ಉತ್ತರ ಕನ್ನಡವನ್ನು ರಾಜ್ಯದ ಮೊದಲ ಸ್ಥಾನಕ್ಕೆ ತರಲಿದ್ದಾರಾ ಅಧಿಕಾರಿಗಳು?
ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ.ಮುಖ್ಯ ಕಾ.ಬಗ್ಗೆ ಪ್ರಶಂಸೆ
ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಪ್ರಮುಖ ಜನಪ್ರತಿನಿಧಿಗಳು ಜಾಣ, ಕಿವುಡು, ದಿವ್ಯ ಕುರುಡು ಪ್ರದರ್ಶಿಸುತ್ತಿರುವುದರಿಂದ ಅಧಿಕಾರಿಗಳು ಜನಸಹಭಾಗಿತ್ವದಲ್ಲಿ ಸಾಧನೆ ಮಾಡಲು ಹೊರಟಿದ್ದಾರಾ ಎನ್ನುವ ಅನುಮಾನ ಬರುವಂತೆ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ, ಪ್ರಗತಿ ನಡೆಯುತ್ತಿದೆ.
ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ ವಿಶೇಶ ಮುತುವರ್ಜಿಯಿಂದ ಜಿಲ್ಲೆಯ ಕೆಲಸ ಮಾಡುತಿದ್ದಾರೆ. ಜಿಲ್ಲೆಯ ಪ್ರವಾಹದ ಕೆಲಸ, ಬೆಳೆಹಾನಿ, ಪುನರ್ವಸತಿ ಕೆಲಸಗಳಲ್ಲಿ ಅಭದ್ರ ಸರ್ಕಾರದ ತೊಂದರೆಗಳ ನಡುವೆಯೂ ಉತ್ತಮ ಕೆಲಸ ಮಾಡಿ ಹೆಸರು ಮಾಡಿದ್ದರು. ಜಿಲ್ಲೆಯ ಜನಪ್ರತಿನಿಧಿಗಳ ನೇತೃತ್ವ, ಸಹಭಾಗಿತ್ವದ ಕೆಲಸಗಳು ಕುಂಟುತ್ತಿದ್ದರೂ ಅಧಿಕಾರಿಗಳು ತಮ್ಮ ಕೆಲಸಗಳಲ್ಲಿ ಜಿಲ್ಲೆಯನ್ನು ನಂ.1 ಮಾಡುತಿದ್ದಾರೆ.
ಜನರ ಸಮಸ್ಯೆ,ಜನರ ಅನಿವಾರ್ಯಕೆಲಸ- ಕಾರ್ಯಗಳನ್ನು ಕಿರಿಯಅಧಿಕಾರಿಗಳಿಂದ ಮಾಡಿಸುತ್ತಿರುವ ಅಧಿಕಾರಿಗಳು ಉತ್ತರಕನ್ನಡ ಜಿಲ್ಲೆಯನ್ನು ಸರ್ಕಾರಿ ಕಾರ್ಯಕ್ರಮಗಳು, ಜನಸ್ಫಂದನಗಳ ವಿಷಯದಲ್ಲಿ ಮೊದಲ ಸ್ಥಾನಕ್ಕೆ ಏರಿಸುತಿದ್ದಾರೆ.
ಜಿಲ್ಲಾಧಿಕಾರಿಗಳ ಕಾರ್ಯವೈಖರಿ, ಕಂದಾಯ ಇಲಾಖೆಯ ಕೆಲಸಗಳು 2018-19 ರಲ್ಲಿ ಉತ್ತಮ ಪ್ರಗತಿಯಾಗಿರುವುದಕ್ಕೆ ಹಿರಿಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲೆಯ ಅಧಿಕಾರಿಗಳನ್ನು ಪ್ರಶಂಸಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಸಾಥ್ ನೀಡುತ್ತಿರುವ ಜಿ.ಪಂ. ಮುಖ್ಯ ಕಾರ್ಯದರ್ಶಿ ಮಹಮದ್ ರೋಷನ್ ತಮ್ಮ ವಿಭಾಗದ ಕೆಲಸಗಳಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಹಿಂದಿನ ಅಧಿಕಾರಿಗಳ ದಾಖಲೆ ಮುರಿಯುತಿದ್ದಾರೆ.
