

ಶುಭಾಶಯಗಳು-
ನಮ್ಮ ಹಿರಿಯ ಮಗಳು ಅರುಂಧತಿ(ಸಸ್ಯಸ0ಹಿತಾ)ಗೆ ಇಂದು ಮೂರನೇ ಹುಟ್ಟುಹಬ್ಬದ ಆಚರಣೆ ಸಂಬ್ರಮ, ಅವಳ ಉಜ್ವಲ ಭವಿಷ್ಯಕ್ಕೆ ಶುಭಹಾರೈಕೆಗಳು, ಎಲ್ಲಾ ಹಿತೈಶಿಗಳು,
ಬಂಧು ಮಿತ್ರರ ಪರವಾಗಿ-
ಗಾಯತ್ರಿ & ಕನ್ನೇಶ್, ಕೋಲಶಿರ್ಸಿ,ಅವರಗುಪ್ಪಾ,ಸಿದ್ಧಾಪುರ (ಉ.ಕ.)

ತೋಟದ ವಾತಾವರಣ ಸೃಷ್ಟಿಸಿ ಕಾನಗೋಡಿನ ಪ್ರಗತಿಪರ ಕೃಷಿಕರಾದ ಪ್ರಭಾಕರ
ಕೃಷಿಯೇ ಖುಷಿ ಎನ್ನುವ ಡೋಂಗ್ರೆ
ಸಿದ್ಧಾಪುರ ತಾಲೂಕಿನ ಚಂದ್ರಗುತ್ತಿ ಸಮೀಪದ ಕಾನಗೋಡು ಭತ್ತ ಬೆಳೆಯುವ ಪ್ರದೇಶ.ಈಭಾಗದಲ್ಲಿ ಕೃಷಿ ಕೂಲಿ, ಕಾರ್ಮಿಕರ ಕೊರತೆ ಅಷ್ಟಾಗಿಲ್ಲ.ಆದರೆ ಪ್ರಭಾಕರ ಡೋಂಗ್ರೆ ಕಡಿಮೆ ಕೂಲಿ ಬಳಕೆಯಲ್ಲಿ ಆಧುನಿಕ ಲಘು ಕೃಷಿ ಯಂತ್ರಗಳನ್ನೇ ಬಳಸಿ ಕೃಷಿಯನ್ನು ಸುಲಭವಾಗಿಸಿಕೊಂಡಿದ್ದಾರೆ. ರಾಸಾಯನಿಕಗೊಬ್ಬರ,ಕ್ರಿಮಿನಾಶಕಗಳನ್ನು ನೀರಿನೊಂದಿಗೆ ಬೆರೆಸಿ ಕಡಿಮೆ ದುಷ್ಫರಿಣಾಮದಿಂದ ಲಾಭದಾಯಕ ಕೃಷಿಯ ಒಗಟನ್ನು ಬಿಡಿಸಿಕೊಂಡಿದ್ದಾರೆ.






