

ಯಕ್ಷಗಾನ ತಜ್ಞೆ ಡಾ. ವಿಜಯನಳಿನಿರಮೇಶ್‍ರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಗುರುಗಣೇಶ್‍ಭಟ್, ರೇಷ್ಮಾ ಉಮೇಶ್, ಮೋಹನ ಗೌಡ, ಗಣಪತಿ ನಾಯ್ಕರಿಗೆ ಯುವ ಪುರಸ್ಕಾರ
ಹಿರಿಯ ಸಾಹಿತಿ, ಯಕ್ಷಗಾನ ತಜ್ಞೆ ಡಾ. ವಿಜಯನಳಿನಿ ರಮೇಶ್ 2019ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಸಮಿತಿ ಗುರುತಿಸಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ರೂ. 15,000, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ಸನ್ಮಾನವನ್ನೊಳ ಗೊಂಡಿರುತ್ತದೆ.
ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಮಾಡು ವುದರೊಟ್ಟಿಗೆ ನಾಲ್ವರು ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರ ನೀಡುತ್ತಿದೆ. ಈ ಪುರಸ್ಕಾರಕ್ಕೆ ಯಲ್ಲಾಪುರದ ಗುರುಗಣೇಶ ಭಟ್ಟ ಗುಡ್ಬಳ್ಳಿ, ಭಟ್ಕಳದ ರೇಷ್ಮಾ ಉಮೇಶ್, ಕುಮಟಾದ ಮೋಹನ ಗೌಡ ಹೆಗ್ರೆ, ಹಳಿಯಾಳದ ಗಣಪತಿ ಜಿ. ನಾಯ್ಕ ಆಯ್ಕೆ ಆಗಿದ್ದಾರೆ.
ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರವು ಫಲಕ, ಪುಸ್ತಕವನ್ನೊಳಗೊಂಡಿರುತ್ತದೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ.10 ರಂದು ರವಿವಾರ ಕುಮಟಾದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾಹಿತಿ ನೀಡಿದ್ದಾರೆ.
2016 ರಿಂದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿ ವರ್ಷ ಹಿರಿಯ ಸಾಹಿತಿಯೊಬ್ಬರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು ನಾಲ್ವರು ಉದಯೋನ್ಮುಖ ಬರಹಗಾರರಿಗೆ ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರ ನೀಡುತ್ತ ಬಂದಿದೆ. ಇಲ್ಲಿಯವರೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಿರಿಯ ಸಾಹಿತಿಗಳಾದ ಸುಮುಖಾನಂದ ಜಲವಳ್ಳಿ, ಆರ್.ಪಿ.ಹೆಗಡೆ ಸೂಳಗಾರ, ಶಾಂತಾರಾಮ ನಾಯಕ ಹಿಚಕಡ ಅವರಿಗೆ ಸಂದಿದೆ ಎಂದು ಕರ್ಕಿಕೋಡಿ ಹೇಳಿದ್ದಾರೆ.
ಡಾ. ವಿಜಯನಳಿನಿ ರಮೇಶ್‍ರ ಸಂಕ್ಷಿಪ್ತ ಪರಿಚಯ :
2019ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆದ ವಿಜಯನಳಿನಿ ರಮೇಶ್ ಅವರು ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರು ತಾಳಮದ್ದಳೆ’, ‘ಯುಗಧರ್ಮ’, ‘ಹೊಸ್ತೋಟಾ ಮಂಜುನಾಥ ಭಾಗವತರು’, ‘ಮೌಖಿಕ ಕಲೆಯಲ್ಲಿ ಸಾಹಿತ್ಯ ಸೌಂದರ್ಯ’, ‘ಪಶ್ಚಿಮ ಕರ್ನಾಟಕದ ದೇಸೀ ಸಾಂಸ್ಕøತಿಕ ಪರಂಪರೆ ಹಾಗೂ ಪ್ರವಾಸೋದ್ಯಮ’, ‘ಶಿರಸಿ ತಾಲೂಕಿನ ಲಲಿತ ಕಲೆಗಳು’ ಮುಂತಾದ ಕೃತಿಗಳನ್ನು ನೀಡಿದ್ದಾರೆ. ‘ಅಷ್ಟಬಂಧ’, ‘ಸಾಂತ್ವನ’, ‘ಯಕ್ಷಗಾನ ಪ್ರಸಂಗಗಳು’, ‘ಮಾವಿನಗುಂಡಿ ಮಹಿಳಾ ಸತ್ಯಾಗ್ರಹ’ ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ.