ಗ್ರಾ.ಪಂ.ಗಳ ತೆರಿಗೆ ವಸೂಲಾತಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವ ಜಿಲ್ಲೆ ಅಭಿವೃದ್ಧಿಕೆಲಸಗಳು, ಟಾರ್ಗೆಟ್ ವಿಷಯದಲ್ಲಿ ಮೊದಲಸ್ಥಾನದಲ್ಲಿದೆ. ಸ್ವಚ್ಛತೆ, ಅಧಿಕಾರಿಗಳ ಸ್ಫಂದನ, ಮಂಗನಕಾಯಿಲೆ ಸೇರಿದಂತೆ ಸಾಂಕ್ರಾಮಿಕ ರೋಗಗಳ ತಡೆ ಹೀಗೆ ಜಿಲ್ಲೆಯಲ್ಲಿ ಜಿ.ಪಂ. ಅಧೀನದ ತಾ.ಪಂ., ಗ್ರಾ.ಪಂ. ಸೇರಿದಂತೆ ಆರೋಗ್ಯ, ನೈರ್ಮಲ್ಯ,ಶಿಕ್ಷಣ ಸೇರಿದ ಬಹುತೇಕ ಇಲಾಖೆಗಳ ಪ್ರಗತಿ, ಸಾಧನೆ ಹಿಂದೆ ಚುರುಕಿನ, ಎಳೆ ಹುಡುಗ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮದ್ ರೋಷನ್ ರ ಛಾಪಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಮತೀಯವಾದಿ ರಾಜಕಾರಣ,ಸಾಂಪ್ರದಾಯಿಕ ಧಾರ್ಮಿಕ ಮೌಢ್ಯದ ವ್ಯವಸ್ಥೆಯನ್ನು ಪೋಶಿಸಿರುವ ಇಲ್ಲಿಯ ಪ್ರಮುಖ ಜನಪ್ರತಿನಿಧಿಗಳು ಸಚಿವರು, ಸಂಸದರು, ಶಾಸಕರು ವ್ಯವಸ್ಥೆಯನ್ನು ಜಡ್ಡುಹಿಡಿಸಿದ್ದರು. ಜನಸಾಮಾನ್ಯರು, ಸಾರ್ವಜನಿಕರು ಸೋಗಲಾಡಿ ರಾಜಕಾರಣಿಗಳ ಸ್ವಾರ್ಥದ ರಾಜಕೀಯದಿಂದ ಕಂಗೆಟ್ಟಿರುವ ಸ್ಥಿತಿಯನ್ನು ಅರಿತ ಅಧಿಕಾರಿಗಳು ಸರ್ಕಾರಿ ವ್ಯವಸ್ಥೆಯನ್ನು ಜನಸ್ನೇಹಿ, ಜನಪರವಾಗಿರುವಂತೆ ಮಾರ್ಪಾಡು ಮಾಡುವ ಪ್ರಯತ್ನದಲ್ಲಿರುವ ಅಧಿಕಾರಿಗಳು ಸರ್ಕಾರದ ಕೆಲಸಗಳ ವಿಚಾರದಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳೊಂದಿಗೆ ಸಂಘರ್ಷಕ್ಕಿಳಿಯದೆ ತಮ್ಮ ಕರ್ತವ್ಯ, ಅವಿರತ ಶ್ರಮಗಳಿಂದ ಉತ್ತರ ಕನ್ನಡ ಜಿಲ್ಲೆ ರಾಜ್ಯಮಟ್ಟದಲ್ಲಿ ಮೊದಲ ಸ್ಥಾನದ ಶಿಖರವೇರುವಂತಾಗಲು ಇಲ್ಲಿಯ ಜಿಲ್ಲಾಧಿಕಾರಿಗಳು,ಜಿ.ಪಂ.ಮುಖ್ಯ ಕಾರ್ಯದರ್ಶಿಗಳ ಶ್ರಮವಿರುವುದನ್ನು ಎಂಥವರೂ ಗುರುತಿಸಬಹುದಾಗಿದೆ.
ಈ ಜಿಲ್ಲೆಯವರು,ರಾಜ್ಯದವರಲ್ಲದ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯಕಾರ್ಯದರ್ಶಿಗಳು ಮಾಡುತ್ತಿರುವ ಶ್ರಮ,ಕೆಲಸಕ್ಕೆ ಇದೇ ವರ್ಷ ಅಥವಾ ಮುಂದಿನ ವರ್ಷಗಳಲ್ಲಿ ಅವರಿಗೆ ಅಭಿನಂದನೆ, ಪ್ರಶಸ್ತಿಗಳು ಅರಸಿ ಬರಬಹುದು.
