

ಉತ್ತರ ಕನ್ನಡ ಜಿಲ್ಲೆಯನ್ನು ರಾಜ್ಯದ ಮೊದಲ ಕಸಮುಕ್ತ ಜಿಲ್ಲೆ ಮಾಡುವ ಹಿನ್ನೆಲೆಯಲ್ಲಿ ಪ್ರಯತ್ನಿಸುತಿದ್ದು ಜಿಲ್ಲೆಯ 231 ಗ್ರಾಮ ಪಂಚಾಯತ್ ಗಳ ಸಹಕಾರದಿಂದ ಈ ಸಾಧನೆ ಆಗುವ ವಿಶ್ವಾಸವಿದೆ ಎಂದು ಜಿ.ಪಂ. ಮುಖ್ಯ ಕಾರ್ಯದರ್ಶಿ ಮಹಮ್ಮದ್ ರೋಷನ್ ತಿಳಿಸಿದ್ದಾರೆ.
ಸಿದ್ದಾಪುರ ತಾ.ಪಂ. ನಲ್ಲಿ ನಡೆದ ಪ್ರಗತಿ ಪರಿಶೀಲನೆ ಮತ್ತು ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಉಡುಪಿ ಮತ್ತು ಮಂಗಳೂರಿನಲ್ಲಿ ಕಸವಿಲೇವಾರಿಯಲ್ಲಿ ಸಮಾಧಾನಕರ ಸಾಧನೆ ಮಾಡಿದ್ದಾರೆ.ಉತ್ತರ ಕನ್ನಡದಲ್ಲಿ ಕೇವಲ ನಾಲ್ಕು ತಿಂಗಳಲ್ಲಿ ಹತ್ತು ಗ್ರಾ.ಪಂ. ಗಳಲ್ಲಿ ಕಸವಿಲೇವಾರಿ ಘಟಕ ಸ್ಥಾಪಿಸಿದ್ದೇವೆ. ಇದೇವರ್ಷ ಉ.ಕ. ವನ್ನು ರಾಜ್ಯದ ಮೊದಲ ಕಸಮುಕ್ತ ಜಿಲ್ಲೆ ಮಾಡುವ ಹಿನ್ನೆಲೆಯಲ್ಲಿ ಪ್ರಯತ್ನಗಳು ಸಾಗಿದ್ದು ತಾ.ಪಂ. ಗ್ರಾ.ಪಂ. ಗಳು ಸಹಕರಿಸಿದರೆ ಈ ಸಾಧನೆ ಕಷ್ಟವಲ್ಲ ಎಂದರು.
ತೆರಿಗೆ ಸಂಗ್ರಹದಲ್ಲಿ ಮತ್ತು ಗ್ರಾಮೀಣ ಉದ್ಯೋಗ ಖಾತ್ರಿ ಅನುಷ್ಠಾನಗಳಲ್ಲಿ ಉತ್ತರ ಕನ್ನಡ ರಾಜ್ಯದಲ್ಲೇ ನಂ1 ಆಗಿದೆ ಎಂದರು.
14 ನೇ ಹಣಕಾಸಿನ ವೆಚ್ಚವಾಗದ ಜಿಲ್ಲೆಯ ಒಂದುನೂರು ಕೋಟಿರೂಪಾಯಿಗಳನ್ನು ಆದಷ್ಟು ಶೀಘ್ರ ಕ್ರೀಯಾಯೋಜನೆ ರೂಪಿಸಿ ಸದ್ಭಳಕೆ ಮಾಡಿಕೊಳ್ಳಲು ಸಹಕರಿಸದಿದ್ದರೆ ಈ ಅನುದಾನ ಕೇಂದ್ರಕ್ಕೆ ಮರಳಲಿದೆ ಎಂದು ಎಚ್ಚರಿಸಿದರು.
