

ನಾನೆಂದರೆ ಬಿ.ಜೆ.ಪಿ.ಗೆ ಭಯ
ಜನರಿಂದಲೇ ನನಗೆ ಅಭಯ-ಸಿದ್ಧರಾಮಯ್ಯ
- ಸರ್ಕಾರ ಉಳಿಸಿಕೊಳ್ಳುವ ಮಾತನಾಡಿರುವವರಿಗೆ ಯಾಕೆ? ಹ್ಯಾಗೆ ಉಳಿಸಿಕೊಳ್ಳುತ್ತೀರಿ ಕೇಳಿ. ನೀವು (ಮಾಧ್ಯಮ) ವಿರೋಧಪಕ್ಷದವರಿಗೆ ಕೆಣಕುತ್ತೀರಿ,
- ೧೫ರಲ್ಲಿ ೮ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಶಿಸಿದ್ದೇವೆ ೧೨ ಕ್ಷೇತ್ರಗಳಲ್ಲಿ ನಾವು ನಿಶ್ಚಿತವಾಗಿ ಗೆಲ್ಲುತ್ತೇವೆ. ೧೫ಕ್ಕೆ ೧೫ ಗೆದ್ದರೂ ಆಶ್ಚರ್ಯವಿಲ್ಲ.
- ನಮ್ಮ ಕಾಲದಲ್ಲಿ ಮಂಜೂರಿಯಾದ ಆಶ್ರಯಮನೆಗಳಿಗೆ ನೀಡುವ ಹಣಕ್ಕೆ ಅನುದಾನ ನೀಡಿಲ್ಲ. ರೈತರಿಗೆ ನೀಡುತಿದ್ದ ೫ ರೂಪಾಯಿ ಪ್ರತಿ ಲೀ. ಹಾಲಿನ ಸಬ್ಸಿಡಿ ಏಫ್ರಿಲ್ ನಿಂದ ನೀಡಿಲ್ಲ. ಯಡಿಯೂರಪ್ಪ ಹಸಿರು ಟವೆಲ್ ಹಾಕಿ ರೈತಪರ ಎಂದರೆ ನಡೆಯಲ್ಲ,
- ಮಾಧ್ಯಮಗಳು ಆಡಳಿತದಲ್ಲಿರುವವರ ವಿಫಲತೆ ಹೇಳದೆ ನಮ್ಮಲ್ಲಿ ಭಿನ್ನಮತ ಹುಡುಕುವ ಪ್ರಯತ್ನ ಮಾಡುತಿದ್ದಾರೆ.
- ಈ ಸರ್ಕಾರಕ್ಕೆ ಬಡವರ ಪರ ಕಾಳಜಿ ಇದ್ದರೆ ಇಂದಿರಾಕ್ಯಾAಟೀನ್ ಮುಂದುವರಿಸಲಿ, ಬಡವರಿಗೆ ಅನುಕೂಲವಾಗುವ ಇಂದಿರಾ ಕ್ಯಾಂಟೀನ್ ಬೇಡ ಎನ್ನುವ ಜನವಿರೋಧಿ ಧೋರಣೆ ಈ ಸರ್ಕಾರದ್ದಾದರೆ ಮುಚ್ಚಲಿ.
- ಕೇಂದ್ರ ರಸ್ತೆ ನಿಧಿ ಯಿಂದ ಸಂಸರ‍್ಯಾಕೆ ಅನುದಾನ ತಂದಿಲ್ಲ. ಗೌರವಾನ್ವಿತ ಸ್ಫೀಕರ್ ಕಾಗೇರಿ, ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಅನುದಾನ ಕೇಳಿಲ್ಲ. ಇಲ್ಲಿ ಕೆಲಸಆಗಿಲ್ಲ ವ್ಯವಸ್ಥೆ ಸರಿ ಇಲ್ಲ ಅಂದರೆ ಅದಕ್ಕೆ ಇಲ್ಲಿಯ ಸಂಸದರು,ಶಾಸಕರೇ ಹೊಣೆ.
- ಆಕರ್ಷಕವಾಗಿ ಸುಳ್ಳು ಹೇಳುವವರನ್ನು ಸಂಸದರು,ಶಾಸಕರು ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಉತ್ತರ ಕನ್ನಡ ಉದಾಹರಣೆ. ನೀವ್ಯಾಕೆ (ಉತ್ತರ ಕನ್ನಡ) ಅವರನ್ನು ಗೆಲ್ಲಿಸುತ್ತೀರಿ.
- ಶೋಷಿತರು, ಅವಕಾಶವಂಚಿತರ ಸಭೆ, ಸಮಾರಂಭ, ಸಮಾವೇಶ ಮಾಡುತ್ತೇವೆ.
- ಆಡಳಿತಾತ್ಮಕ ಅನುಕೂಲಕ್ಕಾಗಿ ಪ್ರತ್ಯೇಕ ಜಿಲ್ಲೆ ಬೇಕೆಂದರೆ ಮಾಡಿಕೊಳ್ಳಲಿ.
ಕೇಂದ್ರದ ದೋಷಪೂರಿತ ಆರ್ಥಿಕ ನೀತಿಗಳ ವಿರುದ್ಧ ಜನಾಂದೋಲನ ಮತ್ತು ಉಪಚುನಾವಣೆಯ ಪ್ರಚಾರಾಂದೋಲನಗಳ ಹಿನ್ನೆಲೆಯಲ್ಲಿ ಸೋಮುವಾರ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧಿಪಕ್ಷದ ನಾಯಕ ಸಿದ್ಧರಾಮಯ್ಯ ಜೋಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಈ ಸಮಯದಲ್ಲಿ ಸಮಾಜಮುಖಿ ಪ್ರಶ್ನೆಗಳು ಮತ್ತು ಮಾಧ್ಯಮ ಪ್ರತಿನಿಧಿಗಳ ಸಂಭಾಷಣೆಗೆ ಅವರು ನೀಡಿದ ಪ್ರತಿಕ್ರೀಯೆ,ಮಾಹಿತಿಗಳನ್ನು ಸಂದರ್ಶನ ರೂಪದಲ್ಲಿ ಇಲ್ಲಿ ಸಂಗ್ರಹಿಸಲಾಗಿದೆ.
ಪ್ರ- ಅನರ್ಹ ಶಾಸಕರ ಬಗ್ಗೆ ಬಿ.ಜೆ.ಪಿ. ಆಮಿಷದಿಂದ ಹಾದಿ ತಪ್ಪಿದ ಶಾಸಕರು ಎಂದ್ದಿದ್ದೀರಿ ಯಾಕೆ?
ಸಿದ್ಧರಾಮಯ್ಯ- ನೋಡಿ, ಹಿಂದಿನ ಸರ್ಕಾರದ ಸದಸ್ಯರು,ಈಗ ಅನರ್ಹರಾಗಿರುವವರು ದಾರಿ ತಪ್ಪಿದ್ದು ಸತ್ಯ, ಆದರೆ ಅವರನ್ನು ಆಮಿಷ,ಹಣ, ಅಧಿಕಾರದ ಆಸೆ ತೋರಿಸಿ ಖರೀದಿಸಿದ್ದೇವೆ ಎನ್ನುವ ಸತ್ಯವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆ. ಒಂದು ಆಮಿಷಕ್ಕೊಳಗಾಗಿ ಹಾದಿ ತಪ್ಪಿದ್ದು ಅವರ ತಪ್ಪು, ಮತ್ತೊಂದು ಅವರನ್ನು ದಾರಿತಪ್ಪುವಂತೆ ಪ್ರಚೋದಿಸಿ ಪ್ರಜಾಪ್ರಭುತ್ವದ ಗೌರವ, ಮೌಲ್ಯಗಳಿಗೆ ಅಪಚಾರ ಮಾಡಿದ್ದು ಬಿ.ಜೆ.ಪಿ. ತಪ್ಪು. ಅವರನ್ನು ಮುಂಬೈಗೆ ಕರೆದೊಯ್ದಿದ್ದೇ ನಾವು ಎನ್ನುವ ಸತ್ಯ ಹೊರಹಾಕಿರುವ ಯಡಿಯೂರಪ್ಪ ಅವರ ಪಕ್ಷ ತಪ್ಪು ಮಾಡಿದೆ.
ಪ್ರ-ಬಿ.ಜೆ.ಪಿ. ಮತ್ತದರ ಮುಖಂಡರು ನಿಮ್ಮನ್ನೇ ಗುರಿಮಾಡಿ ಆರೋಪಮಾಡುವುದು, ಕೆಣಕುವುದು ಯಾಕೆ?
ಸಿದ್ಧರಾಮಯ್ಯ- ಬಿ.ಜೆ.ಪಿ. ಮತ್ತದರ ಮುಖಂಡರಿಗೆ ನಾನೆಂದರೆ ಭಯ, ಹಾಗಾಗಿ ನನ್ನನ್ನೇ ಗುರಿಮಾಡಿ ಆರೋಪ, ತೇಜೋವಧೆ ಮಾಡಲಾಗುತ್ತಿದೆ. ಎಮ್ಮೆ ಮೇಯಿಸಿ ಇಲ್ಲಿಯವರೆಗೆ ಬಂದವನು ನಾನು ಯಾರ ಚಿತಾವಣೆ, ದುರುದ್ಧೇಶ, ರಾಜಕೀಯಕ್ಕೆ ಕ್ಯಾರ್ ಮಾಡಲ್ಲ.
ಪ್ರ- ಉಪಚುನಾವಣೆಯಲ್ಲಿ ಎಷ್ಟು ಕ್ಷೇತ್ರ ಗೆಲ್ಲುತ್ತೀರಿ?
ಸಿದ್ಧರಾಮಯ್ಯ- ಮತದಾರರು ನಮ್ಮನ್ನು ಗೆಲ್ಲಿಸುವ ತೀರ್ಮಾನ ಮಾಡಿದ್ದಾರೆ.೧೫ರಲ್ಲಿ ೮ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಶಿಸಿದ್ದೇವೆ ೧೨ ಕ್ಷೇತ್ರಗಳಲ್ಲಿ ನಾವು ನಿಶ್ಚಿತವಾಗಿ ಗೆಲ್ಲುತ್ತೇವೆ. ೧೫ಕ್ಕೆ ೧೫ ಗೆದ್ದರೂ ಆಶ್ಚರ್ಯವಿಲ್ಲ.
ಪ್ರ-ನಿಮ್ಮ ಪಕ್ಷದಲ್ಲಿನ ಭಿನ್ನಮತ?
ಸಿದ್ಧರಾಮಯ್ಯ- ಭಿನ್ನಮತವಿಲ್ಲ, ಕೆಲವು ಅಭಿಪ್ರಾಯ ಭೇದಗಳಿರಬಹುದು. ಮಾಧ್ಯಮಗಳು ಆಡಳಿತದಲ್ಲಿರುವವರ ವಿಫಲತೆ ಹೇಳದೆ ನಮ್ಮಲ್ಲಿ ಭಿನ್ನಮತ ಹುಡುಕುವ ಪ್ರಯತ್ನ ಮಾಡುತಿದ್ದಾರೆ.
ಪ್ರ-ಹೊಸಸರ್ಕಾರ ಹ್ಯಾಗೆ ಕಾರ್ಯನಿರ್ವಹಿಸುತ್ತಿದೆ.
ಸಿದ್ಧರಾಮಯ್ಯ- ಎಲ್ಲಿದೆ ಸರ್ಕಾರ. ಪ್ರವಾಹ ಪೀಡಿತ ಪ್ರದೇಶದ ಅನಿವಾರ್ಯ ಕೆಲಸಗಳು ಆಗುತ್ತಿಲ್ಲ. ನಮ್ಮ ಕಾಲದಲ್ಲಿ ಮಂಜೂರಿಯಾದ ಆಶ್ರಯಮನೆಗಳಿಗೆ ನೀಡುವ ಹಣಕ್ಕೆ ಅನುದಾನ ನೀಡಿಲ್ಲ. ರೈತರಿಗೆ ನೀಡುತಿದ್ದ ೫ ರೂಪಾಯಿ ಪ್ರತಿಲೀ, ಹಾಲಿನ ಸಬ್ಸಿಡಿ ಏಫ್ರಿಲ್ ನಿಂದ ನೀಡಿಲ್ಲ. ಯಡಿಯೂರಪ್ಪ ಹಸಿರು ಟವೆಲ್ ಹಾಕಿ ರೈತಪರ ಎಂದರೆ ನಡೆಯಲ್ಲ, ರೈತಪರವಾಗಿ ಆಡಳಿತ ನಡೆಸಬೇಕು. ರಾಜ್ಯದಲ್ಲಿ ಹಾಲಿನ ಸಬ್ಸಿಡಿ ೮೦೦ ಕೋಟಿ ಬಿಡುಗಡೆಯಾಗಿಲ್ಲ.೧೦೦ ದಿವಸಗಳಲ್ಲಿ ಮಾಡಿದ ಕೆಲಸ ಹೇಳಲು ಅವರ ಬಳಿ ಏನೂ ಇಲ್ಲ.
ಪ್ರ- ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತೀರಾ?
ಸಿದ್ಧರಾಮಯ್ಯ- ಪಾದಯಾತ್ರೆ ಯೋಜಿಸುತಿದ್ದೇವೆ. ಸರ್ಕಾರದ ವಿರುದ್ಧ ಮಾತನಾಡುತಿದ್ದೇವೆ ಆದರೆ ಮಾಧ್ಯಮಗಳು ನಮ್ಮ ವಿರೋಧ, ಹೋರಾಟಗಳ ಪ್ರಚಾರ ಮಾಡುತ್ತಿಲ್ಲ. - https://www.youtube.com/watch?v=5o3h3H7WV9Q&t=60s
ಪ್ರ- ನಿಮ್ಮ ಸರ್ಕಾರದ ಇಂದಿರಾಕ್ಯಾAಟೀನ್ ಮುಚ್ಚುತ್ತಿವೆಯಂತೆ?
ಸಿದ್ಧರಾಮಯ್ಯ- ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿದ್ದು, ನಡೆಸಿದ್ದು ಬಡವರಿಗಾಗಿ ಈ ಸರ್ಕಾರಕ್ಕೆ ಬಡವರ ಪರ ಕಾಳಜಿ ಇದ್ದರೆ ಇಂದಿರಾಕ್ಯಾAಟೀನ್ ಮುಂದುವರಿಸಲಿ, ಬಡವರಿಗೆ ಅನುಕೂಲವಾಗುವ ಇಂದಿರಾ ಕ್ಯಾಂಟೀನ್ ಬೇಡ ಎನ್ನುವ ಜನವಿರೋಧಿ ಧೋರಣೆ ಈ ಸರ್ಕಾರದ್ದಾದರೆ ಮುಚ್ಚಲಿ.
ಪ್ರ- ಉತ್ತರ ಕನ್ನಡ ಸೇರಿದಂತೆ ರಾಜ್ಯದ ರಸ್ತೆಗಳ ಸ್ಥಿತಿ ಚಿಂತಾಜನಕವಾಗಿದೆಯಲ್ಲ
ಸಿದ್ಧರಾಮಯ್ಯ- ಏನು ಮಾಡುತ್ತಿದೆ ಸರ್ಕಾರ? ಆರು ಬಾರಿ ಸಂಸದರಾದ ಅನಂತಕುಮಾರ ಹೆಗಡೆ ಮಾಡುವುದು ಬೆಂಕಿ ಹಚ್ಚುವ ಕೆಲಸ, ಕೇಂದ್ರ ರಸ್ತೆ ನಿಧಿ ಯಿಂದ ಸಂಸರ‍್ಯಾಕೆ ಅನುದಾನ ತಂದಿಲ್ಲ. ಗೌರವಾನ್ವಿತ ಸ್ಫೀಕರ್ ಕಾಗೇರಿ ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಅನುದಾನ ಕೇಳಿಲ್ಲ. ಇಲ್ಲಿ ಕೆಲಸಆಗಿಲ್ಲ ವ್ಯವಸ್ಥೆ ಸರಿ ಇಲ್ಲ ಅಂದರೆ ಅದಕ್ಕೆ ಇಲ್ಲಿಯ ಸಂಸದರು,ಶಾಸಕರೇ ಹೊಣೆ.
ಪ್ರ- ಸ್ಫೀಕರ್ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆಯಲ್ಲ.
ಸಿದ್ಧರಾಮಯ್ಯ- ನಾವೆಲ್ಲಾ ಹಳ್ಳಿ ಜನ ಮಾತನಾಡುತ್ತಾ ಏಕವಚನ ಪ್ರಯೋಗವಾಗಿದೆ. ದೇವರು, ನಮ್ಮ ಅಪ್ಪ ಎಲ್ಲರಿಗೂ ಏಕವಚನದಲ್ಲೇ ಮಾತನಾಡುತ್ತೇವಲ್ಲ. ಎಲ್ಲೋ ನಾಲಿಗೆ ತಪ್ಪಿ ಅದು ನಡೆದಿದೆ. ಎಷ್ಟು ಸರ್ಕಾರ, ಎಷ್ಟು ಮುಖ್ಯಮಂತ್ರಿಗಳು, ಸಭಾಪತಿಗಳನ್ನು ನೋಡಿಲ್ಲ ನಾನು. ನೆರೆ, ಪ್ರವಾಹ ಪರಿಹಾರ ದುಸ್ಥಿತಿ ಬಗ್ಗೆ ಮಾತನಾಡುವಾಗ ಸಮಯಮಿತಿ ನೀಡಬಾರದು. ಈ ಕಾರಣಕ್ಕೆ ಮಾತಿನ ರಭಸದಲ್ಲಿ ತಪ್ಪಾಗಿದೆ. ಗೌರವಾನ್ವಿತ ಸಭಾಪತಿಗಳು ಜನಪರವಾಗಿ ಕೆಲಸಮಾಡಲಿ. ಆಕರ್ಷಕವಾಗಿ ಸುಳ್ಳು ಹೇಳುವವರನ್ನು ಸಂಸದರು,ಶಾಸಕರು ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಉತ್ತರ ಕನ್ನಡ ಉದಾಹರಣೆ.
ನೀವ್ಯಾಕೆ (ಉತ್ತರ ಕನ್ನಡ) ಅವರನ್ನು ಗೆಲ್ಲಿಸುತ್ತೀರಿ. ಕೆಲಸಮಾಡದೆ ಆರೆಸೆಸ್ಸಿಗರಂತೆ ಸುಳ್ಳುಹೇಳುವವರನ್ನು ಆಯ್ಕೆ ಮಾಡಿದರೆ ಅದರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ.
ಪ್ರ-ಮತ್ತೆ ಅಹಿಂದ್ ಪ್ರಾರಂಭಿಸುತ್ತೀರಾ?
