ವಕೀಲರ ಕಾಯ್ದೆ 1961 (ತಿದ್ದುಪಡಿ) ಕಾಯ್ದೆ 2017 ಅಸಂವಿಧಾನಿಕ

ಸಂವಿಧಾನದ ಸುತ್ತ
ವಕೀಲರ ಕಾಯ್ದೆ 1961 (ತಿದ್ದುಪಡಿ) ಕಾಯ್ದೆ 2017 ಅಸಂವಿಧಾನಿಕ
ವಕೀಲರ ಹಕ್ಕುಗಳಿಗೆ ಚ್ಯುತಿ ತರುವ, ವಕೀಲರ ಸಂಘಟನೆಗಳಲ್ಲಿ, ವಕೀಲ ವೃತ್ತಿಯಲ್ಲಿ ಭಾಗವಹಿಸುವವರ ಸವಾರಿಗೆ ಅವಕಾಶ ಇರುವ ಅಸಂವಿಧಾನಿಕವಾದ ವಕೀಲರ ಕಾನೂನಿಗೆ ತಿದ್ದುಪಡಿ ಮಾಡುವ ಕುರಿತು ಭಾರತದ ಕಾನೂನು ಆಯೋಗವು ಕೇಂದ್ರ ಕಾನೂನು ಸಚಿವರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ವರದಿಯನ್ನು ತಯಾರಿಸಿ ಸಲ್ಲಿಸಿದೆ.
ಈ ವರದಿಯನ್ನು ಪರಿಶೀಲಿಸಿದ ಭಾರತದ ವಕೀಲರ ಪರಿಷತ್ತು ವಕೀಲರ ಕಾಯ್ದೆ ತಿದ್ದುಪಡಿ ಮಸೂದೆ 2017ನ್ನು ಸಾರಸಗಾಟಾಗಿ ಅಲ್ಲಗಳೆದಿರುತ್ತದೆ. ವಕೀಲರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವ ಹಾಗೂ ವಕೀಲರ ವೃತ್ತಿಗೆ ಸಂಬಂಧ ಇಲ್ಲದವರು ವಕೀಲರ ಸಂಘಗಳಿಗೆ ಸದಸ್ಯರಾಗಲು ಅವಕಾಶ ಇರುವ ಈ ತಿದ್ದುಪಡಿಯನ್ನು ರಾಜ್ಯಗಳ ವಕೀಲರ ಪರಿಷತ್ತಿನ ಸದಸ್ಯರೊಂದಿಗೆ ಸಭೆ ಸೇರಿದ ಭಾರತದ ವಕೀಲರು ಪರಿಷತ್ತು ಏಪ್ರಿಲ್ 8 ಮತ್ತು 9 2017 ರಂದು ಜಂಟಿ ಸಭೆ ನೆಡೆಸಿ ತಿದ್ದುಪಡಿ ಮಸೂದೆಯ ವರದಿಯನ್ನು ತಿರಸ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸದಂತೆ ಮತ್ತು ಈಗಿರುವ ಭಾರತದ ಕಾನೂನು ಆಯೋಗದ ಅಧ್ಯಕ್ಷ ಶ್ರೀ ಬಿ.ಎಸ್. ಚೌವ್ಹಾಣರವರನ್ನು ವಜಾ ಮಾಡುವ ಕುರಿತು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಕಾನೂನು ಸಚಿವರ ಮೇಲೆ ಒತ್ತಡ ತರಲು ರಾಷ್ಟ್ರ ನ್ಯಾಯವಾದಿಗಳು ಸಹಿ ಸಂಗ್ರಹ ಮಾಡುತ್ತಿದ್ದಾರೆ.
