ಬಿ.ಜೆ.ಪಿ.ಜಿಲ್ಲಾ ಕಾರ್ಯಕಾರಿ ಸಮೀತಿ ಸಭೆ ಮುಂದಕ್ಕೆ, ಹಿಂದುತ್ವದ ಹೆಸರಲ್ಲಿ ಜಾತೀಯತೆ ಪೋಷಣೆ ವಿರೋಧಿಸಿ ನಾಯಕರ ದಂಡು ರಾಜಧಾನಿಗೆ
ಹಿಂದುತ್ವದ ತಂತ್ರ,ವೈದಿಕತೆಯ ಮಂತ್ರ! ಒಂದೇ ಸಮೂದಾಯ ಓಲೈಕೆಯ ವಿರುದ್ಧ ಸಿಡಿದೆದ್ದ ಬಿ.ಜೆ.ಪಿ.ಮುಖಂಡರು
ಉತ್ತರಕನ್ನಡ ಜಿಲ್ಲೆಯ ಬ್ರಾಹ್ಮಣರು ಇತರರನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗುವಂಥ ಬೆಳವಣಿಗೆಯೊಂದು ಬಿ.ಜೆ.ಪಿ.ಯಲ್ಲಿ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಕಾಂಗ್ರೆಸ್, ಬಿ.ಜೆ.ಪಿ. ಜೆ.ಡಿ.ಎಸ್. ಎನ್ನುವ ಪಕ್ಷಬೇಧಗಳಿಲ್ಲದೆ ಬ್ರಾಹ್ಮಣರು, ಅಬ್ರಾಹ್ಮಣರ ನಡುವಿನ ಗಲಾಟೆ ಸಂಘರ್ಷಕ್ಕೆ ಶತಮಾನಗಳ ಇತಿಹಾಸವಿದೆ.
ಆದರೆ ಈಗಿನ ಬೆಳವಣಿಗೆಯಾಗಿರುವುದು ಮಡಿವಂತರು, ಮೇಲ್ಜಾತಿಯ ಪಕ್ಷ ಎನ್ನಲಾಗುವ ಬಿ.ಜೆ.ಪಿ. ಯಲ್ಲಿ ಹಾಗಾಗಿ ಈ ವಿದ್ಯಮಾನ ರಾಜ್ಯಮಟ್ಟದ ಮಹತ್ವಕ್ಕೆ ಕಾರಣವಾಗಿದೆ.
ಉತ್ತರಕನ್ನಡದಲ್ಲಿ ಅಬ್ರಾಹ್ಮಣರುಕಾದಾಡುವುದು, ಪಕ್ಷ ಸಂಘಟಿಸುವುದು,ತ್ಯಾಗಮಾಡುವುದು ಸಿಕ್ಕ ಅವಕಾಶದಲ್ಲಿ ಮೇಲ್ವರ್ಗದವರು ಅವಕಾಶ, ಅನುಕೂಲ ಬಳಸಿಕೊಂಡು ಅಧಿಕಾರ ಅನುಭವಿಸುವುದು ನಡೆದೇ ಇದೆ. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಹೆಗಡೆಯವರ ಕಾಲದಿಂದಲೂ ಉತ್ತರಕನ್ನಡ ಜಿಲ್ಲೆಯಲ್ಲಿ ಬ್ರಾಹ್ಮಣರು,ಅಬ್ರಾಹ್ಮಣರ ಕಲಹ ನಡೆದೇ ಇದೆ.
ಆದರೆ ಈಗ ಬಿ.ಜೆ.ಪಿ.ಯಲ್ಲಿ ಈ ಕಲಹ ಪ್ರಾರಂಭವಾಗಿರುವುದೇ ವಿಶೇಶ.
ಘಟನೆ ಒಂದು-
(ಚರಿತ್ರೆ) ದೇಶದಲ್ಲಿ ಮಂಡಲ್ ಚಳವಳಿಯ ಸಂವಾದಿಯಾಗಿ ಪ್ರಾರಂಭವಾದದ್ದು ಕಮಂಡಲ ಮತ್ತು ರಾಮಮಂದಿರ ನಿರ್ಮಾಣ ರಥಯಾತ್ರೆ. ಈ ಪಾದಯಾತ್ರೆ,ರಥಯಾತ್ರೆಗಳ ಮೂಲಕ ಅಡ್ವಾನಿ,ವಾಜಪೇಯಿ ನೇತೃತ್ವದ ಬಿ.ಜೆ.ಪಿ. ದೇಶದ ಬಹುಸಂಖ್ಯಾತ
ಹಿಂದುಳಿದವರು, ದಲಿತರ ತಲೆಯಲ್ಲಿ ಧರ್ಮಾಂಧತೆಯ ವಿಷತುಂಬಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡ ಪಕ್ಷ ಬಿ.ಜೆ.ಪಿ.
ನಂತರ ಗುಜರಾತ್ ಠಕ್ಕರ ಸೋಗಲಾಡಿರಾಜಕಾರಣಕ್ಕೆ ಬಳಸಿಕೊಂಡದ್ದು ಕಾಂಗ್ರೆಸ್ ಮತ್ತು ಮುಸ್ಲಿಂ ವಿರೋಧ ಎನ್ನುವುದು ಆ ಪಕ್ಷದ ಬಹುಜನವಿರೋಧಿ, ಬೂಟಾಟಿಕೆಯ ಧಾರ್ಮಿಕ ರಾಷ್ಟ್ರೀಯತೆ ಸೋಗಿನ ಹುರುಳು.
ಇಂಥ ಕರಾಳ ಹಿನ್ನೆಲೆಯ ಶ್ರೀಮಂತರು, ಮೇಲ್ವರ್ಗದ ಹಿತಾಸಕ್ತಿಯ ನಯವಂಚಕ ಪರಿವಾರದ ಷಡ್ಯಂತ್ರದಿಂದ ಸುಮಾರು ಸ್ವಾತಂತ್ರ್ಯೋತ್ತರ 60 ವರ್ಷಗಳ ನಂತರ ಕರ್ನಾಟಕದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬಂದಾಗ ಉತ್ತರಕನ್ನಡದಲ್ಲಿ ಹಿರಿಯರು, ಬಿ.ಜೆ.ಪಿ.ಯ ಸಂಘಟಕರೂ ಆಗಿದ್ದ ಕಾರವಾರದ ಮಹಾರುದ್ರ ಬಾನಾವಳಿಕರ,ಶಿವಾನಂದ ನಾಯ್ಕ, ಸಿದ್ಧಾಪುರದ ಮಹಾಬಲ ನಾಯ್ಕ ಬಿಕ್ಕಳಸೆ,ಭಟ್ಕಳದ ಎನ್.ಜಿ.ಕೊಲ್ಲೆ ಸೇರಿದಂತೆ ಅನೇಕ ಪ್ರಮುಖ ಶೂದ್ರ ನಾಯಕರ ಎದುರು ಬಿ.ಜೆ.ಪಿ. ಪಟ್ಟಕಟ್ಟಿದ್ದು ಕಪಟ ಆರೆಸ್ಸೆಸ್ಸಿಗರಾದ ಕೆಲವು ಜಾತ್ಯಾಂಧ ಸೋಗಲಾಡಿ ಮೇಲ್ವರ್ಗದವರಿಗೆ.
ಆಗ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾದವರು ಪತ್ರಕರ್ತ ಶೂದ್ರವಿರೋಧಿ ನೀಚ ಬ್ರಾಹ್ಮಣ ಸಚ್ಚದಾನಂದ ಹೆಗಡೆ,
ಆತನೊಂದಿಗೆ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಪಟ್ಟಕ್ಕೇರಿದವರು ಅನಂತ ಹೆಗಡೆ ಆಶೀಸರ ಇವರಿಬ್ಬರಿಗೂ ಆಗ ಇದ್ದ ಅರ್ಹತೆ ಎಂದರೆ ಯಾವುದೋ ಕಾಲದಲ್ಲಿ ಇವರಿಬ್ಬರೂ ಮತಾಂಧ ದುಷ್ಟ ವಿದ್ಯಾರ್ಥಿಗಳಪರಿಷತ್ ನ ಮುಖಂಡರಾಗಿದ್ದುದು ಹಾಗೂ ಇವರೊಂದಿಗೆ ಆಕಾಲದಲ್ಲಿ ಮತೀಯವಾದಿಗಳ ಸಂಘಟನೆಯಲ್ಲಿದ್ದುದು ದಿ.ಎಚ್.ಎನ್. ಅನಂತಕುಮಾರ ಎಂಬುದು.
ಅದೇ ಅವಧಿಯಲ್ಲಿ ಕುಮಟಾದ ವಿನೋದ ಪ್ರಭು ಕೂಡಾ ರಾಜ್ಯ ಗೇರು ನಿಗಮದ ಅಧ್ಯಕ್ಷರಾಗಿ ಬ್ರಾಹ್ಮಣರ ಕೋಟಾ ಭರ್ತಿ ಮಾಡಿದ್ದು ಕಾಕತಾಳೀಯ. ಆಗ ಕೂಡಾ ಬಿ.ಜೆ.ಪಿ.ಎಂದರೆ ಶ್ರೀಮಂತರು, ಮತಾಂಧರ ಕೂಟ. ಅಲ್ಲಿಯ ದೇಶಪ್ರೇಮ, ರಾಷ್ಟ್ರೀಯತೆ,ಹಿಂದುತ್ವಗಳೆಲ್ಲಾ ಬೂಟಾಟಿಕೆ, ಶೂದ್ರರನ್ನು ವಂಚಿಸುವ ಸಾಧನಗಳು ಎಂದು ಬಿ.ಜೆ.ಪಿಯ ಕೆಲವು ಮುಖಂಡರೆ ಪಿಸುಗುಟ್ಟಿದ್ದರು.
ಆದರೆ ಆಗಿದ್ದ ಶೂದ್ರ ಮುಖಂಡರನ್ನು ಯಾಮಾರಿಸಿ ಬ್ರಾಹ್ಮಣತ್ವ ಪ್ರತಿಪಾದಿಸಿದ ಬಿ.ಜೆ.ಪಿ.ಸಂಘ ಕೊಬ್ಬಿದ್ದು ಈಗ ಚರಿತ್ರೆ. ಇದೇ ಸಮಯದಲ್ಲಿ ಕಳೆದ 25 ವರ್ಷಗಳಿಂದ ಕೆಲವು ಬಹುಸಂಖ್ಯಾತ ಆಸೆಬುರುಕರ ತಲೆಯಲ್ಲಿ ನಕಲಿ ದೇಶಪ್ರೇಮ,ಬೂಟಾಟಿಕೆಯ ರಾಷ್ಟ್ರೀಯತೆ ವಂಚನೆಯ ಶೂದ್ರ ವಿರೋಧಿ ಹಿಂದುತ್ವಗಳೆಂಬ ಬ್ರಾಹ್ಮಣರ ಅಧಿಕಾರದ ದಾಳಗಳನ್ನು ಎಸೆದು ಸಂಸದ, ಶಾಸಕರನ್ನು ಆರಿಸಿಕೊಳ್ಳುತ್ತಾ ಶೂದ್ರರನ್ನು ಮೂರ್ಖರನ್ನಾಗಿಸಿ ಯಶಸ್ವಿಯಾದ ವೈದಿಕರ ಕೂಟ ಬಿ.ಜೆ.ಪಿ. ಈಗ ಕೂಡಾ ಇದೇ ಕೆಲಸ ಮುಂದುವರಿಸಿದೆ.
ರಾಜ್ಯದಲ್ಲಿ ಬಿ.ಜೆ.ಪಿ.ಬಾಲಬಡುಕ ಸಂಘಿಮತಾಂಧ ದುಷ್ಟಶಕ್ತಿಗಳನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡಿದ ಬಿ.ಎಲ್. ಸಂತೋಷ ನೇತೃತ್ವದ ಕುತಂತ್ರಿಗಳ ತಂಡ ಈಗ ಹಿಂದಿನ ಬಿ.ಜೆ.ಪಿ.ಸರ್ಕಾರದ ಪಶ್ಚಿಮಘಟ್ಟ ಕಾರ್ಯಪಡೆಯನ್ನೇ ತುಸುಮಾರ್ಪಾಟು ಮಾಡಿ ಅದಕ್ಕೆ ಜೀವವೈವಿಧ್ಯತಾ ಮಂಡಳಿ ಎಂದು ನಾಮಕರಣ ಮಾಡಿ ಅಂದಿನ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತಹೆಗಡೆ ಆಶೀಸರರನ್ನು ಅಧ್ಯಕ್ಷರನ್ನಾಗಿಸಿ ಆದೇಶ ಮಾಡಿಸಿದೆ.
ಬೆಂಕಿ ಬಿದ್ದಿದ್ದೇ ಅಲ್ಲಿ-
ಇತ್ತೀಚಿನ ವಿದ್ಯಮಾನಗಳಲ್ಲಿ ಬಿ.ಜೆ.ಪಿ.ಹೈಕಮಾಂಡ್ ತೀರ್ಮಾನ ವಿರೋಧಿಸಿ ಬಳ್ಳಾರಿಯಲ್ಲಿ ಜಿಲ್ಲಾ ಬಿ.ಜೆ.ಪಿ. ಪದಾಧಿಕಾರಿಗಳು ರಾಜೀನಾಮೆಗೆ ಮುಂದಾಗಿದ್ದ ವಿದ್ಯಮಾನ ಮರೆಮಾಚುವ ಮುನ್ನ ಉತ್ತರಕನ್ನಡ ಬಿ.ಜೆ.ಪಿ. ತಿರುಗಿ ಬೀಳಲು ಈ ಜೀವವೈವಿಧ್ಯತಾ ಮಂಡಳಿ ಅಧ್ಯಕ್ಷರ ನೇಮಕ ಕಾರಣವಾಗಿ ಬಿಟ್ಟಿತು.
ಅಸಲಿಯತ್ತೇನೆಂದರೆ, ಕಾಂಗ್ರೆಸ್ ಬಿಟ್ಟು ಬಿ.ಜೆ.ಪಿ. ಸೇರಲಿರುವ ಅನರ್ಹ ಶಾಸಕ ಶಿವರಾಮಹೆಬ್ಬಾರ್ ರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲು ಶಾಸಕ ಕಾಗೇರಿಯ ವಿಶ್ವೇಶ್ವರ ಹೆಗಡೆಯವರನ್ನು ವಿಧಾನಸಭಾಧ್ಯಕ್ಷರನ್ನಾಗಿ ಮಾಡಿ ಬೆಂಗಳೂರಿಗೆ ಸಾಗಹಾಕಿದ್ದ ಬಿ.ಜೆ.ಪಿ. ಎಂ.ಎ.ಹೆಗಡೆಯವರನ್ನು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರನ್ನಾಗಿ ಮುಂದುವರಿಸಿ ತನ್ನ ಹವ್ಯಕ ಪಕ್ಷಪಾತ ಬಹಿರಂಗಪಡಿಸಿತ್ತು.
ಇದೇ ಅವಧಿಯಲ್ಲಿ ರಾಜ್ಯದ ನಿಗಮ ಮಂಡಳಿಗಳ ಸ್ಥಾನ ಪಡೆಯಲು ಬಿ.ಜೆ.ಪಿ. ಜಿಲ್ಲಾಧ್ಯಕ್ಷರೊಂದಿಗೆ ಕನಿಷ್ಟ ಅರ್ಧ ಡಜನ್ ಶೂದ್ರರು ಹೊಸ ಬಟ್ಟೆ ಹೊಲಿಸಿದ್ದರು! ಹೀಗೆ ತಯಾರಾಗುವಂತೆ ವಾತಾವರಣ ಸಿದ್ಧಪಡಿಸಿ ಬೆಂಗಳೂರಿಗೆ ತೆರಳಿದವರೇ ಕಪಟನಾಟಕದ ಸೂತ್ರಧಾರಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,
ಈ ವಿದ್ಯಮಾನಗಳನ್ನು ನೋಡುತ್ತಾ ತನ್ನ ಲಾಗಾಯ್ತಿನ ನಾಟಕೀಯತೆ ಮುಂದುವರಿಸಿದ್ದ ಸಂಸದ ಅನಂತ ಹೆಗಡೆ ಯಾರಾದರಾಗಲಿ ತನ್ನ ಜಾತಿಯಾವರಾದರೆ ಸಾಕು ಎಂದು ಸುಮ್ಮನಿದ್ದರಂತೆ!
(ಹೀಗೆ ಸುಮ್ಮನಿರುವ ನಾಟಕ ಆಡಿ ಮೂರ್ಖರನ್ನು ಶತಮೂರ್ಖರನ್ನಾಗಿಸುವುದರಲ್ಲಿ ಕೇಂದ್ರದ ಮಾಜಿ ಸಚಿವ,ಮತಾಂಧ ಅನಂತಕುಮಾರ ಹೆಗಡೆ ಪ್ರಚಂಡ) ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ ಎನ್ನುವಂತೆ ಬಿ.ಜೆ.ಪಿ. ಶೂದ್ರ ಸಂಘಟಕರನ್ನು ತೆರೆಮರೆಗೆ ಸರಿಸಿ ವೈದಿಕತೆ ಬೆಳೆಸುವ ಕುತಂತ್ರದ ಅಂಗವಾಗಿ ಸ್ವಾಮಿಗಳ ನೆರವಿನೊಂದಿಗೆ ಅನಂತಹೆಗಡೆ ಆಶೀಸರ ಮತ್ತೆ ನಿಗಮ ಮಂಡಳಿಯ ಅವಕಾಶ ಪಡೆದುಬಿಟ್ಟರು.ಇದರಿಂದ ಕಂಗಾಲಾದ ಬಿ.ಜೆ.ಪಿ.ಶೂದ್ರ ಪಡೆ ಇಂದು ಶಿರಸಿಯಲ್ಲಿ ನಡೆಯಬೇಕಿದ್ದ ಬಿ.ಜೆ.ಪಿ. ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ರದ್ದು ಮಾಡಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದೆ.
ಇದಕ್ಕೂ ಮೊದಲೇ ಬೆಂಗಳೂರಿನಲ್ಲಿ ರಾಜ್ಯ ಬಿ.ಜೆ.ಪಿ. ಅಧ್ಯಕ್ಷ ಕಟೀಲು ವಿನಯ್ ಕುಮಾರ ಜೊತೆ ಚರ್ಚೆ ನಡೆಸಿದೆ.
ಬಿ.ಜೆ.ಪಿ. ಯ ನೀತಿ-ಸಿದ್ಧಾಂತದಂತೆ ಆ ಪಕ್ಷ ಉತ್ತರಕನ್ನಡ ಜಿಲ್ಲೆಯಿಂದ ಕೇಂದ್ರದ ವರೆಗೆ ವೈದಿಕರು ಅಥವಾ ಅವರ ಗುಲಾಮಶೂದ್ರರನ್ನೇ ಪಟ್ಟಕ್ಕೇರಿಸಿದೆ. ಈಗಲೂ ಜಿಲ್ಲಾ ಬಿ.ಜೆ.ಪಿ. ಬಂಡಾಯ ಒಂದು ದಾಖಲೆಯಾಬಹುದು ಬಿಟ್ಟರೆ ಅರ್ಹರಿಗೆ ನ್ಯಾಯ ಸಿಗುವುದು ಕನಸಿನ ಮಾತು.
ಆದರೆ ಪಲ್ಲಕ್ಕಿ ಹೊತ್ತ ಶೂದ್ರ ಶಿಖಾಮಣಿಗಳು ತಮ್ಮದೇ ಪಕ್ಷದ ಜಾತ್ಯಾಂಧ ಸೋಗಲಾಡಿಗಳ ವಿರುದ್ಧ ಬಂಡೆದ್ದಿರುವುದು ಶುಭಸೂಚನೆ. ಈ ಬಂಡಾಯ ಯಲ್ಲಾಪುರ ಉಪಚುನಾವಣೆ ಮತ್ತು ಮುಂದಿನ ಚುನಾವಣೆಗಳ ಮೇಲೆ ದುಷ್ಟರಿಣಾಮ ಬೀರುವುದನ್ನು ಯಾರೂ ಅಲ್ಲಗಳೆಯುತ್ತಿಲ್ಲ. ಆದರೆ ಶೂದ್ರರನ್ನು ಕೊಡಂಗಿಗಳನ್ನಾಗಿ ಕುಣಿಸಿ, ಲಾಭ, ಕೀರ್ತಿ, ಗೌರವ, ಸಂಪತ್ತು ಕೂಡಿಹಾಕಿಕೊಂಡಿರುವ ಜಾತ್ಯಾಂಧ, ಧರ್ಮಾಂಧ ದುಷ್ಟ ವೈದಿಕ ಸೋಗಲಾಡಿ ಸಂಸದ ಮತ್ತು ರಾಜ್ಯವಿಧಾನಸಭಾಧ್ಯಕ್ಷರು ಈ ಬೆಳವಣಿಗಳ ಸಂದರ್ಭದಲ್ಲೂ ಜಾಣ ಕಿವುಡು,ದಿವ್ಯ ಕುರುಡುತನ ಪ್ರದರ್ಶಿಸುತ್ತಿರುವುದು ಅವರ ಸಂಘದ ಹೀನ ನಡವಳಿಕೆಗೆ ಸಾಕ್ಷಿಒದಗಿಸುವಂತಿದೆ.
ಏನಾಗಬಹುದು?- ಉತ್ತರ ಕನ್ನಡ, ಬಳ್ಳಾರಿ,ಕರ್ನಾಟಕದಂತೆ ಇಡೀ ದೇಶದಲ್ಲಿ ಈಗ ನಯವಂಚಕ ಮತಾಂಧ ನಕಲಿದೇಶಭಕ್ತರ ಅಂಧಾದರ್ಬಾರ್ ನಡೆಯುತ್ತಿದೆ.ಈ ಅವಿವೇಕವನ್ನು ಅಲ್ಲಲ್ಲಿ ಪ್ರಶ್ನಿಸುತ್ತಿರುವ ಭಕ್ತರು ಅಲ್ಲಲ್ಲಿ ತಮ್ಮವರಿಂದಲೇ ದೇಶದ್ರೋಹಿ ಪಟ್ಟ ಕಟ್ಟಿಸಿಕೊಳ್ಳುತಿದ್ದಾರೆ. ಈಗ ಉತ್ತರ ಕನ್ನಡದ ಶೂದ್ರರು ನಮಗೆ ನ್ಯಾಯ ಒದಗಿಸಿ ಎಂದು ಬೇಡಿಕೆ ಇಟ್ಟರೆ ಯಲ್ಲಾಪುರ ಉಪಚುನಾವಣೆ ಎದುರಿಗಿರುವುದರಿಂದ ತಾತ್ಕಾಲಿಕ ನ್ಯಾಯ ಸಿಕ್ಕರೂ ಸಿಗಬಹುದು. ಆದರೆ ಈ ಸಂಧಿಕಾಲದಲ್ಲಿ ಅವಕಾಶ ಸಿಗದಿದ್ದರೆ ಶೂದ್ರರು ಸಂಘದ ಪರಿಚಾರಿಕೆ ಮಾಡುತ್ತಾ ಮತಾಂಧ ಸೋಗಲಾಡಿ ಅಧಿಕಾರದಾಹಿಗಳ ಸೇವೆ ಮಾಡುತ್ತಾ ಕಾಲಕಳೆಯಬೇಕಾಗುತ್ತದೆ. ಆದರೆ ಈವರೆಗೆ ದೇಶಪ್ರೇಮ,ರಾಷ್ಟ್ರೀಯತೆ,ಹಿಂದುತ್ವ ಪಠಿಸಿದ ಇದೇ ಭಕ್ತರು ಅಲ್ಲಿಂದ ಹೊರಬಂದು ಹೊಸ ವರೆಸೆ ಪ್ರಾರಂಭಿಸಿದರೆ ಯಾರೂ ನಂಬುವ ಸ್ಥಿತಿಯಲ್ಲಿಲ್ಲ. ಬಳ್ಳಾರಿ, ಉತ್ತರಕನ್ನಡ ಸೇರಿದಂತೆ ರಾಜ್ಯದ ಅನೇಕ ಕಡೆ ಬಿ.ಜೆ.ಪಿ.ಯಲ್ಲಿ ಇಂಥದ್ದೇ ಶೂದ್ರಬಂಡಾಯ ಪ್ರಾರಂಭವಾಗಿದೆ ಎನ್ನುವುದಂತೂ ಈ ಸಮಯದ ಕುತೂಹಲದ ವರ್ತಮಾನ.