ಡಾ. ವಿಜಯನಳಿನಿ ರಮೇಶ್‍ರ ‘ತಾಳಮದ್ದಳೆಯಲ್ಲಿ ಸೃಜನಶೀಲತೆ’ ಎಂಬ ಸಂಪ್ರಬಂಧಕ್ಕೆ ಕರ್ನಾಟಕ ವಿಶ್ವಾವಿದ್ಯಾಲಯ ಡಾಕ್ಟರೇಟ್ ನೀಡಿದೆ. ಕನ್ನಡ ಸಾಹಿತ್ಯ ಹಾಗೂ ಜಾನಪದ ಎರಡೂ ವಿಭಾಗಗಳಲ್ಲಿ ಕ.ವಿ.ವಿ.ಯಿಂದ ಮಾನ್ಯತೆ ಪಡೆದ ಅವರು ಗಮಕ ಕಾರ್ಯಕ್ರಮಗಳಲ್ಲಿ ವಾಖ್ಯಾನ ಮಾಡುತ್ತಿದ್ದಾರೆ.
ಂiÀiಕ್ಷಗಾನದಲ್ಲೂ ಪಾತ್ರ ನಿರ್ವಹಿಸಿದ ಡಾ.ವಿಜಯನಳಿನಿ ರಮೇಶ್ ಅವರು ಮಧುರೈ ಕಾಮರಾಜ ವಿಶ್ವ ವಿದ್ಯಾಲಯದ ತೆಲಗು ವಿಭಾಗದಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ ಮಾಡಿ ಮನ್ನಣೆ ಪಡೆದಿದ್ದಾರೆ.
‘ಮೌಖಿಕ ಕಲೆಯಲ್ಲಿ ಸಾಹಿತ್ಯ ಸೌಂದರ್ಯ’ ಕೃತಿಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ, ಬನವಾಸಿಯ ಕದಂಬ ಸೈನ್ಯದಿಂದ ಕದಂಬ ಸೇವಾ ರತ್ನ ಪ್ರಶಸ್ತಿ, ಸಾಗರ ಸುತ್ತ ಸಹೃದಯಾ ಪ್ರಶಸ್ತಿ ಮುಂತಾದವುಗಳನ್ನು ಸ್ವೀಕರಿಸಿ ಮನ್ನಣೆ ಪಡೆದಿದ್ದಾರೆ.
ಯಕ್ಷಗಾನ, ಬಯಲಾಟ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ ಡಾ. ವಿಜಯನಳಿನಿ ಅವರು 1982ರಲ್ಲಿ ಶಿರಸಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟನೆಯಲ್ಲಿ ಮಹಿಳಾ ವಿಭಾಗದ ಸಂಚಾಲಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಶಿರಸಿಯ ಸಾಂತ್ವನ ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಮುನ್ನಡೆಸಿಕೊಂಡು ಹೋಗುತ್ತಿರುವುದನ್ನೂ ಕೂಡ ಇಲ್ಲಿ ವಿಶೇಷವಾಗಿ ಗಮನಿಸಬಹುದು ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ತಿಳಿಸಿದ್ದಾರೆ.
ಅನಂತ ಆಶೀಸರ ನೇಮಕ ರದ್ಧು ಮಾಡಲು ಬಿ.ಜೆ.ಪಿ.ಒಪ್ಪಿಗೆ?
ನಿನ್ನೆಯಷ್ಟೇ ರಾಜ್ಯದ ನೂತನ ಜೀವವೈವಿಧ್ಯತಾ ಮಂಡಳಿ ಅಧ್ಯಕ್ಷರಾಗಿ ರಾಜ್ಯಸರ್ಕಾರದಿಂದ ನೇಮಕವಾಗಿದ್ದ ಅನಂತ ಹೆಗಡೆ ಆಶೀಸರರ ನೇಮಕಾತಿ ಆದೇಶ ರದ್ದುಪಡಿಸಲು ರಾಜ್ಯ ಬಿ.ಜೆ.ಪಿ. ಸಮ್ಮತಿಸಿದೆ ಎಂದು ಗೊತ್ತಾಗಿದೆ.