ದಿನಾಂಕ 21/04/2017 ರಂದು ರಾಷ್ಟ್ರ ವ್ಯಾಪಿ ಎಲ್ಲಾ ನ್ಯಾಯಾಲಯಗಳಲ್ಲಿ ವಕೀಲರುಗಳು ತಿದ್ದುಪಡಿ ವಿದೆಯಕಕ್ಕೆ ಸಾಂಕೇತಿಕವಾಗಿ ಬೆಂಕಿ ಹಚ್ಚುವ ಮೂಲಕ ವಿರೋಧಿಸಿದ್ದಾರೆ. ಮುಂದೆ ನಂತರ 2/5/2017ರಂದು ರಾಷ್ಟ್ರ ವ್ಯಾಪ್ತಿಯ ವಕೀಲರುಗಳು ಕಾನೂನು ಆಯೋಗದ ಮುಂದೆ ರ್ಯಾಲಿ ಕೈಗೊಂಡು ತಿದ್ದುಪಡಿ ವಿಧೇಯಕವನ್ನು ವಕೀಲರ ಹಕ್ಕುಗಳಿಗೆ ಚ್ಯುತಿತರುವಂತಹ ಕಾನೂನು ಆಯೋಗ ಸಲ್ಲಿಸಿದ್ದು ತಿದ್ದುಪಡಿ ಮಸೂದೆ 2017ನ್ನು ಕೈಬಿಡುವಂತೆ ಕೇಂದ್ರ ಕಾನೂನು ಸಚಿವರು ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ಭಾರತದ ವಕೀಲರು ಪರಿಷತ್ತು ನಿರ್ಣಯ ಕೈಗೊಂಡಿದೆ, ಅಂದು ವಕೀಲರ ರ್ಯಾಲಿಯು ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಆವರಣದಿಂದ ರಾಜಘಾಟವರೆಗೆ ಸಮವಸ್ತ್ರದೊಂದಿಗೆ ನೆಡೆಯಲಿದೆ. ಈ ರ್ಯಾಲಿಗೆ ಭಾಗವಹಿಸುವಂತೆ ಭಾರತ ವಕೀಲಪರಿಷತ್ತಿನ ಕಾರ್ಯದರ್ಶಿ ಶ್ರೀ ಮೆಂಟೋ ಸೇನ್ ಕರೆ ನೀಡಿದ್ದಾರೆ.
ಪ್ರಸ್ತಾಪಿತ ವಕೀಲರ ಕಾಯ್ದೆಯ ತಿದ್ದುಪಡಿ ವರದಿಯ 2017ನೇದರಲ್ಲಿ ವಕೀಲರ ಹಕ್ಕುಗಳಿಗೆ ಚ್ಯುತಿ ತರುವಂತಹ ಅಂಶಗಳು ಏನಿವೆ ಎಂಬುವುದನ್ನು ಚರ್ಚಿಸುವುದಾದರೆ ಪ್ರಮುಖವಾಗಿ ಈ ಕಾಯ್ದೆಯಲ್ಲಿ ಕಾನೂನು ಸೇವೆ ಎಂಬ ಹೊಸ ಪದವನ್ನು ಸೇರಿಸುವ ಮೂಲಕ ಕೇವಲ ವಕೀಲರಲ್ಲದೇ ಕಾನೂನು ಮಾಹಿತಿಯನ್ನು ನೀಡುವವರು ಸಹ ಎಂಬ ಅರ್ಥ ಬರುವ ರೀತಿಯಲ್ಲಿ ವಿವರಿಸಲಾಗಿದೆ.ವಕೀಲರ ಕಾಯ್ದೆ ಕಲಂ 24 -ನೇದರಲ್ಲಿ ವಕೀಲರಾದವರ ದುರ್ನಡತೆಗೆ , ನಂಬಿಕೆ ದ್ರೋಹ, ಕಾನೂನು ಬಾಹೀರ ನಡಾವಳಿಕೆ ಮುಖಾಂತರ ಪಕ್ಷಗಾರರನ್ನು ನಿರ್ಲಕ್ಷಿಸಿದ್ದಲ್ಲಿ ಹಾಗೂ ಅಪರಾಧಿಕ ನಂಬಿಕೆ ದ್ರೋಹ ಎಸಗಿದ್ದಲ್ಲಿ ಅಂತಹವರನ್ನು ವೃತ್ತಿಯಿಂದ ನಿರ್ದಾಕ್ಷಿಣ್ಯ ಅನರ್ಹಗೊಳಿಸಲು ಅವಕಾಶ ನೀಡಲಾಗಿದೆ.
