲ, ಅಧಿಕಾರವೂ ಇಲ್ಲ. ಎನ್ನುವಂತಾಗಿದೆ. ಪ್ರತಿತಿಂಗಳು ದಾಖಲೆ ಮಾಡಿಸುವುದು ಅದನ್ನು ಪ್ರತಿಬಾರಿ ನಾನಾ ಇಲಾಖೆಗಳಿಗೆ ಸಲ್ಲಿಸುವ ಬದಲು ಆಯಾ ಇಲಾಖೆಗಳು ನೇರವಾಗಿ ಈ ದಾಖಲೆಗಳನ್ನು ಪೂರೈಸಿ ಕನಿಷ್ಟ ಶುಲ್ಕ ಪಡೆಯುವಂತಾದರೆ ಈ ಸಮಸ್ಯೆ ಬಗೆಹರಿಯಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಡಿಜಿಟಲ್ ಇಂಡಿಯಾ ಎನ್ನುತ್ತಾ ಜನರನ್ನು ಗೋಳಾಡಿಸುತ್ತಿರುವ ಪ್ರಭುತ್ವದ ವಿರುದ್ಧ ಜನವಿರೋಧವಂತೂ ಸಾರ್ವತ್ರಿಕವಾಗಿ ವ್ಯಕ್ತವಾಗಿದೆ. ಆದರೆ ಜನರ ತೊಂದರೆ, ಸಮಸ್ಯೆಗಳಿಗೆ ಸ್ಫಂದಿಸಬೇಕಾದ ವಿರೋಧ ಪಕ್ಷಗಳು, ವಿರೋಧಿ ನಾಯಕರು ಚುರುಕಾಗದ ಬಗ್ಗೆ ಸಾರ್ವಜನಿಕರ ಅಸಮಧಾನವೂ ಸ್ವಾಭಾವಿಕವಾಗಿದೆ.
(ಈವರದಿಗೆ ಪ್ರತಿಕ್ರೀಯಿಸಿರುವ ಅಣ್ಣಪ್ಪ ಕಡಕೇರಿ ತಾವು ಸೇರಿದಂತೆ ತಾಲೂಕು, ಜಿಲ್ಲೆಯಲ್ಲಿ ಈ ವ್ಯವಸ್ಥೆ ಮಾಡಿಕೊಡುವ ಖಾಸಗಿ ಆನ್‍ಲೈನ್ ಕೇಂದ್ರಗಳಿದ್ದರೂ ಜನರು ಅನಾವಶ್ಯಕ ಗೋಳಾಡುತಿದ್ದಾರೆ, ಎಂದಿದ್ದಾರೆ.)
ಈ ಸಮಸ್ಯೆ ಬಗ್ಗೆ ಇಂದು ತಾಲೂಕಾ ಪಂಚಾಯತ್ ನಲ್ಲಿ ತಾ.ಪಂ. ಅಧ್ಯಕ್ಷ ಸುಧೀರ್ ಗೌಡರ್ ಜಿ.ಪಂ. ಮುಖ್ಯ ಕಾರ್ಯದರ್ಶಿಗಳ ಎದುರು ಆಕ್ಷೇಪಿಸಿದ್ದಾರೆ.

ಕಸಮುಕ್ತ ಜಿಲ್ಲೆಯಾಗುವತ್ತ
ಉತ್ತರ ಕನ್ನಡ
ಉತ್ತರ ಕನ್ನಡ ಜಿಲ್ಲೆಯನ್ನು ರಾಜ್ಯದ ಮೊದಲ ಕಸಮುಕ್ತ ಜಿಲ್ಲೆ ಮಾಡುವ ಹಿನ್ನೆಲೆಯಲ್ಲಿ ಪ್ರಯತ್ನಿಸುತಿದ್ದು ಜಿಲ್ಲೆಯ 231 ಗ್ರಾಮ ಪಂಚಾಯತ್ ಗಳ ಸಹಕಾರದಿಂದ ಈ ಸಾಧನೆ ಆಗುವ ವಿಶ್ವಾಸವಿದೆ ಎಂದು ಜಿ.ಪಂ. ಮುಖ್ಯ ಕಾರ್ಯದರ್ಶಿ ಮಹಮ್ಮದ್ ರೋಷನ್ ತಿಳಿಸಿದ್ದಾರೆ.
ಸಿದ್ದಾಪುರ ತಾ.ಪಂ. ನಲ್ಲಿ ನಡೆದ ಪ್ರಗತಿ ಪರಿಶೀಲನೆ ಮತ್ತು ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಉಡುಪಿ ಮತ್ತು ಮಂಗಳೂರಿನಲ್ಲಿ ಕಸವಿಲೇವಾರಿಯಲ್ಲಿ ಸಮಾಧಾನಕರ ಸಾಧನೆ ಮಾಡಿದ್ದಾರೆ.ಉತ್ತರ ಕನ್ನಡದಲ್ಲಿ ಕೇವಲ ನಾಲ್ಕು ತಿಂಗಳಲ್ಲಿ ಹತ್ತು ಗ್ರಾ.ಪಂ. ಗಳಲ್ಲಿ ಕಸವಿಲೇವಾರಿ ಘಟಕ ಸ್ಥಾಪಿಸಿದ್ದೇವೆ. ಇದೇವರ್ಷ ಉ.ಕ. ವನ್ನು ರಾಜ್ಯದ ಮೊದಲ ಕಸಮುಕ್ತ ಜಿಲ್ಲೆ ಮಾಡುವ ಹಿನ್ನೆಲೆಯಲ್ಲಿ ಪ್ರಯತ್ನಗಳು ಸಾಗಿದ್ದು ತಾ.ಪಂ. ಗ್ರಾ.ಪಂ. ಗಳು ಸಹಕರಿಸಿದರೆ ಈ ಸಾಧನೆ ಕಷ್ಟವಲ್ಲ ಎಂದರು.
ತೆರಿಗೆ ಸಂಗ್ರಹದಲ್ಲಿ ಮತ್ತು ಗ್ರಾಮೀಣ ಉದ್ಯೋಗ ಖಾತ್ರಿ ಅನುಷ್ಠಾನಗಳಲ್ಲಿ ಉತ್ತರ ಕನ್ನಡ ರಾಜ್ಯದಲ್ಲೇ ನಂ1 ಆಗಿದೆ ಎಂದರು.
14 ನೇ ಹಣಕಾಸಿನ ವೆಚ್ಚವಾಗದ ಜಿಲ್ಲೆಯ ಒಂದುನೂರು ಕೋಟಿರೂಪಾಯಿಗಳನ್ನು ಆದಷ್ಟು ಶೀಘ್ರ ಕ್ರೀಯಾಯೋಜನೆ ರೂಪಿಸಿ ಸದ್ಭಳಕೆ ಮಾಡಿಕೊಳ್ಳಲು ಸಹಕರಿಸದಿದ್ದರೆ ಈ ಅನುದಾನ ಕೇಂದ್ರಕ್ಕೆ ಮರಳಲಿದೆ ಎಂದು ಎಚ್ಚರಿಸಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *