
ರಾಜ್ಯದ 58ಗ್ರಾಮಗಳನ್ನೊಳಗೊಂಡ ಸಾವಿರಾರು ಕುಟುಂಬಗಳು 1979 ರ ಹಿಂದಿನಿಂದಲೂ ನಿಶ್ಚಿತ ಪ್ರದೇಶದಲ್ಲಿ ವಾಸ್ಯವ್ಯ ಹೊಂದಿವೆ,ಆ ಪ್ರದೇಶದ ಅನುಭೋಗಿದಾರರಾಗಿದ್ದಾರೆ ಎಂದು ದಾಖಲೆ ಒದಿಸಿದರೆ ಅಂಥ ಅಕ್ರಮ ಮನೆಗಳು ಸಕ್ರಮ ಹಾಗೂ ಆ ಪ್ರದೇಶದ ಪಟ್ಟಾ ಸಂಬಂಧಿಸಿದ ವ್ಯಕ್ತಿಗೆ/ಕುಟುಂಬಕ್ಕೆ ದೊರೆಯುವ ಹಿಂದಿನ ಕಾಂಗ್ರೆಸ್ ಸರ್ಕಾರದ ವಾಸಿಸುವವನೇ ಮನೆಯೊಡೆಯ ಎನ್ನುವ ಕ್ರಾಂತಿಕಾರಿ ಕಾನೂನಿಗೆ ರಾಷ್ಟ್ರಪತಿಗಳ ಅಂಕಿತ ದೊರೆತಿದೆ.
ಕಂದಾಯ ಭೂಮಿ,ಗಾಂವ್ ಠಾಣಾ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ವಾಸ್ಯವ್ಯ ಹೊಂದಿ ಗೃಹ ನಿರ್ಮಾಣ ಮಾಡಿ ಬದುಕುತಿದ್ದವರು ಈವರೆಗೆ ಅಕ್ರಮ ವಾಸ್ಯವ್ಯಹೊಂದಿದವರಾಗಿದ್ದರು. ಈಗ ಅವರನ್ನು ರಾಜ್ಯದ ವಾಸಿಸುವವನೇ ಮನೆಯ ಒಡೆಯ ಕಾನೂನು ಸಕ್ರಮ ಮಾಡಲಿದೆ. ಅವರ ಹೆಸರಿಗೆ ಪಟ್ಟಾ ನೀಡಲಿದೆ. ಕಳೆದ ವರ್ಷದ ವರೆಗೆ ಇದ್ದ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅಂದಿನ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಮುತುವರ್ಜಿಯಿಂದ ಈ ಕಾಯಿದೆ ಜಾರಿಗೆ ಯೋಜನೆ ರೂಪಿಸಿದ್ದರು. ನಂತರ ಅದಕ್ಕೆ ಸಂಪುಟದ ಅನುಮೋದನೆ ದೊರೆತು ಅದು ರಾಷ್ಟ್ರಪತಿಗಳ ಅಂಕಿತಕ್ಕಾಗಿ ರಾಷ್ಟ್ರಪತಿ ಭವನಕ್ಕೆ ರವಾನೆಯಾಗಿತ್ತು. ಅಂತೂ ಇಂತೂ ಅಳೆದುತೂಗಿ ಅಂಕಿತಹಾಕಿರುವ ರಾಷ್ಟ್ರಪತಿಗಳು ಹಿಂದಿನ ಕಾಂಗ್ರೆಸ್ ಸರ್ಕಾರದ ಈ ಯೋಜನೆಯನ್ನು ಕ್ರಾಂತಿಕಾರಿ ಯೋಜನೆ ಎಂದು ಬಣ್ಣಿಸಿದ್ದಾರೆ.
ಯಕ್ಷಗಾನ ತಜ್ಞೆ ಡಾ. ವಿಜಯನಳಿನಿರಮೇಶ್‍ರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಗುರುಗಣೇಶ್‍ಭಟ್, ರೇಷ್ಮಾ ಉಮೇಶ್, ಮೋಹನ ಗೌಡ, ಗಣಪತಿ ನಾಯ್ಕರಿಗೆ ಯುವ ಪುರಸ್ಕಾರ
ಹಿರಿಯ ಸಾಹಿತಿ, ಯಕ್ಷಗಾನ ತಜ್ಞೆ ಡಾ. ವಿಜಯನಳಿನಿ ರಮೇಶ್ 2019ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಸಮಿತಿ ಗುರುತಿಸಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