ಇದಕ್ಕೂ ಮುಂಚೆ ಈ ರೀತಿ ದುರ್ನಡತೆಯ ಪ್ರಕರಣಗಳು ಬಂದಲ್ಲಿ ಡಿಸಿಪ್ಲೇನೆರಿ ಕಮೀಟಿಯಲ್ಲಿ ವಿಚಾರಣೆಗೆ ನೆಡೆಸಿ ತಪ್ಪು ಎಂದು ಸಾಬೀತಾದಲ್ಲಿ ಮಾತ್ರ ಅಂತಹವರನ್ನು ಅನರ್ಹಗೊಳಿಸಲಾಗುತ್ತಿತ್ತು.
ಆದರೆ ಪ್ರಸ್ಥಾಪಿಸಿದ ವರದಿಯಲ್ಲಿ ವಿಚಾರಣೆಯ ಬಗ್ಗೆ ಹೆಚ್ಚು ವಿವರಣೆ ನೀಡಿಲ್ಲ. ಆದರೂ ಡಿಸಿಪ್ಲೇನರಿ ಕಮೀಟಿಯನ್ನು ಪುನಃ ರಚಿಸಲಾಗಿದೆ. ಈ ಕಮಿಟಿಯಲ್ಲಿ ಹೈಕೋರ್ಟ್ ನ್ಯಾಯಾಧೀಶರುಗಳಿಗೆ ಅಥವಾ ನಿವೃತ್ತ ಸುಪ್ರೀಂ ಕೋರ್ಟ ನ್ಯಾಯಾಧೀಶರುಗಳಿಗೆ ನೇಮಣೂಕಿ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಆದ್ದರಿಂದ ಈಗ ರಚನೆಯಾಗುವ ಡಿಸಿಪ್ಲೇನರಿ ಕಮಿಟಿ ವಕೀಲರಿಗೆ ನ್ಯಾಯಾ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಲಾರದು.ಪ್ರಸ್ತಾಪಿತ ಕಾಯ್ದೆಯಲ್ಲಿ ಹೊಸದೊಂದು ವಿಚಾರವನ್ನು ಸೇರಿಸಲಾಗಿದೆ. ರಾಜ್ಯ ವಕೀಲರ ಪರಿಷತ್ತುಗಳಿಂದ ರಜಿಸ್ಟರ ಆಫ್ ಲಾಫರ್ಮ್ ಕಟ್ಟಿಕೊಳ್ಳಲು ಅವಕಾಶ ನೀಡಲಾಗಿದೆ.
ಆದರೆ ಈ ರೀತಿಯ ಫರ್ಮಗಳು ಕಂಪನಿಕಾಯ್ದೆ ಹಾಗೂ ಆದಾಯ ತೆರಿಗೆ ಕಾಯ್ದೆಯೊಂದಿಗೆ ತಳುಕು ಹಾಕಲಾಗಿದೆ. ಆದ್ದರಿಂದ ವಕೀಲರುಗಳು ಫರ್ಮ ರಜಿಸ್ಟ್ರೇಶನ್‍ನಿಗಾಗಿ ತನ್ನ ಪಕ್ಷಗಾರರಿಗೆ ನ್ಯಾಯ ಕೊಡಿಸುವ ಬದಲು ದಿನಪ್ರತಿ ಬೇರೆ ಬೇರೆ ಕಛೇರಿಗಳಿಗೆ ಅಲೆಯಬೇಕಾದ ಪ್ರಸಂಗ ಬರಬಹುದು.
