

ಕ್ಯಾರ್, ಮಳೆ ಅನಾಹುತ:ತೊಂದರೆ
ಉತ್ತರಕನ್ನಡ ಜಿಲ್ಲೆಯಲ್ಲಿ ಕ್ಯಾರ್ ಚಂಡಮಾರುತ ಮತ್ತು ಮಳೆಯ ಪರಿಣಾಮ ಅನೇಕ ಕಡೆ ತೊಂದರೆಯಾಗಿದೆ. ಕರಾವಳಿಯಲ್ಲಿ ಜನಜೀವನ ಸಂಪೂರ್ಣ ಹದಗೆಟ್ಟಿದೆ. ಮಲೆನಾಡಿನಲ್ಲಿ ಮಳೆಗಾಳಿ ಜೋರಾಗಿದೆ ಅಲ್ಲಲ್ಲಿ ಮನೆ. ಕೊಟ್ಟಿಗೆ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿದ್ದರೆ, ಸಿದ್ದಾಪುರ ನಗರದ ಹೊನ್ನೆಗುಂಡಿಯಲ್ಲಿ ಮುರಿದುಬಿದ್ದ ವಿದ್ಯುತ್ ತಂತಿಗೆ ಸಿಲುಕಿ ಜವಾರಿ ಆಕಳೊಂದು ಅಸುನೀಗಿದೆ.
ಅಂಗನವಾಡಿ ಶಿಕ್ಷಕಿಯರು,
ಸಹಾಯಕಿಯರಿಗೆ ಗೌರವಧನ ಹೆಚ್ಚಳ
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ರಾಜ್ಯ ಸರ್ಕಾರದ ದೀಪಾವಳಿ ಉಡುಗೋರೆ ದೊರೆತಿದೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ 2000 ಮಾಸಿಕ ವೇತನ ಹೆಚ್ಚಳ ಮತ್ತು ಸಹಾಯಕಿಯರಿಗೆ ಒಂದು ಸಾವಿರ ಹೆಚ್ಚಳ ಮಾಡಿದೆ. ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ಎಂಟುಸಾವಿರ ಮತ್ತು ಸಹಾಯಕಿಯರಿಗೆ ಮಾಸಿಕ ನಾಲ್ಕು ಸಾವಿರ ರೂ.ಗೌರವಧನ ನೀಡಲಾಗುತಿತ್ತು.
ಆಯುಷ್‍ಮಾನಭಾರತ: ಜಿಲ್ಲಾ ಆಸ್ಫತ್ರೆ ಪತ್ರದ್ದೇ ರಗಳೆ
ಸರ್ಕಾರದ ಉಚಿತ ವೈದ್ಯಕೀಯ ಸೇವೆಯ ಆಯುಷ್‍ಮಾನ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಗಳ ಅನುಕೂಲಕ್ಕೆ ಜಿಲ್ಲಾ ಆಸ್ಫತ್ರೆಯ ಪತ್ರ ಕಡ್ಡಾಯ ಮಾಡಿರುವ ನಿಯಮಕ್ಕೆ ತೀವೃ ವಿರೋಧ ವ್ಯಕ್ತವಾಗಿದೆ.