ಸಿದ್ಧರಾಮಯ್ಯ- ಶೋಷಿತರು, ಅವಕಾಶವಂಚಿತರ ಸಭೆ, ಸಮಾರಂಭ, ಸಮಾವೇಶ ಮಾಡುತ್ತೇವೆ. ಸ್ವಾತಂತ್ರö್ಯ ದೊರೆತು ೭೨ ವರ್ಷಗಳಾದರೂ ಶೋಷಿತರು ಶೋಷಿತರಾಗೇ ಉಳಿಯಬೇಕೇ?
ಪ್ರ- ಶಿರಸಿಪ್ರತ್ಯೇಕ ಜಿಲ್ಲೆ ಬೇಡಿಕೆಗೆ ನಿಮ್ಮ ಸಹಕಾರವಿದೆಯೇ?
ಸಿದ್ಧರಾಮಯ್ಯ- ಆಡಳಿತಾತ್ಮಕ ಅನುಕೂಲಕ್ಕಾಗಿ ಪ್ರತ್ಯೇಕ ಜಿಲ್ಲೆ ಬೇಕೆಂದರೆ ಮಾಡಿಕೊಳ್ಳಲಿ. ನಾವು ಜೆ.ಎಚ್. ಪಟೇಲ್ ಮುಖ್ಯಮಂತ್ರಿಗಳಾಗಿದ್ದಾಗ ಹೊಸ ಜಿಲ್ಲೆಗಳನ್ನು ಮಾಡಿದ್ದೇವೆ.
ಪ್ರ- ಉಪಚುನಾವಣೆಗೆ ತಯಾರಿ ಹೇಗೆ ನಡೆದಿದೆ.
ಸಿದ್ಧರಾಮಯ್ಯ- ನಡೆಯುತ್ತಿದೆ. ಉಪಚುನಾವಣೆಗೆ ನಮ್ಮ ಪರ ಉತ್ತಮ ಪ್ರತಿಕ್ರೀಯೆಯೂ ವ್ಯಕ್ತವಾಗುತ್ತಿದೆ. ವಿರೋಧ ಪಕ್ಷವಾಗಿ ಪ್ರಾಮಾಣಿಕವಾಗಿ ಜನರ ಪರ ಕೆಲಸಮಾಡುತಿದ್ದೇವೆ.ಈ ಉಪಚುನಾವಣೆಯಲ್ಲಿ ಬಿ.ಜೆ.ಪಿ. ಕನಿಷ್ಟ ೮ ಕ್ಷೇತ್ರಗಳನ್ನು ಗೆಲ್ಲಬೇಕು. ಕಡಿಮೆಯಾದರೆ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಈ ಹಿನ್ನೆಲೆಯಲ್ಲಿ ಮತ್ತೆ ಚುನಾವಣೆ ನಡೆಯಲಿದೆ ಎಂದಿದ್ದೇನೆ. ಸರ್ಕಾರ ಉಳಿಸಿಕೊಳ್ಳುವ ಮಾತನಾಡಿರುವವರಿಗೆ ಯಾಕೆ? ಹ್ಯಾಗೆ ಉಳಿಸಿಕೊಳ್ಳುತ್ತೀರಿ ಕೇಳಿ. ನೀವು (ಮಾಧ್ಯಮ) ವಿರೋಧಪಕ್ಷದವರಿಗೆ ಕೆಣಕುತ್ತೀರಿ, ಆಡಳಿತ ಪಕ್ಷವನ್ನು ಕೆಣಕಿ, ಅವರಿಂದ ಉತ್ತಮ ಕೆಲಸ ಆಗುವಂತೆ ಪ್ರಯತ್ನಿಸಿ, ಉತ್ತೇಜಿಸಿ,ಅದು ಬಿಟ್ಟು ನಮ್ಮನ್ನೇ ಗುರಿಯಾಗಿಸಿದರೆ ಉತ್ತಮ ಕೆಲಸ ನಡೆಯುತ್ತಾ?