ಈ ತಿದ್ದು ಪಡಿಯ ಮತ್ತೊಂದು ಅಪಾಯಕಾರಿ ಪ್ರಜಾಪ್ರಭುತ್ವ ವಿರೋಧಿ ಪ್ರಸ್ತಾಪವೇನೆಂದರೆ ರಾಜ್ಯ ವಕೀಲರ ಪರಿಷತ್ತುಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಚುನಾವಣೆಗೆ ಯಾರು ಹೇಗೆ ಸ್ಪರ್ಧಿಸಬೇಕು ಎಂಬ ಬಗ್ಗೆ ನಿಯಮಾವಳಿ. ಈ ಹಿಂದೆ ಐದು ಸಾವಿರ ಸದಸ್ಯಕ್ಕಿಂತ ಹೆಚ್ಚಿಲ್ಲದ ಸದಸ್ಯರುಗಳು ಇದ್ದಲ್ಲಿ 11 ಜನರ ರಾಜ್ಯ ವಕೀಲರ ಪರಿಷತ್ತು ಹದಿನೈದು ಸಾವಿರ ಕ್ಕಿಂತ ಹೆಚ್ಚು ಇಲ್ಲದಿದ್ದಲ್ಲಿ 15ಜನ ಸದಸ್ಯರು ಅದಕ್ಕಿಂತ ಹೆಚ್ಚಿದ್ದಲ್ಲಿ 21 ಜನ ಸದಸ್ಯರುಳ್ಳ ರಾಜ್ಯ ವಕೀಲರ ಪರಿಷತ್ತುಗಳು ರಚನೆಯಾಗುತ್ತಿದ್ದವು.ವಕೀಲರು ನೇರವಾಗಿ ಚುನಾವಣೆಯಲ್ಲಿ ಮತಹಾಕುವ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತಿದ್ದವು ಪ್ರಸ್ತಾಪಿತ ತಿದ್ದುಪಡಿ ಮಸೂದೆಯಲ್ಲಿ ರಾಜ್ಯ ವಕೀಲರ ಪರಿಷತ್ತಿಗೆ ಆಯ್ಕೆಯಾಗಬಯಸುವವರು, 2 ಅವಧಿಯಲ್ಲದ ನಿರಂತರ 3ನೇ ಅವಧಿಗೆ ಚುನಾವಣೆಯಲ್ಲಿ ಆಯ್ಕೆ ಬಯಸಿ ಸ್ಪರ್ಧಿಸುವಂತಿಲ್ಲ. ಅದೇ ರೀತಿ ಹೈಕೋರ್ಟ್‍ನಿಂದ ನೇಮಕ ಆಗುವವರು ಕೂಡಾ 2 ಕ್ಕಿಂತ ಹೆಚ್ಚಿನ ಅವಧಿಗೆ ನೇಮಕ ಬಯಸುವಂತಿಲ್ಲ. ಮತ್ತು 5 ವರ್ಷದ ಅವಧಿಯಲ್ಲಿ 2 ವರ್ಷಕ್ಕೊಮ್ಮೆ ಸರದಿಯಂತೆ ಬದಲಾಯಿಸಲು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುವವರು 25 ವರ್ಷಕ್ಕಿಂತ ಹೆಚ್ಚಿನ ಅನುಭವ ಹೊಂದಿದ ಲೆಕ್ಕಶಾಸ್ತ್ರ, ವಾಣಿಜ್ಯ, ವೈದ್ಯಕೀಯ ಸೇವೆ ಮೇಲ್ವಿಚಾರಣೆ, ಸಾರ್ವಜನಿಕ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಸುಪ್ರೀಂಕೋರ್ಟಿನ ಪರವಾನಿಗೆಯೊಂದಿಗೆ ಅವಕಾಶ ನೀಡಲಾಗಿದೆ. ಹೀಗೆ ಪ್ರಜಾಸತ್ತಾತ್ಮಕವಾದಂತಹ ವಕೀಲರ ಪರಿಷತ್ತುಗಳನ್ನು ಬೇರೆ ರೀತಿಯಲ್ಲಿ ರಚಿಸಲು ತಿದ್ದುಪಡಿ ಕಾಯ್ದೆ ಪ್ರಯತ್ನ ಮಾಡಿದೆ.