ಈ ಅಧಿಕಾರಿಗಳ ಪ್ರಯತ್ನಕ್ಕೆ ರಾಜಕಾರಣಿಗಳ ಬೆಂಬಲವಿಲ್ಲದಿದ್ದರೂ,ತೊಂದರೆ ಕೊಡದಿದ್ದರೆ ಇವರ ಸಾಧನೆಗೆ ಆರು ತಿಂಗಳಿಂದ ಒಂದು ವರ್ಷದ ಅವಧಿ ಸಾಕು ಎನ್ನುತ್ತಿರುವ ಕೆಲವರು ಉತ್ತರಕನ್ನಡ ಜಿಲ್ಲೆಯ ಅಂತ:ಸತ್ವವನ್ನು ಅರಿತು ಕೆಲಸಮಾಡುತ್ತಿರುವ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಕಾರ್ಯದರ್ಶಿಗಳ ಬಗ್ಗೆ ಅಭಿಮಾನದಿಂದ ಮಾತನಾಡುತ್ತಿರುವುದು ಸಾಮಾನ್ಯವಾಗಿದೆ.
ಕಲೋತ್ಸವ ಕಡಕೇರಿ ಪ್ರಥಮ
ಸಿದ್ದಾಪುರ ಪಟ್ಟಣದ ರಾಘವೇಂದ್ರ ಮಠದಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಕಡಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಾನಪದ ನೃತ್ಯ ಸ್ಪರ್ಧೆಯ ಹಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ,
ಕಿರಿಯರ ವಿಭಾಗದಲ್ಲಿಯೂ ಸಹ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಪಾಲಕರು. ಶಿಕ್ಷಕರು, ಹರ್ಷ ವ್ಯಕ್ತಪಡಿಸಿದ್ದಾರೆ.
ಉತ್ತರಕನ್ನಡ, ಉತ್ತರಕರ್ನಾಟಕದ ಯುವಕರು ನಾಗರಿಕ ಸೇವೆಗಳ ಪರೀಕ್ಷೆ ಎದುರಿಸುತ್ತಿಲ್ಲ ,
ಬೇರೆ ಪ್ರದೇಶದ, ವಿಭಿನ್ನ ಅಧ್ಯಯನ ಕ್ಷೇತ್ರಗಳ ಯುವಕರು ನಾಗರಿಕ ಸೇವೆಗೆ ಬಂದರೆ ಅದರಿಂದ ಜನರಿಗೆ,ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ.-ಈಶ್ವರ ಉಳ್ಳಾಗಡ್ಡಿ
ವೈದ್ಯರು ಮಾನವೀಯ,ಸಾಮಾಜಿಕ ಕಾಳಜಿಯ ವ್ಯಕ್ತಿಗಳಾಗುವ ಅನಿವಾರ್ಯತೆ ಪ್ರತಿಪಾದಿಸಿದ ಉಳ್ಳಾಗಡ್ಡಿ
ಅಲೋಪತಿ ಔಷಧಿಗಳು ಮತ್ತು ಪ್ರತಿಜೀವಕಗಳಿಂದ ಮನುಷ್ಯನ ಅಂಗಾಂಗಳ ವೈಫಲ್ಯ ಹೆಚ್ಚುತ್ತಿದ್ದು ಈ ಅಪಾಯ ತಡೆಯುವ ಅಗತ್ಯವಿದೆ ಎಂದು ಸಲಹೆ ನೀಡಿರುವ ಶಿರಸಿ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ವೈದ್ಯಕೀಯ ಸೇವೆ ಇಂದು ವ್ಯವಹಾರವಾಗುತ್ತಿದೆ.ವೈದ್ಯರು ಮಾನವೀಯವೂ,ಸಾಮಾಜಿಕ ಕಾಳಜಿಯವರೂ ಆಗಬೇಕಾದ ಅನಿವಾರ್ಯತೆ ಈಗಿದೆ ಎಂದಿದ್ದಾರೆ.
ಇಲ್ಲಿಯ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವ ಆಯುರ್ವೇದ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅಲೋಪತಿ ದುಷ್ಫರಿಣಾಮಗಳ ಅರಿವು, ಆಯುರ್ವೇದದ ಅನುಕೂಲತೆ, ಉಪಯುಕ್ತತೆ ಬಗ್ಗೆ ಅರಿವು ಮೂಡಿಸುವ ಕೆಲಸ ಅಗತ್ಯವಾಗಿ ಆಗಬೇಕಾಗಿದೆ ಈ ಕೆಲಸಕ್ಕೆ ಶಿರಸಿ ವಿಭಾಗದಲ್ಲಿ ತಾವು ಸಹಕರಿಸುವ ಭರವಸೆ ನೀಡಿದರು.
ಪ್ರಾಚಾರ್ಯೆ ಡಾ.ರೂಪಾ ಭಟ್ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಡಾ.ರಾಘವೇಂದ್ರ ಸರ್ವರನ್ನೂ ಸ್ವಾಗತಿಸಿದರು.
ಕಾಲೇಜಿನ ನಾನಾ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.