
ನಿನ್ನೆಯಷ್ಟೇ ರಾಜ್ಯದ ನೂತನ ಜೀವವೈವಿಧ್ಯತಾ ಮಂಡಳಿ ಅಧ್ಯಕ್ಷರಾಗಿ ರಾಜ್ಯಸರ್ಕಾರದಿಂದ ನೇಮಕವಾಗಿದ್ದ ಅನಂತ ಹೆಗಡೆ ಆಶೀಸರರ ನೇಮಕಾತಿ ಆದೇಶ ರದ್ದುಪಡಿಸಲು ರಾಜ್ಯ ಬಿ.ಜೆ.ಪಿ. ಸಮ್ಮತಿಸಿದೆ ಎಂದು ಗೊತ್ತಾಗಿದೆ.
ಇಂದು ತಮ್ಮನ್ನು ಭೇಟಿ ಮಾಡಿ ಈ ನೇಮಕ ರದ್ಧುಮಾಡಬೇಕು ಎಂದು ಕೋರಿದ ಉತ್ತರಕನ್ನಡ ಜಿಲ್ಲಾ ಬಿ.ಜೆ.ಪಿ. ಘಟಕಕ್ಕೆ ಬಿ.ಜೆ.ಪಿ.ರಾಜ್ಯ ಅಧ್ಯಕ್ಷ ವಿನಯ್ ಕುಮಾರ ಕಟೀಲು ಭರವಸೆ ನೀಡಿದ್ದು ಮತದಾರರು,ಜನಸಂಖ್ಯೆ, ಸರ್ಕಾರ ಅಧಿಕಾರದಲ್ಲಿ ಹವ್ಯಕರು ಸೇರಿದಂತೆ ಬ್ರಾಹ್ಮಣರ ಪ್ರಾತಿನಿಧ್ಯ ಉಳಿದವರ ಸಂಖ್ಯೆ,ಅಧಿಕಾರ, ಪ್ರಾತಿನಿಧ್ಯಗಳ ಅನುಪಾತದ ಮಾಹಿತಿ ನೀಡಿದ್ದು ಜಿಲ್ಲೆಯ ನಾಲ್ಕನೇ ಬಹುಸಂಖ್ಯಾತ ಸಮೂದಾಯಕ್ಕೆ ಎಲ್ಲರಿಗಿಂತ ಹೆಚ್ಚು ಪ್ರಾತಿನಿಧ್ಯ ನೀಡಿರುವ ವಿದ್ಯಮಾನಗಳ ಬಗ್ಗೆ ಬಿ.ಜೆ.ಪಿ.ರಾಜ್ಯಾಧ್ಯಕ್ಷರು ಚರ್ಚಿಸಿದ್ದಾರೆ. ಜಿಲ್ಲೆಯ ಬಹುಸಂಖ್ಯಾತರ ಪ್ರತಿನಿಧಿಗಳು, ಮತದಾರರು ಏಕಜಾತಿ ನಾಯಕತ್ವ, ಏಕಸ್ವಾಮ್ಯದ ಬಗ್ಗೆ ಜಿಲ್ಲೆಯಲ್ಲಿರುವ ವಿರೋಧವನ್ನು ಗಮನಿಸಿ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿ ಅನಂತ ಹೆಗಡೆ ಆಶೀಸರರ ಆಯ್ಕೆ ರದ್ದುಮಾಡಲು ವಿನಂತಿಸುವುದಾಗಿ ನಿಯೋಗಕ್ಕೆ ಅಧ್ಯಕ್ಷರು ಭರವಸೆ ನೀಡಿರುವುದನ್ನು ಖಚಿತಮೂಲಗಳು ಸಮಾಜಮುಖಿ ಗೆ ತಿಳಿಸಿವೆ.
ಸಮರ್ಥ ಲೋಕಾಯುಕ್ತರ ನಿರ್ಗಮನ,ವಿಷಾದ
ನಿವೃತ್ತ ಲೋಕಾಯುಕ್ತರಾಗಿದ್ದ ವೆಂಕಟಾಚಲ ತಮ್ಮ 90ನೇ ವಯಸ್ಸಿನಲ್ಲಿ ಬುಧವಾರ ಬೆಂಗಳೂರಿನಲ್ಲಿ ನಿಧನರಾದರು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಾಗಿದ್ದ ಎನ್. ವೆಂಕಟಾಚಲರನ್ನು 2000ದ ದಶಕದಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣರ ಸರ್ಕಾರ ನೇಮಕ ಮಾಡಿತ್ತು.
ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಅಸ್ಥಿತ್ವಕ್ಕೆ ಬಂದು 2ದಶಕಗಳು ಕಳೆದಿದ್ದರೂ ರಾಜ್ಯದಲ್ಲಿ ಲೋಕಾಯುಕ್ತ ಎನ್ನುವ ಸಂಸ್ಥೆಯೊಂದಿದೆ,ಅದಕ್ಕೆ ನಿವೃತ್ತ ನ್ಯಾಯಮೂರ್ತಿಗಳು ಮುಖ್ಯಸ್ಥರಾಗಿರುತ್ತಾರೆ ಎಂದು ಪ್ರಚಾರಕ್ಕೆ ಬಂದಿದ್ದೇ 2000ನೇ ಇಸ್ವಿಯ ನಂತರ. ಈ ಅವಧಿಯಲ್ಲಿ ಲೋಕಾಯುಕ್ತರಾಗಿ ಚುರುಕಿನಿಂದ ಕೆಲಸಮಾಡುತ್ತಾ ಬೃಷ್ಟರನ್ನು ಶಿಕ್ಷಿಸಿದ ಎನ್ ವೆಂಕಟಾಚಲರ ಅವಧಿಯಲ್ಲಿ ರಾಜ್ಯದ ಲೋಕಾಯುಕ್ತದ ಒಂದು ದಿವಸದ ಪ್ರಕರಣಗಳ ಸಂಖ್ಯೆ 25-30 ರಿಂದ 300 ಕ್ಕೇರಿತು. ಯಾವ ಹಂತದ ಅಧಿಕಾರಿಗಳನ್ನೂ ಏಕವಚನದಲ್ಲೇ ಏನಯ್ಯಾ ಎಂದು ಸಂಭೋದಿಸುತಿದ್ದ ವೆಂಕಟಾಚಲ ಜಿಲ್ಲೆಗಳಿಗೆ ಬರುತ್ತಾರೆಂದರೆ ಅಧಿಕಾರಿಗಳ ತೊಳ್ಳೆ ನಡುಗುತಿತ್ತು………..