ಅದೇ ರೀತಿ ಈವರೆಗೂ ವಕೀಲರಾಗಿ ನೋಂದಾಯಿತ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದ ಎಲ್ಲರಿಗೂ ವೃತ್ತಿ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಪ್ರಸ್ತಾಪಿತ ಕಾಯ್ದೆ ಕಾನೂನು ಸೇವೆಯನ್ನು ಹರಿತಗೊಳಿಸುವ ಸಲುವಾಗಿ ಕಾನೂನಿನ ತಿಳುವಳಿಕೆಯನ್ನು ಅಭ್ಯರ್ಥಿಗಳಲ್ಲಿ ಹೆಚ್ಚಿಸುವ ಸಲುವಾಗಿ ಕಾನೂನು ಪದವಿ ಪಡೆದ ನಂತರವು ಕಾಲಕಾಲಕ್ಕೆ ರಾಷ್ಟ್ರ ವಕೀಲರ ಪರಿಷತ್ತಿನಿಂದ ಪರೀಕ್ಷೆಯನ್ನು ಎದುರಿಸುವ ಪ್ರಮೇಯವನ್ನು ಹೊಸ ವಕೀಲರಿಗೆ ವಿಧಿಸಲಾಗಿದೆ. ಯೂನಿವರ್ಸಿಟಿಗಳು ನಡೆಸಿದ ಪರೀಕ್ಷೆಗಿಂತ ಪರಿಣಾಮಕಾರಿಯಾಗಿ ವಕೀಲರ ಪರಿಷತ್ತು ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಈ ಮೂಲಕ ಕಾನೂನು ಜ್ಞಾನವನ್ನು ವಿಸ್ತಾರಗೊಳಿಸಲು ವಕೀಲರ ಪರಿಷತ್ತು ಪರೀಕ್ಷೆಯನ್ನು ಹಮ್ಮಿಕೊಂಡಿರುವುದು ಕೇವಲ ಹಾಸ್ಯಾಸ್ಪದ ಸಂಗತಿ. ಆದ್ದರಿಂದ ತಿದ್ದುಪಡಿ ಮಸೂದೆಯ ಪ್ರಸ್ತಾಪಗಳು ವಕೀಲರ ಹಕ್ಕುಗಳಿಗೆ ನೇರವಾಗಿ ಚ್ಯುತಿ ತರುವಂತಹದ್ದಾಗಿದೆ. ಅದೇ ರೀತಿ ಕಲಂ 35 ಎ ರಲ್ಲಿ ಅಪಾಯಕಾರಿ ಆದಂತಹ ತಿದ್ದುಪಡಿ ಪ್ರಸ್ತಾಪವನ್ನು ನೀಡಲಾಗಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದು ಸಂವಿಧಾನ ರಚನೆಯಾಗಿರುವುದು ಕೇವಲ ಹೋರಾಟದಿಂದಾಗಿ ಪ್ರತಿಭಟನೆ ಮಾಡುವುದು ಈ ಸಂವಿಧಾನ ಜನತೆಗೆ ನೀಡಿದ ಮೂಲಭೂತ ಹಕ್ಕುಗಳಲ್ಲಿ ಒಂದು.
