

ಸರ್ಕಾರದ ಉಚಿತ ವೈದ್ಯಕೀಯ ಸೇವೆಯ ಆಯುಷ್‍ಮಾನ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಗಳ ಅನುಕೂಲಕ್ಕೆ ಜಿಲ್ಲಾ ಆಸ್ಫತ್ರೆಯ ಪತ್ರ ಕಡ್ಡಾಯ ಮಾಡಿರುವ ನಿಯಮಕ್ಕೆ ತೀವೃ ವಿರೋಧ ವ್ಯಕ್ತವಾಗಿದೆ.
ಆಯುಷ್‍ಮಾನ ಭಾರತ ಅಥವಾ ಆರೋಗ್ಯ ಕಾರ್ಡ್ ಪಡೆದವರು ಮತ್ತೆ ಜಿಲ್ಲಾ ಆಸ್ಫತ್ರೆ ಅನುಮತಿ ಪತ್ರ ಪಡೆಯುವುದು ಅಪ್ರಾಯೋಗಿಕ ಮತ್ತು ಅವೈಜ್ಞಾನಿಕ ಎನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಗ್ರಾಮೀಣ ಜನತೆ ಗಂಭೀರ ಕಾಯಿಲೆಗಳಾದಾಗ ಮುತುವರ್ಜಿಯಿಂದ ಚಿಕಿತ್ಸೆ ಪಡೆಯಬೇಕೋ ಅಥವಾ ಜಿಲ್ಲಾಸ್ಫತ್ರೆಯ ಅನುಪತಿ ಪತ್ರ ಪಡೆಯಬೇಕೋ ಎನ್ನುವ ರಗಳೆ,ಸಂದಿಗ್ಧತೆಯನ್ನುಂಟುಮಾಡಿದೆ.
ಈ ಬಗ್ಗೆ ಮುಖ್ಯಮಂತ್ರಿಗಳೂ ಮತ್ತು ರಾಜ್ಯ ವಿಧಾನಸಭೆಯ ಅಧ್ಯಕ್ಷರಿಗೆ ಮನವಿ ಮಾಡಿರುವ ಜಿಲ್ಲಾ (ಉ.ಕ.) ಜೆ.ಡಿ.ಎಸ್. ಅಲ್ಫಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ್ ಇಬ್ರಾಹಿಂ ಸಾಬ್ ಈ ಗೊಂದಲ ರಗಳೆ ಬಗೆಹರಿಸಲು ಮನವಿ ಮಾಡಿದ್ದಾರೆ.
ಗಂಭೀರ ಸ್ವರೂಪದ ಕಾಯಿಲೆಗಳ ಚಿಕಿತ್ಸೆಗಾಗಿ ಪರ ಊರುಗಳಿಗೆ ತೆರಳುವ ಜನಸಾಮಾನ್ಯರಿಗೆ ಜಿಲ್ಲಾಸ್ಫತ್ರೆಗೆ ಹೋಗುವುದು ಅಲ್ಲಿಂದ ಅನುಮತಿ ಪತ್ರ ಪಡೆದು ಚಿಕಿತ್ಸೆ ಕೊಡಿಸುವುದು ಕಷ್ಟ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಅನುಮತಿ ಪತ್ರಕ್ಕಾಗಿ ಕಾರವಾರಕ್ಕೆ ತೆರಳುವುದು ಕಷ್ಟ, ಅಲ್ಲಿ ರೋಗಿ ಅಥವಾ ಬಾಧಿತರನ್ನೇ ಕರೆತನ್ನಿ ಎನ್ನುತ್ತಾರೆ ಇಂಥ ತಲೆಹರಟೆ ಕೆಲಸ ರೋಗಿಗಳು ಮತ್ತು ಅವರ ಕುಟುಂಬದವರಿಗೆ ಹಿಂಸೆಯ ಕೂಪ ಈ ತೊಂದರೆ ಗಮನಿಸಿ ತಾಲೂಕಾ ಆಸ್ಫತ್ರೆಯ ಕಾರ್ಡ್‍ಅಥವಾ ದಾಖಲೆಗಳನ್ನೇ ಎಲ್ಲಾ ಖಾಸಗಿ ಆಸ್ಫತ್ರೆಗಳು ಪರಿಗಣಿಸುವಂತಾದರೆ ಜನಸಾಮಾನ್ಯರಿಗೆ ಅನುಕೂಲ ಎಂದಿದ್ದಾರೆ.


