

ಹೃದಯ ಬಡಿತ
ಹರವಿಕೊಂಡಿದೆ ನನ್ನೊಳಗೆ
ನಿನ್ನ ಪದಗಳಾಗಿಯೇ|
ಕಾದಿದೆ ದಿಕ್ಕಿಲ್ಲದೆ
ನೀನಂದು ತುಂಬಿದ
ಹುಚ್ಚು ಭಾವುಕತೆಯೇ||
ಬೇಕೆಂದೇ ಕಾಡುವ
ಲೋಪ ಸಂಧಿ
ಆ ಮುಗ್ಧ ಮೌನ|
ದಾರಿ ತಪ್ಪಿಸಿತು
ಕಾಗುಣಿತ ತೊದಲಾಡಿ
ಸಾವಿರ ಮಾತುಗಳನ್ನ||
ಮುಂಗಾರಿನ ಮೊದಲ ಹನಿಯು
ಸಾರುವುದು ಕೂಗಿ
ಎಂದಿಗೂ ನಿನ್ನ ಒಲವು|
ಶ್ರಾವಣದ ಜಡಿ ಮಳೆಯು
ಬಿಟ್ಟು ಬಿಡದಂತೆ ಸತಾಯಿಸುವುದು
ನೆನೆದು ನಿನ್ನ ಮರೆವು||
ಏನು ಮಾಡದಿದ್ದರೂ
ನಿನಗಾಗಿ ಬಿಟ್ಟೆ
ನಾನು ಏನೆಲ್ಲಾ|
ಏನು ಮಾಡಿದರೂ
ನನಗಾಗಿಯು ಬಿಡಲಾಗುತ್ತಿಲ್ಲ
ನಿನ್ನ ನೆನಪೊಂದು ಸಲ||
*ಬಸವರಾಜ ಕಾಸೆ*
ಮು| ಪೋ| ದೇವಾಪೂರ
ತಾ| ಜಿ| ವಿಜಯಪುರ
ಪಿನ್ ಕೋಡ್ 586125
pradeepbasu40@gmail.com
7829141150