ಹೀಗಿರುವಲ್ಲಿ ಕಲಂ 35 ಎ ನಲ್ಲಿ ವಕೀಲರುಗಳು ಕಲಾಪದಿಂದ ಹೊರಗುಳಿಯುವಂತಹ, ಪ್ರತಿಭಟಿಸದಂತಹ, ಬಹಿಷ್ಕರಿಸದಂತೆ ನ್ಯಾಯಾಲಯದ ಆವರಣಗಳಲ್ಲಿ ತೊಂದರೆ ಮಾಡದಂತೆ ಇರಬೇಕು ಎಂಬ ನಿರ್ಬಂಧವನ್ನು ಹೇರಲಾಗಿದೆ. ಈ ತರಹದ ವಿಚಾರಗಳು ಸಂವಿಧಾನದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾದಂತವುಗಳು. ಈವರೆಗೂ ಈ ದೇಶದ ಬಡ ರೈತರ ಮೇಲೆ ಕಾರ್ಮಿಕರ ಮೇಲೆ ವಿದ್ಯಾರ್ಥಿಗಳ ಮೇಲೆ ಕೂಲಿಕಾರರ ಮೇಲೆ ಅವರ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ಗಧಾಪ್ರಹಾರ ಎಸಗುತ್ತಾ ಬರಲಾಗುತ್ತಿದೆ. ಈಗ ಈ ರೀತಿಯ ಅಸಂವಿಧಾನಿಕ ತಿದ್ದುಪಡಿ ವರದಿಯನ್ನು ಸಲ್ಲಿಸುವ ಮೂಲಕ ಈ ದೇಶದ ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸಿಕೊಂಡು ಬರಲು ದೊಡ್ಡ ಪ್ರಮಾಣದ ಕಾಣಿಕೆ ನೀಡಿದ ವಕೀಲರ ವೃತ್ತಿಗೂ ತೊಂದರೆಯನ್ನುಂಟು ಮಾಡುವ ವಕೀಲರ ಕಾಯ್ದೆ ತಿದ್ದುಪಡಿ ವರದಿ 2017 ನ್ನು ರಾಷ್ಟ್ರಾದ್ಯಂತ ನ್ಯಾಯೋಚಿತವಾಗಿ ವಿರೋಧಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಆಗಿದೆ.
-ಶಿವರಾಯ ದೇಸಾಯಿ ವಕೀಲರು, ಶಿರಸಿ (ಉ.ಕ)

ಸಿದ್ಧಾಪುರದ ಕರವೇ ಘಟಕ ಕರವೇಗಜಸೇನೆಯೊಂದಿಗೆ ವಿಲೀನ
ಮಹತ್ವದ ಬೆಳವಣಿಗೆಯೊಂದರಲ್ಲಿ ನಾರಾಯಣ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ಸಿದ್ಧಾಪುರ ಘಟಕ ಕರವೇ ಗಜಪಡೆಯೊಂದಿಗೆ ವಿಲೀನಗೊಂಡಿದೆ.
ಬಹಳ ವರ್ಷಗಳ ನಂತರ ಕಳೆದ ವರ್ಷ ಕರವೇ ಸಿದ್ಧಾಪುರದಲ್ಲಿ ತನ್ನ ಘಟಕ ಪ್ರಾರಂಭಿಸಿತ್ತು. ಈಗ ಕರವೇ ಗಜಪಡೆಯೊಂದಿಗೆ ಕರವೇ ವಿಲೀನವಾಗುವ ಮೊದಲು ಇಲ್ಲಿಯ ಕೆಲವು ಸದಸ್ಯರು ಅನ್ಯ ಸಂಘಟನೆ ಸೇರಿದ್ದರು. ಈಗ ಕರವೇ ಗಜಪಡೆಯೊಂದಿಗೆ ವಿಲೀನದ ಬಳಿಕ ಮಾಧ್ಯಮಪ್ರತಿನಿಧಿಗಳಿಗೆ ಪ್ರತಿಕ್ರೀಯೆ ನೀಡಿರುವ ಕರವೇ ಅಧ್ಯಕ್ಷ ದಿವಾಕರ ನಾಯ್ಕ ಕರವೇ ಜಿಲ್ಲಾಧ್ಯಕ್ಷರ ವಿಳಂಬ ಧೋರಣೆ, ಅಸಹಕಾರದಿಂದ ಬೇಸತ್ತು ಘಟಕವನ್ನು ಕರವೇ ಗಜಪಡೆಯೊಂದಿಗೆ ವಿಲೀನ ಮಾಡಿದ್ದೇವೆ ಎಂದಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *